­

ಸಾಯುವುದಾದರೆ ಶುದ್ಧ ನೀರಿಗಾಗಿ ಹೋರಾಟ ಮಾಡಿಯೇ ಸಾಯುತ್ತೇವೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ: ದೊಡ್ಡಬಳ್ಳಾಪುರ ತಾಲೂಕಿನ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ( ದೊಡ್ಡ ತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿಯ ಕೆರೆ ಹೋರಾಟ ಸಮಿತಿ )ವತಿಯಿಂದ ಇಂದು ದೊಡ್ಡಬಳ್ಳಾಪುರ ನಗರ ಭಾಗದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸತೀಶ್ ಮಾತನಾಡಿ ದೊಡ್ಡ ತುಮಕೂರು ಮತ್ತು ಮಜರ ಹೊಸಹಳ್ಳಿ ಗ್ರಾಮ ಪಂಚಾಯಿತಿಗಳ ಕೆರೆ ನೀರಿನಿಂದ ಹಿಡಿದು ಶುದ್ಧ ಕುಡಿಯುವ ನೀರಿನ ಘಟಕದವರೆಗೂ ಸಂಪೂರ್ಣ ಕಲುಷಿತ ಗೊಂಡಿದೆ ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ದೊಡ್ಡ ತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಮಗಳ ಪ್ರತಿ ಮನೆ ಮನೆಗೆ ತೆರಳಿ ಸಹಿ ಸಂಗ್ರಹಿಸಿ ಚುನಾವಣಾಧಿಕಾರಿಗಳಿಗೆ ನೀಡಿದ್ದು ಸದರಿ ಸಮಸ್ಯೆಗೆ ಸ್ಪಂದಿಸಿದ ಚುನಾವಣಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ನೀರನ್ನು ಪರೀಕ್ಷಿಸಿ ಜಕ್ಕಲಮಡುಗು ನೀರನ್ನು ನೀಡಲು ಆದೇಶ ನೀಡಿದ್ದರು ಆದರೆ ಚುನಾವಣೆಯಲ್ಲಿ ಶುದ್ಧ ನೀರು ಕೊಟ್ಟು ಜನರ ಕೈಯಿಂದ ಮತ ಪಡೆದು ಇಂದು ನೀರು ನಿಲ್ಲಿಸುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟರು.ರಾಜಕಾರಣಿಗಳಂತೆ ಅದಿಕಾರಿಗಳು ಮಾತು ತಪ್ಪಿರುವುದು ಸರಿಯಲ್ಲ

ಈಗಾಗಲೇ ಹಳ್ಳಿಗಳಲ್ಲಿ ಯುವಕರಲ್ಲಿ ಕ್ಯಾನ್ಸರ್ ಕಿಡ್ನಿ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿದೆ ಆದ್ದರಿಂದ ಸಾಯುವುದಾದರೆ ಶುದ್ಧ ನೀರಿಗಾಗಿ ಹೋರಾಟ ಮಾಡಿಯೇ ಸಾಯೋಣ ಎಂದು ಗ್ರಾಮಸ್ಥರು ತೀರ್ಮಾನಕ್ಕೆ ಬಂದು ದಿನಾಂಕ 19/6/2023ರ ಸೋಮವಾರದಿಂದ ಉಪವಾಸ ಸತ್ಯಾಗ್ರಹವನ್ನು ತಾಲೂಕು ಕಚೇರಿ ಮುಂಭಾಗ ನಡೆಸಲು ತೀರ್ಮಾನಿಸಲಾಗಿದೆ ಎಂದು ಗ್ರಾಮದ ಮುಖಂಡರು ತಿಳಿಸಿದರು

ಈ ಸಂದರ್ಭದಲ್ಲಿ ಗ್ರಾಮಗಳ ಮುಖಂಡರಾದ ವಿಜಿ ಕುಮಾರ್, ಸತೀಶ್, ಮುನಿಕೃಷ್ಣಪ್ಪ ,ರಮೇಶ್ ಮತ್ತಿತರರು ಉಪಸ್ಥಿತರಿದ್ದರು