ದೊಡ್ಡತುಮಕೂರು ಗ್ರಾಮದಲ್ಲಿ ನಾಳೆ ವಿದ್ಯುತ್ ಗ್ರಾಹಕರ ಅದಾಲತ್
ದೊಡ್ಡಬಳ್ಳಾಪುರ ನಗರ ಉಪ ವಿಭಾಗ, ಬಾಶೆಟ್ಟಿಹಳ್ಳಿ ಶಾಖಾ ವ್ಯಾಪ್ತಿಯ ದೊಡ್ಡತುಮಕೂರು ವ್ಯಾಪ್ತಿಯಲ್ಲಿ ನಾಳೆ ವಿದ್ಯುತ್ ಪೂರೈಕೆ ಕುಂದುಕೊರತೆ ಸಭೆ ಏರ್ಪಡಿಸಲಾಗಿದೆ.
ತಾಲ್ಲೂಕಿನ ದೊಡ್ಡತುಮಕೂರು ಪಂಚಾಯಿತಿ ಕಛೇರಿಯಲ್ಲಿ ಎಲ್ಲಾ ಗ್ರಾಹಕರು ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ವಿಷಯವಾಗಿ ತಮ್ಮ ಕುಂದು-ಕೊರತೆ, ನ್ಯೂನ್ಯತೆಗಳು ಇದ್ದಲ್ಲಿ ಪರಸ್ಪರ ಚರ್ಚಿಸಿ ಸ್ನೇಹಪೂರ್ವಕವಾಗಿ ಪರಿಹರಿಸಿಕೊಳ್ಳಲು ಉತ್ತಮ ಸಲಹೆ, ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವ ಸಲುವಾಗಿ ಬೆವಿಕಂ ವತಿಯಿಂದ ನಾಳೆ, ದಿನಾಂಕ:17.06.2023 ರ ಶನಿವಾರದಂದು ವಿದ್ಯುತ್ ಅದಾಲತ್ನ್ನು ನಡೆಸಲಾಗುತ್ತಿದೆ.
ಸಭೆಯಲ್ಲಿ ದೊಡ್ಡತುಮಕೂರು ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶದ ಎಲ್ಲಾ ಗ್ರಾಹಕರು ಪಾಲ್ಗೊಂಡು ವಿದ್ಯುತ್ ಅಧಾಲತ್ನ್ನು ಯಶಸ್ವಿಗೊಳಿಸಬೇಕೆಂದು ಬೆವಿಕಂ ಪ್ರಕಟಣೆಯಲ್ಲಿ ಕೋರಿದೆ.