ವಿದ್ಯುತ್ ದರ ಏರಿಕೆ ರದ್ದು ಮಾಡಲು ಕರ್ನಾಟಕ ರಾಜ್ಯ ನೇಕಾರರ ಹಿತ ರಕ್ಷಣಾ ಸಮಿತಿ ಆಗ್ರಹ….

ದೊಡ್ಡಬಳ್ಳಾಪುರ… ವಿದ್ಯುತ್ ದರ ಏರಿಕೆಯನ್ನು ಸರ್ಕಾರ ಈ ಕೂಡಲೇ ರದ್ದು ಮಾಡಬೇಕು ಇದರಿಂದ ರಾಜ್ಯದ ನೇಕಾರರಿಗೆ ಹೆಚ್ಚು ತೊಂದರೆಯಾಗುತ್ತದೆ. ಅದ್ದರಿಂದ ವಿದ್ಯುತ್ ದರ ವನ್ನು ಮರು ಪರಿಷ್ಕರಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ನೇಕಾರ ಹಿತ ರಕ್ಷಣಾ ಸಮಿತಿ ಸರ್ಕಾರವನ್ನು ಅಗ್ರಹಿಸಿದೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಹಿತರಕ್ಷಣ ಸಮಿತಿ ಅಧ್ಯಕ್ಷ ಪಿ. ಎ. ವೆಂಕಟೇಶ್ ಮಾತನಾಡಿ ಜಿ ಎಸ್. ಟಿ ಹೊಡೆತದಿಂದ ನೇಕಾರಿಕೆ ಉದ್ಯಮ ನೆಲ ಕಚ್ಚಿತ್ತು. ಅದರಲ್ಲೂ ಕೊರೋನ ಸಂದರ್ಭದಲ್ಲಂತು ನೇಕಾರರು ಪಟ್ಟ ಪಾಡು ಅಷ್ಟಿಷ್ಟಲ್ಲ. ಹಾಗೂ ಹೀಗೂ ಸ್ವಲ್ಪ ಮಟ್ಟಿನ ಚೇತರಿಕೆ ಕಾಣಬಹುದು ಎಂದು ನಿರೀಕ್ಷೆಯಲ್ಲಿದ್ದ ನೇಕಾರರಿಗೆ ವಿದ್ಯುತ್ ದರ ಏರಿಕೆ ನುಂಗಲಾರದ ತುತ್ತಾಗಿದೆ. ಮೊದಲೇ ಹಾಕಿರುವ ಬಂಡವಾಳ ವಾಪಾಸ್ ಬರುತ್ತಿಲ್ಲ. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ಕೆಲವು ಪಟ್ಟಭದ್ರ ಹಿತಾಸಕ್ತಿ ಗಳು 1500ಬೆಲೆ ಬಾಳುವ ಸೀರೆಯನ್ನು 700,800ರೂಗಳಿಗೆ ತಂದು ಇಳಿಸಿದ್ದಾರೆ. ಹೀಗಾಗಿ ನೇಕಾರರು ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಜೊತೆಗೆ ವಿದ್ಯುತ್ ಏರಿಕೆ ನೇಕಾರರ ಜಂಗಬಲವನ್ನೇ ಉಡುಗಿಸಿದೆ.
ಪ್ರಸ್ತುತ ಪ್ರತಿ ಯುನಿಟಿಗೆ 4ರುಗಳಿಂದ 7ರೂಗೆ ಏರಿಸಿ ಜನಸಾಮಾನ್ಯರ ಮೇಲೆ ಹೊರೆ ಹಾಕಲಾಗಿದೆ. ಐದಾರು ಸ್ಲಾಬ್ಗಳಲ್ಲಿ ಏರಿಕೆಯಾಗಬೇಕಿದ್ದ ದರ ಕೇವಲ ಎರಡೇ ಹಂತಗಳಿಗೆ ಬದಲಿಸಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಆಶ್ಚರ್ಯವೆಂದರೆ 3.75ಇದ್ದಾಗ ಸರ್ಕಾರ ನೇಕಾರರಿಗೆ 1.25 ರೂ ಸಬ್ಸಿಡಿ ಕೊಡುತ್ತಿತ್ತು. ಈಗ ದರ ಏರಿಕೆಯಾದರೂ ಸಬ್ಸಿಡಿ ಮಾತ್ರ ಅಷ್ಟೇ ಇದೇ. ಈಗ ಮತ್ತೆ 7ರೂ ಏರಿಕೆಯಾಗಿದೆ. ಇದು ನೇಕಾರರ ಬದುಕಿಗೆ ಕೊಳ್ಳಿ ಇಟ್ಟಂತಾಗಿದೆ. ಎಂದು ಆಕ್ರೋಶ ವ್ಯಕ್ತಪಡಿಸಿದ ವೆಂಕಟೇಶ್, ಹಿಂದಿನ ಬಿ. ಜೆ. ಪಿ ಸರ್ಕಾರ ನೇಕಾರರಿಗೆ ಗುರುತಿನ ಚೀಟಿ ಕೊಡುವ ಭರವಸೆ ನೀಡಿತ್ತು. ಇದಕ್ಕಾಗೆ ನೇಕಾರರ ಸರ್ವೇ ಕೂಡಾ ಮಾಡಲಾಗಿತ್ತು. ಆದರೆ ಕಾರ್ಡ್ ವಿತರಿಸದೆ ವಿಳಂಬ ದೋರಣೆ ತಾಳಿತು. ನೇಕಾರರಿಗೆ ಕಾರ್ಡ್ ವಿತರಣೆಯಾದರೆ ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸವಲತ್ತು ನೇಕಾರರಿಗೂ ಸಿಗುತ್ತದೆ. ಇದರಿಂದ ತುರ್ತಾಗಿ ನೇಕಾರ ಕಾರ್ಡ್ ವಿತರಣೆ ಆಗಬೇಕಿದೆ. ಒಂದುವೇಳೆ ದರೆ ಏರಿಕೆ ಪರಿಸ್ಕರಣೆ ಮಾಡದಿದ್ದರೆ ತಾಲೂಕಿನ ಇತರೆ ನೇಕಾರ ಸಂಘಗಳ ಒಗ್ಗೂಡಿಸಿ ನೇಕಾರ ಒಕ್ಕೂಟದೊಂದಿಗೆ ತೀವ್ರ ಹೋರಾಟ ಮಾಡಲಾಗುವುದೆಂದು ವೆಂಕಟೇಶ್ ಹೇಳಿದರು.
ಶ್ರೀನಿವಾಸ್, ಸುರೇಶ್, ಮಲ್ಲೇಶ್, ಚೌಡಯ್ಯ, ರಘು, ರಮಣ, ಮುನಿರಾಜು ಮುಂತಾದವರು ಸುದ್ದಿಗೊಷ್ಟಿಯಲ್ಲಿ ಹಾಜರಿದ್ದರು.