ವಿದ್ಯುತ್ ದರ ಏರಿಕೆ ಅವೈಜ್ಞಾನಿಕ... ಬೆಂಗಳೂರು... ಪ್ರಸ್ತುತ ಜೂನ್ ತಿಂಗಳಲ್ಲಿ ಬಂದಿರುವ ಕರೆಂಟ್ ಬಿಲ್ ಸಾರ್ವಜನಿಕರಿಗೆ ಶಾಕ್ ತರಿಸಿದೆ. ಏಪ್ರಿಲ್ ನಲ್ಲಿ ಬಂದ ಬಿಲ್ಲಿಗೂ ಜೂನ್ ತಿಂಗಳಲ್ಲಿ ಬಂದ ಬಿಲ್ಲಿಗೂ ತಾಳೆ ಹಾಕಿದರೆ ದುಪ್ಪಟ್ಟು ಏರಿಕೆ ಯಾಗಿರುವುದು ಕಂಡುಬರುತ್ತದೆ. ಆಶ್ಚರ್ಯವೆಂದರೆ ಸಾರ್ವಜನಿಕರಿಗೆ ಯಾವುದೇ ಮುನ್ಸೂಚನೆ ನೀಡದೆ ಬೆಸ್ಕಾಮ್ ದರ ಏರಿಸಿರುವುದು, ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟ ಜನಸಾಮಾನ್ಯರಿಗೆ ಗಾಯದ ಮೇಲೆ ಬರೇ ಎಳೆದಂತಾಗಿದೆ. ನೂತನವಾಗಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಪ್ರಾರಂಭದಲ್ಲೇ ವಿದ್ಯುತ್ ದರ ಏರಿಕೆಯಾಗಿರುವುದು ಕಾಂಗ್ರೇಸ್ಗೆ ಬಹುಮತ ನೀಡಿದ ರಾಜ್ಯ ಮತದಾರನಿಗೆ ಭ್ರಮ ನಿರಸವಾಗಿದೆ. ಬೆಸ್ಕಾಮ್ನ ಮೂಲಗಳ ಪ್ರಕಾರ ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಕೊನೆಯಲ್ಲಿ ಅಂದರೆ ಏಪ್ರಿಲ್ 12ರಂದೆ ವಿದ್ಯುತ್ ಚಕ್ತಿ ನಿಯಂತ್ರಣ ಮಂಡಳಿಯ ದರ ಏರಿಕೆ ಪ್ರಸ್ತಾವಕ್ಕೆ ಬೊಮ್ಮಾಯಿ ಅಸ್ತು ಎಂದಿದ್ದರು. ವಿಧಾನಸಭೆ ಚುನಾವಣೆ ಘೋಷಣೆ ಯಾಗಿ ನೀತಿ ಸಂಹಿತೆ ಜಾರಿಯಲ್ಲಿದ್ದ ಪ್ರಯುಕ್ತ ಬೆಲೆ ಏರಿಕೆ ಆದೇಶ ಜಾರಿಗೆ ತಂದಿರಲಿಲ್ಲ. ಚುನಾವಣೆ ಮುಗಿದ ನಂತರ ಅಂದರೆ ಮೇ 12ರಂದು ಆದೇಶ ಜಾರಿಗೆ ಬಂದಿದೆ ಎನ್ನಲಾಗುತ್ತಿದೆ. ಅದೇನೇ ಇರಲಿ ಸಿದ್ದು ಸರ್ಕಾರ ಪ್ರಕಟಿಸಿದ ಗೃಹಜ್ಯೋತಿ ಯೋಜನೆಯ ಪ್ರಕಾರ ಕೆಲವು ಶರತ್ತುಗಳನ್ವಯ ರಾಜ್ಯದ ಎಲ್ಲರಿಗೂ 200ಯೂನಿಟ್ ವಿದ್ಯುತ್ ಫ್ರೀ ಎಂದು ಕುದ್ದು ಮುಖ್ಯಮಂತ್ರಿ ಸಿದ್ದು ಪ್ರಕಟಿಸಿರುವ ಬೆನ್ನಲ್ಲೇ ವಿದ್ಯುತ್ ದರ ಏರಿಕೆಯಾಗಿರುವುದು ಆಕ್ಷೇಪರ್ಹ ಸಂಗತಿಯಾಗಿದೆ. ವಿದ್ಯುತ್ ದರ ಏರಿಕೆಗೆ ಸರಿಯಾದ ಮಾನ ದಂಡಗಳಿಲ್ಲ. ಅದಕ್ಕೆ ಕೊಟ್ಟಿರುವ ಕಾರಣ ಕೂಡಾ ಸಮರ್ಪಕವಾಗಿಲ್ಲ. ಎಲ್ಲವೂ ಅವೈಜ್ಞಾನಿಕವಾಗಿದೆ. ಏಪ್ರಿಲ್ನ ಸಚಿವ ಸಂಪುಟ ನಿರ್ಧಾರದ ದಿನದಿಂದ ಹಳೆಯ ದರವನ್ನು ಪಕ್ಕಕ್ಕಿಟ್ಟು ಹೊಸ ದರ ವಿಧಿಸಿದ್ದಾರೆ. ಕೆಲವು ಕಡೆ ಮೇ ತಿಂಗಳ ಬಿಲ್ ಬಂದಿಲ್ಲ. ಆದರೆ ಜೂನ್ ತಿಂಗಳ ಬಿಲ್ಲಿನಲ್ಲಿ ಎರಡು ತಿಂಗಳ ಬಿಲ್ ಒಟ್ಟಿಗೆ ಹಾಕಿ ಅದಕ್ಕೆ ಬಡ್ಡಿ ಸೇರಿಸಿ, ಮಿನಿಮಮ್ ದರ ಕೂಡಾ ಹೆಚ್ಚಿಸಿರುವುದು, ಜೊತೆಗೆ ದರ ದುಪ್ಪಟ್ಟು ಮಾಡಿ ಬಿಲ್ ಕೊಟ್ಟಿರುವುದು ನಿಜಕ್ಕೂ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.ವಿದ್ಯುತ್ ದರ ಏರಿಕೆ ಅವೈಜ್ಞಾನಿಕ…

ಬೆಂಗಳೂರು… ಪ್ರಸ್ತುತ ಜೂನ್ ತಿಂಗಳಲ್ಲಿ ಬಂದಿರುವ ಕರೆಂಟ್ ಬಿಲ್ ಸಾರ್ವಜನಿಕರಿಗೆ ಶಾಕ್ ತರಿಸಿದೆ. ಏಪ್ರಿಲ್ ನಲ್ಲಿ ಬಂದ ಬಿಲ್ಲಿಗೂ ಜೂನ್ ತಿಂಗಳಲ್ಲಿ ಬಂದ ಬಿಲ್ಲಿಗೂ ತಾಳೆ ಹಾಕಿದರೆ ದುಪ್ಪಟ್ಟು ಏರಿಕೆ ಯಾಗಿರುವುದು ಕಂಡುಬರುತ್ತದೆ. ಆಶ್ಚರ್ಯವೆಂದರೆ ಸಾರ್ವಜನಿಕರಿಗೆ ಯಾವುದೇ ಮುನ್ಸೂಚನೆ ನೀಡದೆ ಬೆಸ್ಕಾಮ್ ದರ ಏರಿಸಿರುವುದು, ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟ ಜನಸಾಮಾನ್ಯರಿಗೆ ಗಾಯದ ಮೇಲೆ ಬರೇ ಎಳೆದಂತಾಗಿದೆ.
ನೂತನವಾಗಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಪ್ರಾರಂಭದಲ್ಲೇ ವಿದ್ಯುತ್ ದರ ಏರಿಕೆಯಾಗಿರುವುದು ಕಾಂಗ್ರೇಸ್ಗೆ ಬಹುಮತ ನೀಡಿದ ರಾಜ್ಯ ಮತದಾರನಿಗೆ ಭ್ರಮ ನಿರಸವಾಗಿದೆ. ಬೆಸ್ಕಾಮ್ನ ಮೂಲಗಳ ಪ್ರಕಾರ ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಕೊನೆಯಲ್ಲಿ ಅಂದರೆ ಏಪ್ರಿಲ್ 12ರಂದೆ ವಿದ್ಯುತ್ ಚಕ್ತಿ ನಿಯಂತ್ರಣ ಮಂಡಳಿಯ ದರ ಏರಿಕೆ ಪ್ರಸ್ತಾವಕ್ಕೆ ಬೊಮ್ಮಾಯಿ ಅಸ್ತು ಎಂದಿದ್ದರು. ವಿಧಾನಸಭೆ ಚುನಾವಣೆ ಘೋಷಣೆ ಯಾಗಿ ನೀತಿ ಸಂಹಿತೆ ಜಾರಿಯಲ್ಲಿದ್ದ ಪ್ರಯುಕ್ತ ಬೆಲೆ ಏರಿಕೆ ಆದೇಶ ಜಾರಿಗೆ ತಂದಿರಲಿಲ್ಲ. ಚುನಾವಣೆ ಮುಗಿದ ನಂತರ ಅಂದರೆ ಮೇ 12ರಂದು ಆದೇಶ ಜಾರಿಗೆ ಬಂದಿದೆ ಎನ್ನಲಾಗುತ್ತಿದೆ. ಅದೇನೇ ಇರಲಿ ಸಿದ್ದು ಸರ್ಕಾರ ಪ್ರಕಟಿಸಿದ ಗೃಹಜ್ಯೋತಿ ಯೋಜನೆಯ ಪ್ರಕಾರ ಕೆಲವು ಶರತ್ತುಗಳನ್ವಯ ರಾಜ್ಯದ ಎಲ್ಲರಿಗೂ 200ಯೂನಿಟ್ ವಿದ್ಯುತ್ ಫ್ರೀ ಎಂದು ಕುದ್ದು ಮುಖ್ಯಮಂತ್ರಿ ಸಿದ್ದು ಪ್ರಕಟಿಸಿರುವ ಬೆನ್ನಲ್ಲೇ ವಿದ್ಯುತ್ ದರ ಏರಿಕೆಯಾಗಿರುವುದು ಆಕ್ಷೇಪರ್ಹ ಸಂಗತಿಯಾಗಿದೆ.
ವಿದ್ಯುತ್ ದರ ಏರಿಕೆಗೆ ಸರಿಯಾದ ಮಾನ ದಂಡಗಳಿಲ್ಲ. ಅದಕ್ಕೆ ಕೊಟ್ಟಿರುವ ಕಾರಣ ಕೂಡಾ ಸಮರ್ಪಕವಾಗಿಲ್ಲ. ಎಲ್ಲವೂ ಅವೈಜ್ಞಾನಿಕವಾಗಿದೆ. ಏಪ್ರಿಲ್ನ ಸಚಿವ ಸಂಪುಟ ನಿರ್ಧಾರದ ದಿನದಿಂದ ಹಳೆಯ ದರವನ್ನು ಪಕ್ಕಕ್ಕಿಟ್ಟು ಹೊಸ ದರ ವಿಧಿಸಿದ್ದಾರೆ. ಕೆಲವು ಕಡೆ ಮೇ ತಿಂಗಳ ಬಿಲ್ ಬಂದಿಲ್ಲ. ಆದರೆ ಜೂನ್ ತಿಂಗಳ ಬಿಲ್ಲಿನಲ್ಲಿ ಎರಡು ತಿಂಗಳ ಬಿಲ್ ಒಟ್ಟಿಗೆ ಹಾಕಿ ಅದಕ್ಕೆ ಬಡ್ಡಿ ಸೇರಿಸಿ, ಮಿನಿಮಮ್ ದರ ಕೂಡಾ ಹೆಚ್ಚಿಸಿರುವುದು, ಜೊತೆಗೆ ದರ ದುಪ್ಪಟ್ಟು ಮಾಡಿ ಬಿಲ್ ಕೊಟ್ಟಿರುವುದು ನಿಜಕ್ಕೂ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.