9ವರ್ಷ ಯಶಸ್ವಿ ಮೋದಿ ಆಡಳಿತ ಶಾಸಕ ದೀರಜ್ ಮುನಿರಾಜು

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸರ್ವತೋಮುಖ ಅಭಿವೃದ್ಧಿಯ ಆಡಳಿತ ನಡೆಸುವುದರ ಮೂಲಕ 9ವರ್ಷಗಳನ್ನು ಪೂರೈಸಿದೆ ಎಂದು ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್ ಹೇಳಿದ್ದಾರೆ.
ದೊಡ್ಡಬಳ್ಳಾಪುರ ನಗರದ ಜಿಲ್ಲಾ ಬಿ. ಜೆ ಪಿ ಕಚೇರಿಯಲ್ಲಿ ನಡೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಧೀರಜಮುನಿರಾಜು 9ವರ್ಷಗಳ ಆಡಳಿತವಧಿಯಲ್ಲಿ ನೂರಾರು ಜನಪರ ಕಾರ್ಯಗಳ ಮೂಲಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ತರ ಸಾಧನೆ ಮಾಡಿದೆ. ನರೇಂದ್ರ ಮೋದಿಯವರ ದೂರದೃಷ್ಟಿ, ಉತ್ಸಾಹದ ಕೆಲಸ ಇಡೀ ದೇಶದ ಗಮನ ಸೆಳೆದಿದೆ. ಅದ್ರಲ್ಲೂ ಮುಖ್ಯವಾಗಿ ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆಗೆ ಮೊದಲ ಆದ್ಯತೆ ಕೊಟ್ಟಿದ್ದು, ವಿಶ್ವದಲ್ಲೇ ಭಾರತದ ಸೇನೆಯನ್ನು ಬಲಿಷ್ಠಗೊಳಿಸಿದ್ದು, ಜೊತೆಗೆ ಗುಪ್ತಚರ ಇಲಾಖೆಯನ್ನು ಸಕ್ರಿಯವಾಗುವಂತೆ ಮಾಡಿದ್ದೂ ಇವೆಲ್ಲವೂ ಜಾಗತಿಕ ಮಟ್ಟದಲ್ಲಿ ಇಡೀ ವಿಶ್ವವೆ ಭಾರತದತ್ತ ನೋಡುವಂತ ವಾತಾವರಣ ಸೃಷ್ಟಿಯಾಗಿದೆ ಎಂದ ಧೀರಜ್, ಹಿಂದೆಂದಿಗಿಂತಲೂ ಅಂತಾರಾಷ್ಟ್ರೀಯ ಸಂಬಂಧ ಉತ್ತಮವಾಗಿದೆ. ಅದರಲ್ಲೂ ಬಹು ಮುಖ್ಯವಾಗಿ ಮೋದಿಯವರ ಆಡಳಿತವದಿಯುದ್ಧಕ್ಕೂ ಸಾವಿರಾರು ಸವಾಲುಗಳು, ಸಂಕಷ್ಟಗಳ ಸರಮಾಲೆಗಳೇ ಎದುರಾದರು ಎದೆ ಗುಂದದ ಪ್ರಧಾನಿ ಮೋದಿಜಿ ರವರು 2019ರ ನಂತರ ಕೋವಿಡ್ ಮಹಾಮಾರಿಯಿಂದಾಗಿ ಇಡೀ ವಿಶ್ವವೆ ಬಸವಳಿದಾಗ ದಿಟ್ಟ ನಿರ್ಧಾರದಿಂದ ಲಾಕ್ ಡೊನ್ ಮಾಡಿ ದೇಶದ ಪ್ರತಿಯೊಬ್ಬ ಪ್ರಜೆಗೂ ಉಚಿತ ಲಸಿಕೆ ನೀಡುವ ಮೂಲಕ ಕರೋನ ಸಂಕಷ್ಟದಿಂದ ದೇಶವನ್ನು ಪಾರು ಮಾಡಿದರು. ವಿಶೇಷವಾಗಿ ಮೋದಿರವರ ಆಡಳಿತವದಿಯಲ್ಲಿ ಗ್ರಾಮೀಣ ಭಾರತದ ಜನತೆಗೆ ಜಲಜೀವನ್ ಮಿಷನ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿ ತಮ್ಮ 9ವರ್ಷಗಳ ಆಡಳಿತವನ್ನು ಇಡೀ ವಿಶ್ವವೆ ಮೆಚ್ಚುವಂತೆ ಮಾಡಿದ್ದಾರೆ ಎಂದು ಹೇಳಿದರು
ಬಿ ಜೆ ಪಿ ಜಿಲ್ಲಾ ವಕ್ತಾರೆ ಪುಷ್ಪಾ ಶಿವಶಂಕರ್, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ನಾಗೇಶ್, ನಗರದ್ಯಕ್ಷ ಮುದ್ದಪ್ಪ, ಜಿಲ್ಲಾ ಮುಖಂಡ ಗೋಪಿ ನಗರಸಭಾ ಸದಸ್ಯ ಬಂತಿ ವೆಂಕಟೇಶ್ ಮುಂತಾದವರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.