ದೊಡ್ಡಬಳ್ಳಾಪುರ… ನಗರಸಭೆ ಸದಸ್ಯ, ಪದ್ಮನಾಭ ರವರ ಪತ್ನಿ ನಿಧನ
ಹನುಮಾನ್ ಪ್ರಿಂಟರ್ಸ್ ಮಾಲೀಕ ಹಾಗೂ ನಗರಸಭಾ ಸದಸ್ಯರಾದ ಎಸ್ ಪದ್ಮನಾಭ ರವರ ಪತ್ನಿ ಶ್ರೀಮತಿ ರಮ ರವರು ಇಂದು ಬೆಳಗಿನ ಜಾವಾ ತೀವ್ರ ರಕ್ತದ ಒತ್ತಡದಿಂದ ನಿಧನ ರಾಗಿದ್ದಾರೆ
ಮೃತರು ಪತಿ, ಪುತ್ರ ಹಾಗೂ ಪುತ್ರಿಯನ್ನಗಲಿದ್ದಾರೆ. ನೋವಿನ ಸಂಗತಿ ಎಂದರೆ ರಮ ಪದ್ದೂರವರ ಪುತ್ರ ವಿನೋದ್ ರವರ ಇದೆ ತಿಂಗಳಲ್ಲಿ ನಡೆಯಬೇಕಿದ್ದು ಅಷ್ಟರಲ್ಲಿ ಈ ಘಟನೆ ನಡೆದಿದೆ.
ಮೃತರ ಪಾರ್ತಿವ ಶರೀರವನ್ನು nagarada ಬಸವೇಶ್ವರ ನಗರದ ಸ್ವಗೃಹದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು ಇಂದು ಮದ್ಯಾನ್ಹ 1ಗಂಟೆಗೆ ಪದ್ಮನಾಭರವರ ಸ್ವಗ್ರಾಮ ಕೋಳೂರಿನಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ
ಶಾಸಕ ಧೀರಜ್ ಮುನಿರಾಜ್ ಸೇರಿದಂತೆ ಕುಟುಂಬವರ್ಗ, ಊರಿನ ಹಲವಾರು ಗಣ್ಯರು, ಹಿತೈಷಿ ಗಳು ಮೃತರ ದರ್ಶನ ಪಡೆದರು