ಮಾಧ್ಯಮಗಳಲ್ಲಿ ಬಿ ಜೆ ಪಿ ನಾಯಕರ ಬಗ್ಗೆ ಅವಹೇಳನ ಸಲ್ಲ…. ಪುಷ್ಪ ಶಿವಶಂಕರ್
ದೊಡ್ಡಬಳ್ಳಾಪುರ: ಚುನಾವಣೆ ಕಳೆದ ನಂತರ ಕೆಲ ಮಾಧ್ಯಮಗಳಲ್ಲಿ ಬಿ ಜೆ ಪಿ ನಾಯಕರ ಬಗ್ಗೆ ಅವಹೇಳನಕಾರಿ ವರದಿ ಯಾಗುತ್ತಿರುವುದು ಸರಿಯಲ್ಲ. ಅದರಲ್ಲೂ ಸಾಮಾಜಿಕ ಜಾಲ ತಾಣಗಳಲ್ಲಿ ಬಿ ಜೆ ಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ ಎಲ್ ಸಂತೋಷ್, ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದು ಹೆಚ್ಚಾಗಿದೆ. ಇದರ ಬಗ್ಗೆ ನಮ್ಮ ಪಕ್ಷ ಕಂಡಿಸುತ್ತದೆ. ಅಪಪ್ರಚಾರ ಮಾಡುತ್ತಿರುವವರ ಬಗ್ಗೆ ಕಾನೂನು ಕ್ರಮ ಕೈ ಗೊಳ್ಳಲು ಪಕ್ಷದ ಪ್ರಮುಖರ ಜೊತೆ ಚರ್ಚಿಸಿ ಚಿಂತಿಸಲಾಗುವುದು ಎಂದು ಬಿಜೆಪಿ ಜಿಲ್ಲಾ ವಕ್ತರರಾದ ಪುಷ್ಪ ಶಿವ ಶಂಕರ್ ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ
ಜಿಲ್ಲಾ ಪ್ರದಾನ ಕಾರ್ಯದರ್ಶಿ ಗೋಪಿ ಮಾತನಾಡಿ ಸಂತೋಷ್ ಅವರ ಬಗ್ಗೆ ಇತ್ತೀಚಿಗೆ ಹೆಚ್ಚು ಅಪಪ್ರಚಾರ ಮಾಡಲಾಗುತ್ತಿದೆ ಇದು ಸತ್ಯಕ್ಕೆ ದೂರವಾದ ಸಂಗತಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಸಂತೋಷ್ ರವರು ಪಕ್ಷಕ್ಕಾಗಿ ಅಹರ್ನಿಷಿ ದುಡಿದವರು. ಪಕ್ಷ ಅಧಿಕಾರಕ್ಕೆ ಬಂದಾಗಲೂ ಸಹ ಯಾವುದೇ ಸರ್ಕಾರದ ಅದಿಕಾರದ ಹುದ್ದೆ ಪಡೆಯದೇ ಪಕ್ಷಕ್ಕೋಸ್ಕರ ನಿಷ್ಠೆಯಿಂದ ದುಡಿಯುತ್ತಿದ್ದಾರೆ. ಸಂತೋಷರವರ ಬಗ್ಗೆ ಪಕ್ಷದ ನಾಯಕರಾರು ಕೇವಲವಾಗಿ ಮಾತನಾಡಿಲ್ಲ ಆದರೂ ಸಹ ಸೋಶಿಯಲ್ ಮೀಡಿಯಾ ಗಳಲ್ಲಿ ಅವಹೇಳನಕಾರಿ ಸುದ್ದಿಗಳನ್ನು ಕೆಲವರು ಹಬ್ಬಿಸುತ್ತಿದ್ದಾರೆ. ಒಬ್ಬ ಪಕ್ಷ ನಿಷ್ಟರ ಬಗ್ಗೆ ಈ ರೀತಿ ಸುದ್ದಿಗಳ ಬಗ್ಗೆ ಬಿಜೆಪಿ ಕಂಡಿಸುತ್ತದೆ. ಇದರ ಹಿಂದೆ ಯಾರೋ ಇದ್ದಾರೆ. ಇಂತವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದು ಗೋಪಿ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ಬಿಜೆಪಿ ಅಧ್ಯಕ್ಷ ನಾಗೇಶ್, ನಗರ ಅಧ್ಯಕ್ಷ ಮುದ್ದಪ್ಪ, ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯಕ್ಷ ಬಿ ಸಿ ನಾರಾಯಣಸ್ವಾಮಿ, ಮುಖಂಡರಾದ ರಾಮಕಿಟ್ಟಿ, ವೆಂಕಟರಾಜು ಮುಂತಾದವರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು