ಒಳ ಮೀಸಲಾತಿ ಸಮೀಕ್ಷೆಯಲ್ಲಿ ಮಾದಿಗ ಎಂದು ನಮೂದಿಸಿ– ಮಾದಾರ ಶ್ರೀ

ದೊಡ್ಡಬಳ್ಳಾಪುರ:ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆಗಾಗಿ ಶಿಕ್ಷಕರು ತಮ್ಮ ಮನೆಬಾಗಿಲಿಗೆ ಬರಲಿದ್ದಾರೆ ಈ ಸಮೀಕ್ಷೆಯು ಮೂರು ಹಂತದಲ್ಲಿ ನೆಡೆಯಲಿದ್ದು ಸಮುದಾಯದ ಎಲ್ಲಾ ಬಾಂಧವರು ತಪ್ಪದೆ ಸಮೀಕ್ಷೆಯಲ್ಲಿ ಸೂಕ್ತ ಮಾಹಿತಿ ನೀಡಿ ಮಾದಿಗ ಎಂದು ನಮೂದಿಸುವ ಮೂಲಕ ಸಹಕರಿಸಬೇಕೆಂದು ಪಾಲನಹಳ್ಳಿ ಮಠದ ಪೀಠಾಧ್ಯಕ್ಷರಾದ ಡಾ ಶ್ರೀ ಶ್ರೀ ಸಿದ್ದರಾಜು ಸ್ವಾಮೀಜಿ ತಿಳಿಸಿದರು.

ನಗರದ ಬಾಬು ಜಗಜೀವನ್ ರಾಮ್ ಭವನದಲ್ಲಿ ಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮೀಕ್ಷೆಗೆ ಶಿಕ್ಷಕರು ತಮ್ಮ ಮಲೆ ಬಾಗಿಲಿಗೆ ಬಂದಾಗ ಮಾದಿಗ ಎಂದು ಬರಸಲು ನಾಚಿಕೆಪಡದೆ ಸ್ಪಷ್ಟವಾಗಿ ಜಾತಿಯನ್ನು ಮಾದಿಗ ಎಂದು ನಮೂದಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಸಹಕರಿಸಬೇಕೆಂದರು, ಮಾದಿಗ ಸಮಾಜವು ಬಹು ಸಂಖ್ಯೆಯಲ್ಲಿದೆ ಆದರೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಹಿಂದುಳಿದಿದ್ದು ಜನಾಂಗದ ಅಭಿವೃದ್ಧಿಗೆ ಇದು ಸೂಕ್ತ ಕಾಲ ಹಾಗಾಗಿ ಸಮೀಕ್ಷೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಂಡು ಸೂಕ್ತ ಮಾಹಿತಿ ನೀಡಬೇಕಿದೆ ಎಂದರು

ಸಮೀಕ್ಷೆಯ ಸಮಯದಲ್ಲಿ ಮಾನವ ಮೌಲ್ಯಗಳನ್ನು ಮರೆಮಾಚದೆ ಜಾತಿಯನ್ನು ಸ್ಪಷ್ಟವಾಗಿ ನಮೂದಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಸಹಕಾರ ಕಲ್ಪಿಸಬೇಕು, ಬಹುಸಂಖ್ಯಾತರಾಗಿರುವ ಮಾದಿಗ ಸಮುದಾಯದ ಜನತೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಪಡೆಯಲು ಈ ಸಮೀಕ್ಷೆ ಸಹಕಾರಿಯಾಗಲಿದೆ ಎಂದರು.

ಸಮುದಾಯದ ಮುಖಂಡ ರಾಮಕೃಷ್ಣ ಮಾತನಾಡಿ ಒಳ ಮೀಸಲಾತಿ ಜಾರಿಗೊಳಿಸುವ ಸಲುವಾಗಿ ನಡೆಯುತ್ತಿರುವ ಸಮೀಕ್ಷೆಯು ಮೂರು ಹಂತದಲ್ಲಿ ನಡೆಯಲಿದ್ದು ಮೊದಲ ಹಂತದಲ್ಲಿ ಮೇ 5 ರಿಂದ 17 ವರೆಗೆ ಗಣತಿದಾರರು ಮನೆ ಮನೆ ಭೇಟಿ ನೀಡಿ ಸಮೀಕ್ಷೆ ಮಾಡಲಿದ್ದಾರೆ, ಎರಡನೇ ಹಂತದಲ್ಲಿ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಕೈಗೊಳ್ಳುವ ಮೂಲಕ ಸಮೀಕ್ಷೆ ಮಾಡಲಿದ್ದು . ಎರಡು ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಸಾರ್ವಜನಿಕರು , ಸಮುದಾಯದ ಬಾಂಧವರು ಮೂರನೇ ಹಂತದಲ್ಲಿ ಮೇ 19 ರಿಂದ 23 ರ ವರೆಗೆ ಆನ್ಲೈನ್ ಮೂಲಕ ಸ್ವಯಂ ಘೋಷಣೆ ಮಾಡಬಹುದಾಗಿದೆ, ತಪ್ಪದೇ ಎಲ್ಲರೂ ಸಮೀಕ್ಷೆಯಲ್ಲಿ ಭಾಗವಹಿಸಿ ಸಂಪೂರ್ಣವಾಗಿ ಪಾಲ್ಗೊಂಡು ಶುದ್ಧ ಮಾಹಿತಿ ನೀಡುವ ಮೂಲಕ ನಮ್ಮ ಹಕ್ಕನ್ನು ಪಡೆಯಲು ಸಹಕರಿಸಬೇಕಿದೆ ಎಂದರು .

ಈಗಾಗಲೇ ನಮ್ಮ ಸಮುದಾಯಕ್ಕೆ ಸಂಬಂಧಪಟ್ಟ ಸಮೀಕ್ಷೆ ವರದಿಗಳು ಸೂಕ್ತ ರೀತಿಯಲ್ಲಿ ಸರ್ಕಾರಕ್ಕೆ ಲಭ್ಯವಿಲ್ಲದ ಕಾರಣ ನಮ್ಮ ಸಮುದಾಯಕ್ಕೆ ಸಿಗಬೇಕಿರುವ ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕ ಸವಲತ್ತುಗಳು ಬೇರೆ ಸಮುದಾಯದ ಪಾಲಾಗುತ್ತಿವೆ. ನಮ್ಮ ಸಮುದಾಯವು ನಮಗೆ ಸಿಗಬೇಕಿರುವ ಸೌಲಭ್ಯಗಳನ್ನು ಪಡೆಯಲು ಈ ಸಮೀಕ್ಷೆಯು ಸಹಕಾರಿಯಾಗಲಿದೆ , ಹಾಗಾಗಿ ಸಮುದಾಯದ ಎಲ್ಲ ಬಂಧು ಬಾಂಧವರು ತಪ್ಪದೇ ಈ ಸಮೀಕ್ಷೆಯಲ್ಲಿ ಭಾಗವಹಿಸಿ ಜಾತಿಯನ್ನು ಮಾದಿಗ ಎಂದು ಬರೆಸಿ ಸೂಕ್ತ ಮಾಹಿತಿ ನೀಡುವ ಮೂಲಕ ಸಮುದಾಯದ ಶಕ್ತಿ ಹೆಚ್ಚಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಮಾದಾರ ಮಹಾ ಮುಖ್ಯಸ್ಥರಾದ ದೊಡ್ಡತುಮಕೂರು ಸಿ.ರಾಮಕೃಷ್ಣಪ್ಪ, ಮುಖಂಡರಾದ ಬಚ್ಚಹಳ್ಳಿ ನಾಗರಾಜ್,ಟಿ.ಡಿ‌ಮುನಿಯಪ್ಪ,ಮುನಿಸುಬ್ಬಯ್ಯ
ಅಪ್ಪಕಾರನಹಳ್ಳಿ ಹನುಮಯ್ಯ, ಪುರುಷೋತ್ತಮ್,
ವಿ.ವೆಂಕಟೇಶ್, ತಳವಾರ್ ನಾಗರಾಜ್, ಹಾದ್ರಿಪುರ ಹರ್ಷ,ವಕೀಲ ಕಾಂತರಾಜ್ , ಮುನಿರಾಜ್, ತಮಟೆ ಗಣೇಶ್,ವೆಂಕಟರಮಣಪ್ಪ
ರಾಮದೇವನಹಳ್ಳಿ ಮುನಿರಾಜ್, ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಪ್ರಾಧಿಕಾರದ ಸದಸ್ಯ ಆರ್.ವಿ ಮಹೇಶ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ನೇರಳೆಘಟ್ಟ ರಾಮು, ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಹನುಮಂತಯ್ಯ,ನಗರಸಭಾ ಸದಸ್ಯ ಶಿವಣ್ಣ,
ಹುಲಿಕುಂಟೆ ನರಸಿಂಹಮೂರ್ತಿ,ಕೆಂಪವೆಂಕಟಯ್ಯ
ಮಂಜು ರಾಮದಾಸ್, ಕುರುಬರಹಳ್ಳಿ ಮಂಜು,ನರಸಿಂಹ ಮೂರ್ತಿ, ಕರೀಂ ಸೊಣ್ಣೇನಹಳ್ಳಿ ಮುನಿಯಪ್ಪ, ಗೊಲ್ಲಹಳ್ಳಿ ಮುನಿಯಪ್ಪ ಸೇರಿದಂತೆ ತಾಲೂಕಿನ ಹಲವು ಪ್ರಮುಖರು ಹಾಜರಿದ್ದರು.