ಗೂಳಿಪುರ ಗ್ರಾಮದಲ್ಲಿ ಸಂಭ್ರಮದಿಂದ ನಡೆದ 134ನೇ ಅಂಬೇಡ್ಕರ್ ಜಯಂತಿ
ಚಾಮರಾಜನಗರ: ತಾಲ್ಲೂಕಿನ ಗೂಳಿಪುರ ಗ್ರಾಮದಲ್ಲಿ ವಿಜೃಂಭಣೆಯಿಂದ ಡಾ. ಬಿ. ಆರ್. ಅಂಬೇಡ್ಕರ್ ರವರ 134 ನೇ ಜನ್ಮ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.
ಗ್ರಾಮದ ಪ್ರಮುಖ ಬಡಾವಣೆಯಲ್ಲಿ ತಳಿರು ತೋರಣ, ದೀಪಾಲಂಕಾರಗಳಿಂದ ಗ್ರಾಮವು ಕಂಗೊಳಿಸುತ್ತಿತ್ತು, ಅಂಬೇಡ್ಕರ್ ಜಯಂತಿ ಅಂಗವಾಗಿ ನೀಲಿ ಬಾವುಟಗಳನ್ನು ಕಟ್ಟಿ ಹಬ್ಬದ ವಾತಾವರಣ ಸೃಷ್ಟಿ ಮಾಡಿ, ಗ್ರಾಮದ ಯಜಮಾನರು, ಯುವಕರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಿ ಮೆರವಣಿಗೆ ಮಾಡಲಾಯಿತು.
ಗ್ರಾಮದಲ್ಲಿ ಮೆರವಣಿಗೆ ವರಟು ಪ್ರಮುಖ ರಸ್ತೆಗಳ ಮೂಲಕ,ಯಜಮಾನರು ಯುವಕರು, ಮಹಿಳೆಯರು, ಪುಟ್ಟ ಮಕ್ಕಳು ಬಿಳಿ ವಸ್ತ್ರ ಧರಿಸಿ, ನೀಲಿ ಶಾಲು ತೊಟ್ಟು ಕುಣಿದು ಕುಪ್ಪಳಿಸಿ ಜೈ ಭೀಮ್ ಘೋಷಣೆ ಕೂಗುತ್ತ ಸಂಭ್ರಮದಿಂದ ಅಂಬೇಡ್ಕರ್ ಹಬ್ಬವನ್ನು ಆಚರಣೆ ಮಾಡಲಾಯಿತು.
ನಂತರ ದೇವಾಲಯದ ಆವರಣದಲ್ಲಿ ಅನ್ನ ಸಂತರ್ಪಣೆ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದರು.ಈ ವೇಳೆ ಗ್ರಾಮದ ಮುಖಂಡರು, ಯಜಮಾನರು, ಮಹಿಳೆಯರು, ಯುವಕರು ಹಾಜರಿದ್ದರು
ವರದಿ ಆರ್ ಉಮೇಶ್ ಮಲಾರಪಾಳ್ಯ