ಚನ್ನಹಳ್ಳಿಯಲ್ಲಿ ಏ.27 ರಂದು ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ
ದೇವನಹಳ್ಳಿ: ತಾಲೂಕಿನ ಚನ್ನಹಳ್ಳಿ ಚನ್ನಕೇಶವ ಸಾಂಸ್ಕೃತಿಕ ಕಲಾ ಸಂಘ ವತಿಯಿಂದ ಸಂಪೂರ್ಣ ರಾಮಾಯಣ ಎಂಬ ಸುಂದರ ಪೌರಾಣಿಕ ನಾಟಕ ಪ್ರದರ್ಶನ ಏಪ.27ರ ರಾತ್ರಿ 8.30 ಗಂಟೆಗೆ ನಡೆಯಲಿದದ್ದು ಹೆಚ್ಚಿನ ಸಂಖ್ಯೆಯಲ್ಲಿ ಪೌರಾಣಿಕ ನಾಟಕ ವೀಕ್ಷಣೆಗೆ ಆಗಮಿಸುವಂತೆ ರಂಗಭೂಮಿ ಕಲಾವಿದ ಡಾ.ಸಿವಿ.ನಾರಾಯಣಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ. ತಾಲೂಕಿನ ಐಬಸಾ ಪುರ ರಾಜಣ್ಣನವರ ಮಾರುತಿ ಡ್ರಾಮಾ ಸೀನರಿಯ ಭವ್ಯವಾದ ರಂಗಸಂಚಿಕೆಯಲ್ಲಿ ಸಂಪೂರ್ಣ ರಾಮಾಯಣ ಎಂಬ ಸುಂದರ ಪೌರಾಣಿಕ ನಾಟಕ ನಡೆಯಲಿದೆ.
ನಾಟಕದ ಸಮಾರಂಭವನ್ನು ಬೆಂಗಳೂರು ಗ್ರಾಮಾಂ ತರ ಜಿಲ್ಲಾ ಉಸ್ತುವಾರಿ ಸಚಿವ ಕೆಎಚ್. ಮುನಿಯಪ್ಪ, 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣ ಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ರಾಜಣ್ಣ, ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆ ಪ್ರಾಧಿಕಾ ರದ ಅಧ್ಯಕ್ಷ ದ್ಯಾವರಹಳ್ಳಿ ವಿ. ಶಾಂತಕುಮಾರ್, ಚನ್ನಹಳ್ಳಿ ಗ್ರಾಪಂ ಅಧ್ಯಕ್ಷ ಬಿ.ರಾಧಾಕೃಷ್ಣ ದೇವನಹಳ್ಳಿ ತಾಲೂಕು ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಮುನಿರಾಜು, ಸೇರಿದಂತೆ ಸ್ಥಳೀಯ ಗ್ರಾಮ ಪಂಚಾಯಿತಿಯ ಚುನಾಯಿತ ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಭಾಗವಹಿಸಲಿದ್ದಾರೆಂದರು.