ಡೆಬೋರಾ ಫೌಂಡೇಶನ್ ಇಂಡಿಯಾದಿಂದ ವಾರ್ಷಿಕ ಬೇಸಿಗೆ ತರಬೇತಿ ಶಿಬಿರ

ದೊಡ್ಡಬಳ್ಳಾಪುರ: ಡೆಬೋರಾ ಫೌಂಡೇಶನ್ ಇಂಡಿಯಾ ವಾರ್ಷಿಕ ಬೇಸಿಗೆ ತರಬೇತಿ ಶಿಬಿರವನ್ನು ಗ್ರಾಮೀಣ ಮಕ್ಕಳಿಗಾಗಿ ನಡೆಸುವ ಶಿಕ್ಷಣ ಮತ್ತು ಚಟುವಟಿಕೆ ಕೇಂದ್ರ (EAC) ಮಕ್ಕಳಿಗಾಗಿ ನಗರದ ನೆಲದಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,

ಕಾರ್ಯಕ್ರಮದಲ್ಲಿ ಬಾಗವಹಿಸಿದ ಫೌಂಡೇಶನ್‌ ಸಂಯೋಜಕ ಥಾಮಸ್ ಲಾರೆನ್ಸ್ ಮಾತನಾಡಿ, 2019 ರಿಂದ ಡೊಡ್ಡಬಳ್ಳಾಪುರ ತಾಲೂಕಿನ 20 ಹಳ್ಳಿಗಳಲ್ಲಿ ಫೌಂಡೇಶನ್ ಮಾಡಿದ ಕೆಲಸಗಳನ್ನು ವಿವರಿಸಿ,
ಆರೋಗ್ಯ ಶಿಬಿರಗಳು, ನಾಯಕರ ಚಟುವಟಿಕೆಗಳು ಮತ್ತು ನಿರುದ್ಯೋಗಿ ಯುವಕರಿಗೆ ಸೀರೆ ಕಟಿಂಗ್, ಬ್ಯೂಟಿಷಿಯನ್, ನೇಕಾರಿಕೆ ಮತ್ತು ಡ್ರೈವಿಂಗ್ ತರಬೇತಿಯಂತಹ ವೃತ್ತಿಪರ ತರಬೇತಿಗಳನ್ನು ಒಳಗೊಂಡ ಕಾರ್ಯಕ್ರಮಗಳನ್ನು ಹಳ್ಳಿಗಳಲ್ಲಿ ಹೆಚ್ಚು ಹೆಚ್ಚು ಮಾಡುತ್ತಾ ಬಂದಿದ್ದೇವೆ ಎಂದು ಹೇಳಿದರು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬ್ಲಾಕ್ ಎಜುಕೇಷನ್ ಆಫೀಸರ್ ಸೌ. ಸೈದಾ ಅನಿಸ್ ಮುಜಾವರ್ ಫೌಂಡೇಶನ್‌ನ ಮಕ್ಕಳ ರಕ್ಷಣೆ ನೀತಿ ದಾಖಲೆ ಮತ್ತು ಪುಸ್ತಕವನ್ನು ಬಿಡುಗಡೆ ಮಾಡಿ, ಫೌಂಡೇಶನ್ ಮಕ್ಕಳ ಸುರಕ್ಷತೆಗಾಗಿ ತೆಗೆದುಕೊಂಡಿರುವ ಕ್ರಮವನ್ನು ಪ್ರಶಂಸಿಸಿ, ವಿದ್ಯಾರ್ಥಿಗಳು ಶಿಕ್ಷಣದ ಅವಕಾಶಗಳನ್ನು ಬಳಸಿಕೊಂಡು ವೈಯಕ್ತಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಉತ್ತೇಜನ ನೀಡಬೇಕೆಂದು ಸಲಹೆ ನೀಡಿದರು.

ಫೌಂಡೇಶನ್‌ನ ವ್ಯವಸ್ಥಾಪಕ ನಿಲಯಾಧಿಕಾರಿ ಥಾಮಸ್ ರಾಜ್ ಕುಮಾರ್ ಮಾತನಾಡಿ, ಮಕ್ಕಳ ರಕ್ಷಣೆ ನೀತಿ ಭಾರತವು ಅಂಗೀಕರಿಸಿದ ಅಂತಾರಾಷ್ಟ್ರೀಯ ಒಪ್ಪಂದಗಳೊಂದಿಗೆ ಹೊಂದಾಣಿಕೆಯಾಗಿರುವುದಾಗಿ ವಿವರಿಸಿದರು ಮತ್ತು ಮಕ್ಕಳ ಹಕ್ಕುಗಳನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯೆಂದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು,

ಕಾರ್ಯಕ್ರಮದಲ್ಲಿ ಫೌಂಡೇಶನ್ನಿನ ಡಾ. ಪರಮೇಶ್ವರ್,ಸೋಮಶೇಖರ್, ರಾಜಗೋಪಾಲ್ ಇದ್ದರು,