ಭಯೋತ್ಪಾದಕ ದಾಳಿಯಲ್ಲಿ ವೀರ ಮರಣ ಹೊಂದಿದ ಸಂತ್ರಸ್ತರಿಗೆ ಬಿಜೆಪಿ ಪಕ್ಷದಿಂದ ಸಂತಾಪ
ದೇವನಹಳ್ಳಿ :- ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದು ಅವರ ಆತ್ಮಕ್ಕೆ ಭಗವಂತ ಧೃರ್ಯ, ಸಮಧಾನ ಕರುಣಿಸಲಿ ಎಂದು ಭಾರತೀಯ ಜನತಾ ಪಾರ್ಟಿ ದೇವನಹಳ್ಳಿ ತಾಲೂಕು ಅಧ್ಯಕ್ಷರಾದ ಎನ್ ಎಲ್ ಅಂಬರೀಶ್ ಗೌಡ ಭಗವಂತನಲ್ಲಿ ಪ್ರಾರ್ಥಿಸುತ್ತೇನೆಂದರು.
ದೇವನಹಳ್ಳಿ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಕಾಶ್ಮೀರದ ಪಹಲ್ಗಾಮದಲ್ಲಿ ಹತ್ಯೆಗೆ ಒಳಗಾದವರ ಬಾವಚಿತ್ರದ ಎದುರು ಮೇಣದ ಬತ್ತಿ ಬೆಳಗಿಸಿದ ಬಳಿಕ ಮೌನಾಚರಣೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಂತಾಪದಲ್ಲಿ ಭಾಗವಹಿಸಿ ಮಾತನಾಡಿ,
ಭಯೋತ್ಪಾದಕರ ಕೃತ್ಯವನ್ನು ಖಂಡಿಸುವ ಮೂಲಕ ಹಿಂದೂ ಸಮಾಜಕ್ಕೆ ಒಂದು ಸಂದೇಶವನ್ನು ಕೇಂದ್ರ ಭಾರತೀಯ ಜನತಾ ಪಾರ್ಟಿ ನೇತೃತ್ವದ ಸರ್ಕಾರ ಇನ್ನು ಚೆಲುವೆ ದಿನಗಳಲ್ಲಿ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸುವುದು ಶತಸಿದ್ಧ. ಬೈಸರನ್ ಕಣಿವೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಈ ದಾಳಿಯಲ್ಲಿ ಇಂದೋರ್‌ನ ಸುಶೀಲ್ ನಥಾನಿಯಲ್ ಕೂಡ ಸಾವನ್ನಪ್ಪಿದರು. ಅವರ ಮಗಳು ಆಕಾಂಕ್ಷಾ ಗಾಯಗೊಂಡಿದ್ದಾರೆ. ಅವರು ತಮ್ಮ ಪತ್ನಿ ಜೆನ್ನಿಫರ್ ಹುಟ್ಟುಹಬ್ಬವನ್ನು ಆಚರಿಸಲು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಿದ್ದರು.
ಭಯೋತ್ಪಾದಕರು ಮೊದಲು ಸುಶೀಲ್‌ನನ್ನು ಮೊಣಕಾಲುಗಳ ಮೇಲೆ ಕೂರಿಸಿ ನಂತರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಇಂತಹ ಗಣ ಘೋರ ಘಟನೆ ಹಿಂದೂ ಸಮಾಜ ಕ್ಷಮಿಸಲಾರರು. ರಾಜ್ಯದ ನಾನಾ ಭಾಗಗಳಲ್ಲಿ ಭಯೋತ್ಪಾದಕರ ಅಟ್ಟಹಾಸದ ವಿರುದ್ಧ ಮೌನಚರಣೆ ಮತ್ತು ಮೇಣದಬತ್ತಿ ಹಚ್ಚುವ ಮೂಲಕ ಅವರ ಕುಟುಂಬಕ್ಕೆ ಮೃತರನ್ನು ಕಳೆದುಕೊಂಡ ಆತಂಕದಲ್ಲಿನ ಸದಸ್ಯರಿಗೆ ಧೈರ್ಯ ತುಂಬ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್ ಎಮ್ ರವಿಕುಮಾರ್ ಅವರು ಮಾತನಾಡಿ, ಮಧ್ಯಪ್ರದೇಶದ ಅಲಿರಾಜ್‌ಪುರದ ಜೋಬಾಟ್‌ನ ನಿವಾಸಿ ಸುಶೀಲ್ ನಥಾನಿಯಲ್ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾ ದಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಸಾವಿನ ಸುದ್ದಿ ತಿಳಿದ ನಂತರ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕುಟುಂಬ ಸದಸ್ಯರು ಪ್ರಧಾನಿಯಿಂದ ಕಠಿಣ ಕ್ರಮ ಕೈಗೊಳ್ಳಲಿದೆ ಅಲ್ಲದೆ ಭಯೋತ್ಪಾದಕ ರನ್ನು ಹುಡುಕಿ ಹುಡುಕಿ ಕೊಲ್ಲಬೇಕು ಆಗ ಮಾತ್ರ ಭಾರತೀಯರ ಮೇಲೆ ಶಸ್ತ್ರಾಸ್ತ್ರ ಹಿಡಿದು ಯುದ್ಧಕ್ಕೆ ಬರಲು ಅಂಜುವರು ದೇಶದಲ್ಲಿ ಭಯೋತ್ಪಾದನೆಯ ಹುಟ್ಟಡಗಿಸಲು ನಾನಾ ರೀತಿಯ ತಂತ್ರಗಳನ್ನು ರೂಪಿಸುವುದಲ್ಲದೆ ಹೆಚ್ಚಿನ ಭದ್ರತೆಗೆ ಅಗತ್ಯ ವೀರಯೋಧರನ್ನು ನಿಯೋಜಿಸಲು ಪ್ರಧಾನಿ ನರೇಂದ್ರ ಮೋದಿಯವರು ಶಕ್ತಿಮೀರಿ ಶ್ರಮಿಸುತ್ತಿ ದ್ದಾರೆ ಜೊತೆಗೆ ವಿದೇಶದ ಪ್ರವಾಸವನ್ನು ರದ್ದುಗೊಳಿಸಿ ಭಾರತೀಯರ ಸಾವಿಗೆ ಸಂತಾಪವನ್ನು ಕೂಡ ಸೂಚಿಸಿದ್ದಾರೆಎಂದರು.
ಈ ಸಂದರ್ಭದಲ್ಲಿ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ರಮೇಶ್ ಬಾಬು, ಪದಾಧಿಕಾರಿ ಗಳಾದ ಮೋಹನ್, ಶಿವಕುಮಾರ್,ಬಿಜೆಪಿಯ ತಾಲ್ಲೂಕು ಹಿರಿಯ ಮುಖಂಡರಾದ ದೇಸು ನಾಗರಾಜ್, ಉಮೇಶ್, ಆರ್ ಕೆ ನಂಜೇಗೌಡ, ಬಿದಲುಪುರ ಅನಿಲ್, ಶಾನಪನಹಳ್ಳಿ ರವಿಕುಮಾರ್, ಮಹಿಳಾ ಘಟಕದ ಅಧ್ಯಕ್ಷ ಪುನೀತಾ ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಜರಿದ್ದರು.