“ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮ”
ದೊಡ್ಡಬಳ್ಳಾಪುರ:ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ವಿದ್ಯಾನಿಧಿ ಸ್ವತಂತ್ರ ಪದವಿ ಪೂರ್ವ ಕಾಲೇಜು ದೊಡ್ಡಬಳ್ಳಾಪುರ
ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮವನ್ನು ವಿದ್ಯಾನಿಧಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು ಕಾರ್ಯಕ್ರಮವನ್ನು ಸಸಿಗೆ ನೀರುಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಕೃಷ್ಣ ಪ್ರಸಾದ್ ವಿಶ್ವ ಭೂಮಿ ದಿನಾಚರಣೆಯನ್ನು ಅಮೇರಿಕಾದಲ್ಲಿ 1970 ಮೊದಲಬಾರಿಗೆ ಆಚರಣೆ ಮಾಡಲಾಯಿತು ನಾವು ನಮ್ಮ ಪರಿಸರದ ಸುತ್ತ ಮುತ್ತಲಿನ ಎಲ್ಲಾರೂ ಪ್ಲ್ಯಾಸ್ಟಿಕ್ ಬಳಕೆ ನಿಷೇಧ ಮಾಡದ ಹೊರತು ಭೂಮಿ ನೀರು ಗಾಳಿ ಶುದ್ದವಾಗಿರಲು ಸಾದ್ಯವಾಗುವುದಿಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಪರಿಹಾರ ಸಮತೊಲನ ಕಾಪಾಡಬೇಕು ನೀರು ಗಾಳಿ ಮಲಿನ ವಾಗಲು ಬಿಡಬಾರದು ಎಂದು ಹೇಳಿದರು ಇಂದು ದೊಡ್ಡಬಳ್ಳಾಪುರ ಸುತ್ತ ಮುತ್ತ ನೀರು ಕುಡಿಯಲು ಯೋಗ್ಯವಾಗಿಲ್ಲ ಕಾರಣ ಭೂಮಿ ನೀರು ಮಲಿನವಾಗಿವೆ ಅದುದರಿಂದ ಶುದ್ದ ನೀರು ಗಾಳಿ ನಮಗೆ ದೊರೆಯಬೇಕಾದರೆ ಭೂಮಿಯು ಶುದ್ಧತೆಯನ್ನು ನಾವು ಮೋದಲು ಕಾಪಾಡಬೇಕು ಎಂದು ಹೇಳಿದರು
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಂ ಸಿ ಮಂಜುನಾಥ್ ನಮ್ಮ ಹಿರಿಯರು ಅವರ ಕಾಲದಲ್ಲಿ ನೀರಾಗಲಿ ಗಾಳಿಯಾಗಲಿ ಮಲಿನ ವಾಗಲು ಬಿಡುತ್ತಿರಲಿಲ್ಲ ಅದುದರಿಂದ ಅವರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾದ್ಯವಾಯಿತು ಎಂದು ಹೇಳಿದರು ಹಿರಿಯ ಉಪನ್ಯಾಸಕರಾದ ಟಿ ಕೆ ಬಾಲಕೃಷ್ಣ ಮಾತನಾಡಿ ಇವತ್ತಿನ ದಿನಗಳಲ್ಲಿ ನಾವೇಲ್ಲರು ಉತ್ತಮ ಪರಿಸರ ನಿರ್ಮಾಣದತ್ತ ಗಮನ ಕೊಡಬೇಕಾಗಿದೆ ಎಂದು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ರಂಗನಾಥ್ ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಲು ತುಂಬಾ ಸಂತೋಷವಾಯಿತು ಇಂತಹ ಉತ್ತಮ ಉಪಯುಕ್ತ ಮಾಹಿತಿಗಳು ನಮ್ಮ ವಿದ್ಯಾರ್ಥಿಗಳಿಗೆ ತುಂಬಾ ಅವಶ್ಯವಾಗಿತ್ತು ಜೊತೆಗೆ ಈ ಕಾರ್ಯಕ್ರಮ ನಮ್ಮ ಕಾಲೇಜಿನಲ್ಲಿ ನಡೆಯಲು ಕಾರಣಕರ್ತರಾದ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿಗಳು ನ್ಯಾಯಮೂರ್ತಿಗಳು ಆದಂತಹ “ಬೊಲ್ ಪಂಡಿತ್ ಸರ್”ರವರಿಗೆ ತುಂಬುಹೃದಯದ ದನ್ಯವಾದಗಳು ಎಂದು ಹೇಳಿದರು ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪಿ. ವೈ. ರಾಮಚಂದ್ರ (ಪಣಿ) ಬೈರೇಗೌಡ ಹಾಗೂ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಭಾಗವಹಿಸಿದ್ದರು.