ಹಾಡೋನಹಳ್ಳಿ ರೈತರಿಂದ ಹೊನ್ನೇರು ನೇಗಿಲ ಪೂಜೆ

ದೊಡ್ಡಬಳ್ಳಾಪುರ:ತಾಲ್ಲೂಕಿನ,ತೂಬಗೆರೆ ಹೋಬಳಿಯ ಹಾಡೋನಹಳ್ಳಿ ಗ್ರಾಮದಲ್ಲಿ ಮುಂಗಾರು ಮಳೆ ಹಿನ್ನೆಲೆಯಲ್ಲಿ ಹೊನ್ನೇರು ನೇಗಿಲು ಪೂಜೆ ಸಲ್ಲಿಸಿ ಊರಿನ ಗಡಿ ಬಾಗದಲ್ಲಿ ಉಳುಮೆ ಮಾಡಿದ ನಂತರ ಊರಿನ ಎಲ್ಲರೂ ಊಳುಮೆ ಮಾಡುವುದು ಪದ್ದತಿ.

ಯುಗಾದಿ ಹಬ್ಬದ ನಂತರ ಬೀಳುವ ಮೊದಲ ಮಳೆಗೆ ರೈತಾಪಿ ವರ್ಗ ನಮನ ಸಲ್ಲಿಸಿ, ಉಳುಮೆ ಶಾಸ್ತ್ರ ಮಾಡುವುದು ಹಾಡೋನಹಳ್ಳಿಯಲ್ಲಿ ಹಿಂದಿನಿಂದಲೂ ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ.

ಮಳೆ ಬಿದ್ದ ನಂತರ ರೈತ ಉಳುಮೆ ಮುನ್ನ ಶಾಸ್ಕೋಕ್ತವಾಗಿ ಗ್ರಾಮ ದೇವತೆಗಳಾದ ಈಶ್ವರ ಚೌಡೇಶ್ವರಿ, ಚೆನ್ನಕೇಶವ, ಸತ್ಯಮ್ಮದೇವತಾ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ನಂತರ ಹೊನ್ನೇರು ನೇಗಿಲು ಪೂಜೆ ನಡೆಸಲಾಗುತ್ತಿದೆ.

ಗ್ರಾಮದ ಗಡಿ ಪರಿಧಿಯ ವಿವಿಧ ಕಡೆಗಳಲ್ಲಿ ಸಾಂಕೇತಿಕವಾಗಿ ಉಳುಮೆ ಮಾಡಿ ಮತ್ತೆ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಗುತ್ತದೆ.

ಈ ಸಂದರ್ಭದಲ್ಲಿ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಎ. ನಾಗರಾಜ್ ಮಾತನಾಡಿ ರೈತಾಪಿ ವರ್ಗದ ಜೀವನಾಡಿಯಾದ ಸೇಗಿಲಿಗೆ ಗೌರವ ಸಲ್ಲಿಸುವುದು ಒಂದೆಡೆಯಾದರೆ, ಕಾಲ ಕಾಲಕ್ಕೆ ಮಳೆ ಬೆಳೆ ಆಗಿ ಎಲ್ಲರೂ ಸುಭಿ ಕ್ಷವಾಗಿರಲಿ ಎನ್ನುವ ಆಶಯ ಈ ಆಚರಣೆ ಮಾಡಲಾಗುತ್ತೆ ಎಂದರು.

ಈ ಸಂದರ್ಭದಲ್ಲಿ ಊರಿನ ಗ್ರಾಮ ಹಿರಿಯರು ಮತ್ತು ರೈತರು ಹಾಜರಿದ್ದರು