ಒಂದನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲ ಗೊಳಿಸಿದ ಸರ್ಕಾರ– ಕನ್ನಡ ಪಕ್ಷ ಸ್ವಾಗತ
ದೊಡ್ಡಬಳ್ಳಾಪುರ:ಶಾಲಾ ಮಕ್ಕಳ ಪ್ರವೇಶಕ್ಕೆ ಒಂದನೇ ತರಗತಿಗೆ ಆರು ವರ್ಷಗಳ ವಯೋಮಿತಿ ಸಡಿಲಿಸಿ ಐದು ವರ್ಷ ಐದು ತಿಂಗಳು ನಿಗದಿ ಗೊಳಿಸಿ ಪ್ರವೇಶಕ್ಕೆ ಅವಕಾಶ ಮಾಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ತಾಲ್ಲೂಕು ಕನ್ನಡ ಪಕ್ಷ ಸ್ವಾಗತಿಸುತ್ತದೆ
ಇದು ಕನ್ನಡ ಪಕ್ಷ, ಕನ್ನಡ ಜಾಗೃತ ಪರಿಷತ್ತು, ಶಿವರಾಜ್ ಕುಮಾರ್ ಸೇನಾ ಸಮಿತಿ ಮತ್ತು ಚಲವಾದಿ ಮಹಾ ಸಭಾ ಸಂಘಟನೆಗಳ ಹೋರಾಟಕ್ಕೆ ಸಿಕ್ಕ ಜಯ ಎಂದು ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವನಾಯಕ್ ಹಾಗೂ ಕನ್ನಡ ಜಾಗೃತ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಿ ಪಿ ಆಂಜನೇಯ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಈ ಎಲ್ಲಾ ಗೊಂದಲಕ್ಕೆ ಕಾರಣವಾಗಿರುವ 2022 ರಲ್ಲಿ ಕೇಂದ್ರ ಸರ್ಕಾರ (ಎನ್ ಇ ಪಿ) ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದು ಹಿಂಬಾಗಿಲ ಮೂಲಕ ಸನಾತನ ಮನುಸ್ಮೃತಿ ಹೇರಲು ಹೊರಟಿರುವ ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರದ ನಾಡ ದ್ರೋಹಿ ಕರಾಳ ಕಾಯ್ದೆ ಈ ಕೂಡಲೇ ರದ್ದು ಗೊಳಿಸ ಬೇಕೆಂದು ಕನ್ನಡ ಪಕ್ಷ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ
ಕಾಂಗ್ರೆಸ್ ಪಕ್ಷ 2023 ರ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದ್ದ ಕೇಂದ್ರದ ( ಎನ್ ಇ ಪಿ) ರದ್ದು ಗೊಳಿಸಿ ರಾಜ್ಯದ (ಎಸ್ ಇ ಪಿ) ಕಾಯ್ದೆಯನ್ನು ಜಾರಿಗೊಳಿಸಿ ಈಗಿರುವ ತ್ರಿಭಾಷಾ ಸೂತ್ರವನ್ನು ರದ್ದು ಗೊಳಿಸಿ ದ್ವಿಭಾಷಾ ಸೂತ್ರವನ್ನು ಜಾರಿಗೊಳಿಸಿ ಮಾತೃಭಾಷೆಯ ಅಸ್ಮಿತೆಯನ್ನು ಉಳಿಸಬೇಕೆಂದು ಎಲ್ಲಾ ಕನ್ನಡ ಸಂಘಟನೆಗಳು ಆಗ್ರಹಿಸುತ್ತವೆ