ದಾರ್ಮಿಕ ಕ್ಷೇತ್ರಗಳ ಅಬಿವೃದ್ದಿಯಿಂದ ಸಕಲ ಜೀವರಾ ಶಿಗಳು ಸಂಮೃದ್ದಿ –ನಿಸರ್ಗ ನಾರಾಯಣಸ್ವಾಮಿ

ದೇವನಹಳ್ಳಿ : ಭಾರತದಂತಹ ಜಾತ್ಯತೀತ ರಾಷ್ಟ್ರದಲ್ಲಿ ಹೆಚ್ಚಾಗಿ ಹಿಂದೂ ಧಾರ್ಮಿಕ ಚಟುವಟಿಕೆಗಳು ಬಹುಮಖ್ಯ ಆಚರಣೆಗಳಾಗಿವೆ ಎಂದು ಮಾಜಿ ಶಾಸಕ
ನಿಸರ್ಗ ನಾರಾಯಣಸ್ವಾಮಿ ತಿಳಿಸಿರುತ್ತಾರೆ.

ತಾಲೂಕಿನ ಬೂದಿಗೆರೆಯ ದೇಶನಾರಾಯಣಸ್ವಾಮಿ, ಶ್ರೀರಾಮಚಂದ್ರಸ್ವಾಮಿ,ಹಾಗೂ ನೂತನವಾಗಿ
ನಿರ್ಮಾಣ ಗೊಳ್ಳುತ್ತಿರುವ ಆಂಜನೇಯಸ್ವಾಮಿ ದೇವ ಸ್ಥಾನ ಬಳಿ ಜೆಡಿಎಸ್ ಪಕ್ಷದ ಕಾರ್ಯಕರ್ತ ರೊಂದಿಗೆ ತೆರಳಿ ದೇಣಿಗೆ ನೀಡಿದ ಬಳಿಕ ಮಾತನಾಡಿ,
ತಾಲೂಕಿನ ಪ್ರತಿ ಗ್ರಾಮಕ್ಕೂ ಸಿಸಿ ರಸ್ತೆ ಸೇರಿದಂತೆ ಇನ್ನೂ ಹಲವಾರು ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಿದ್ದೇವೆ. ತಾಲೂಕಿನ ಅಭಿವೃದ್ಧಿಯ ಬಗ್ಗೆ ಎಲ್ಲಾ ಸಾರ್ವಜನಿಕರಿಗೆ ನಮ್ಮ ಮುಖಂಡರು ತಿಳಿಸುವಂತೆ ಪಕ್ಷ ಸಂಘಟನೆ ಮಾಡಬೇಕು ಎಂದು ತಿಳಿಸಿದರು.

ತಾಲೂಕಿನ ವಿವಿಧ ಧಾರ್ಮಿಕ ದೇವಾಲಯಗಳಿಗೆ ದೇಣಿಗೆ ನೀಡುವ ಮೂಲಕ ನಿಸರ್ಗ ನಾರಾಯಣ ಸ್ವಾಮಿ ಅವರು ಬಡವರ, ಹಿಂದುಳಿದವರ, ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಮಾದರಿ ಯಾಗಿದ್ದಾರೆಂದು ತಾಲೂಕು ವ್ಯವಸಾಯ ಸೇವಾ ಸಹಕಾರ ಸಂಘದ ಅದ್ಯಕ್ಷ ಬೂದಿಗೆರೆ ಮುನಿರಾಜು ತಿಳಿಸಿದರು.

ಈ ಸಂದರ್ಭದಲ್ಲಿ ಬೂದಿಗೆರೆ ಜೆಡಿಎಸ್ ಮುಖಂಡ ರಾದ ರಾಮಾಂಜೀನಯ ದಾಸ್, ಶ್ರೀನಾಥ್ ಗೌಡ, ಬಾಬು ಸೇರಿದಂತೆ ನೂರಾರು ಪಕ್ಷದ ಕಾರ್ಯಕರ್ತರು, ದೇವಸ್ಥಾನ ಆಡಳಿತ ಮಂಡಳಿ, ಊರಿನ ಭಕ್ತಾದಿಗಳು ಹಾಜರಿದ್ದರು.