ಗೀತಮ್ ಯೂನಿವರ್ಸಿಟಿ ಯಲ್ಲಿ ರೋಬೋಟಿಕ್ ಆರ್ಟಿಫಿಷಿಯಲ್ ವಿಭಾಗ ಉದ್ಘಾಟನೆ

ದೊಡ್ಡಬಳ್ಳಾಪುರ:ತಾಲೂಕಿನ ನಾಗದೇನಹಳ್ಳಿ ಬಳಿಯ ಗೀತಂ ಯೂನಿರ್ವಸಿಟಿಯಲ್ಲಿ ಸಿರೆನಾ ಟೆಕ್ನೋಲಾಜೀಸ್ ಸಹಭಾಗಿತ್ವದಲ್ಲಿ ನೂತನವಾಗಿ ರೊಬೋಟಿಕ್‌, ಆರ್ಟಿಫಿಷಿಯಲ್ ಆರ್ &‌ ಡಿ ವಿಭಾಗವನ್ನು ಎಂಜಿನಿಯರಿಂಗ್ ಕಾಲಿನ್ಸ್ ಏರೋಸ್ಪೇಸ್ ನ ಉಪಾಧ್ಯಕ್ಷ ಸವ್ಯಸಾಚಿ ಶ್ರೀನಿವಾಸ್ ಅವರು ಉದ್ಘಾಟನೆ ಮಾಡಿದರು.

ಉದ್ಘಾಟನೆ ನಂತರ ಮಾಧ್ಯಮದವರೊಂದಿಗೆ ಗೀತಂ ಯೂನಿರ್ವಸಿಟಿಯ ಉಪಕುಲಪತಿ ಪ್ರೊ. ಕೆ.ಎನ್ ಎಸ್ ಆರ್ಚಾಯ ಮಾತನಾಡಿ, ಗೀತಂ ಯೂನಿರ್ವಸಿಟಿಯಲ್ಲಿ ಸಿರೆನಾ ಟೆಕ್ನೋಲಾಜೀಸ್ ಸಹಭಾಗಿತ್ವದಲ್ಲಿ ನೂತನವಾಗಿ ರೊಬೋಟಿಕ್‌, ಆರ್ಟಿಫಿಷಿಯಲ್ ಆರ್ &‌ ಡಿ ವಿಭಾಗವನ್ನು ಪ್ರಾರಂಭ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ಉಪಯೋಗವಾಗಲಿದೆ. ರೊಬೋಟಿಕ್‌, ಆರ್ಟಿಫಿಷಿಯಲ್ ಆರ್ &‌ ಡಿ ಕೋರ್ಸ್ ಮುಗಿಯುವದೊಳಗೆ ಒಳ್ಳೆ ಸಂಬಳ ಸಿಗುವ ಕೆಲಸ ಪಡೆಯಬಹುದು ಎಂದರು.

ಸಿರೆನಾ ಟೆಕ್ನೋಲಾಜೀಸ್ ಕಂಪನಿಗೆ ನಮ್ಮ ಕಾಲೇಜಿನಿಂದ ಈಗಾಗಲೇ 11 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇದು ನಮ್ಮ ಯೂನಿರ್ವಸಿಟೆಗೆ ಹೆಮ್ಮೆಯ ಸಂಗತಿ. ಮುಂದೆ ಈ ಕೋರ್ಸ್ ಪಡೆದ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗ ಸಿಗುವಂತೆ ಆಗಲಿ ಎಂದು ಆಶಿಸಿದರು.

ನಾಲ್ಕು ವರ್ಷಗಳ ರೋಬೋಟಿಕ್ ಮತ್ತು ಎಐ ಇಂಟೆಲಿಜೆನ್ಸ್ ಕೋರ್ಸ್ ವಿದ್ಯಾರ್ಥಿಗಳನ್ನು ಪರಿಗಣಿತರಾಗಿಸುವುದಷ್ಟೇ ಅಲ್ಲದೇ ಪ್ರಸ್ತುತ ಸ್ಪರ್ಧಾತ್ಮಕ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳಿಗೆ ಪ್ರಯೋಗಿಕವಾಗಿ ರೋಬೋಟಿಕ್ ಸೈನ್ಸ್ ಕಲಿಕೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ನಮ್ಮ ಗೀತಂ ವಿಶ್ವವಿದ್ಯಾಲಯವು ನೂತನ ಪ್ರಯತ್ನಕ್ಕೆ ಮುಂದಾಗಿದ್ದು, ನಮ್ಮ ಪ್ರಯತ್ನಕ್ಕೆ ಸಿರೆನಾ ಟೆಕ್ನೋಲಾಜೀಸ್ ಸಹಕಾರ ನೀಡಿದೆ ಎಂದರು.

ವಿದ್ಯಾರ್ಥಿಗಳನ್ನು ಕಲಿಕಾ ಹಂತದಲ್ಲೇ ಪ್ರಾಯೋಗಿಕವಾಗಿ ಪರಿಣಿತಿಪಡೆಯಲು ಸಹಕಾರಿಯಾಗಿದೆ. ಸತತ ಮೂರು ತಿಂಗಳ ನಮ್ಮೆಲ್ಲರ ಪ್ರಯತ್ನ‌ ಇಂದು ಇದು ಫಲದಾಯಕವಾಗಿದೆ ಎಂದರು.

ಈ ವೇಳೆ ಸಿರೆನಾ ಟೆಕ್ನೋಲಾಜೀಸ್ ನ ಹರಿಹರನ್ ಭೋಜನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.