ಹಾಡೋನಹಳ್ಳಿ ವಿ.ಎಸ್.ಎಸ್.ಎನ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ
ದೊಡ್ಡಬಳ್ಳಾಪುರ:ತಾಲ್ಲೂಕಿನ,ತೂಬಗೆರೆ ಹೋಬಳಿ ಹಾಡೋನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ 2 ವರ್ಷದಿಂದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ. ಮುನೇಗೌಡ ಇವರ ವಿರುದ್ದ 11 ಜನ ನಿರ್ದೇಶಕರು ಅವಿಶ್ವಾಸ ಮಂಡನೆ ಮಾಡಿದರು.
ವ್ಯವಸಾಯ ಸೇವಾ ಸಹಕಾರ ಸಂಘದ ಎಲ್ಲಾ ನಿರ್ದೇಶಕರು ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ತಿರುಮಗೊಂಡನಹಳ್ಳಿ ಗ್ರಾಮದ ಹೆಚ್ ನಂಜೇಗೌಡರವರನ್ನು ನನ್ನನ್ನು ಆಯ್ಕೆ ಮಾಡಬೇಕೆಂದು ತೀರ್ಮಾನ ಕೈಗೊಂಡಿದ್ದರು. ಅದರೆ ಕೊನೆಯ ಕ್ಷಣದಲ್ಲಿ ಹಾಡೋನಹಳ್ಳಿಯ ಮುನೇಗೌಡ ಎಂಬುವರಿಗೆ ಒಂದು ವರ್ಷ ಅಧ್ಯಕ್ಷರಾಗಲು ಅವಕಾಶ ನೀಡಲಾಗಿತ್ತು ಅದರೆ ಅಧಿಕಾರ ಹಸ್ತಾಂತರ ಮಾದಿದ್ದಾಗ ಅವಿಶ್ವಾಸ ಮುಂಡನೆ ಮಾಡಲಾಗಿದೆ.
ಮೂರು ವರ್ಷಗಳ ಹಿಂದೆ ಹಾಡೋನಹಳ್ಳಿಯಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆ ನಡೆದಿತ್ತು.ಚುನಾವಣೆಯಲ್ಲಿ 10 ಜನ ಪುರುಷ ಅಭ್ಯರ್ಥಿಗಳು,2 ಮಹಿಳಾ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸಿದ್ದರು. ಕಾಂಗ್ರೆಸ್ ನ ಹಿರಿಯ ಮುಖಂಡರು,ಪಕ್ಷದ ಕಾರ್ಯಕರ್ತರು ಸೇರಿ ಮೊದಲ ಬಾರಿಗೆ ಒಂದು ವರ್ಷಕ್ಕೆ ಸೀಮಿತವಾಗಿ ಗಂಗ ಸಂದ್ರದ ಶ್ರೀಧರ್ ಜಿ.ಕೆ ಅವರನ್ನು ಆಯ್ಕೆ ಮಾಡಲಾಗಿತ್ತು.
ಪ್ರತಿ ನಿರ್ದೇಶಕರಿಗೂ ಅಧ್ಯಕ್ಷರ ಅವಕಾಶ ನೀಡುವ ಸಲುವಾಗಿ ಪ್ರತಿ ನಿರ್ದೇಶಕರಿಗೂ ಒಂದೂಂದು ವರ್ಷ ದಂತೆ ತೀರ್ಮಾನ ಮಾಡಲಾಗಿತ್ತು ಮುನೇಗೌಡರು ಅಧ್ಯಕ್ಷರಾಗಿ ಎರಡು ವರ್ಷವಾಗಿದೆ ಅದರಿಂದ ಅವಿಶ್ವಾಸ ಮಂಡನೆ ಮಾಡಲಾಗಿದೆ ಎಂದು ಅವಿಶ್ವಾಸ ಮಂಡಿಸಿರುವ ನಿರ್ದೇಶಕರ ಹೇಳಿಕೆ ನೀಡಿದ್ದಾರೆ.
————————————————————————–
ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ನಿವೇಶನ ಮುಂಜೂರು ಮಾಡಿಸಿ ಸೇವಾ ಸಹಕಾರ ಸಂಘಕ್ಕೆ ಹಸ್ತಾಂತರ ಮಾಡುವರೆವಿಗೂ ಅಧ್ಯಕ್ಷರಾಗಿರಲೂ ಅವಕಾಶ ಕೊಡಿ ತದನಂತರ ನಾನೇ ಬೇರೆಯವರಿಗೆ ಅವಕಾಶ ನೀಡುತ್ತೇನೆ
ಮುನೇಗೌಡ ಎಂ.ಅಧ್ಯಕ್ಷ
ವ್ಯವಸಾಯ ಸೇವಾ ಸಹಕಾರ ಸಂಘ
ಹಾಡೋನಹಳ್ಳಿ