ಕೊಳ್ಳೇಗಾಲದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆಗೆ ಸಿದ್ದತೆ

ಚಾಮರಾಜನಗರ: ಏಪ್ರಿಲ್ 14 ರಂದು ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ ಜಯಂತಿ ಆಚರಣೆ ಕುರಿತು ಕೊಳ್ಳೇಗಾಲದ ಭೀಮನಗರದ ಯಜಮಾನರುಗಳು ಮುಖಂಡರುಗಳು ಪಟ್ಟಣದ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದರು

ಪತ್ರಿಕಾಗೋಷ್ಟಿಯಲ್ಲಿ ಯಜಮಾನರಾದ ಚಿಕ್ಕಮಾಳಿಗೆ ಮಾತನಾಡಿ
ಡಾ. ಬಿ. ಆರ್. ಅಂಬೇಡ್ಕರ್ ರವರ 134 ನೇ ಜಯಂತಿಯನ್ನು ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ
ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆ ಹಿನ್ನೆಲೆ ಭೀಮನಗರದ ಯಜಮಾನರುಗಳು ಹಾಗೂ ಮುಖಂಡರುಗಳ ವತಿಯಿಂದ ಏ.11 ರಿಂದ 14 ವರೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಏ.11 ರಂದು ಸಂಜೆ 5 ಗಂಟೆಗೆ ಸಾವಿತ್ರಿ ಬಾಪುಲೆ ಮಂದಿರದಲ್ಲಿ ಭೀಮ ನಗರದ ವಕೀಲರಾದ ಎನ್.ಬಸವರಾಜು ನೇತೃತ್ವದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಏ.12 ರಂದು ಮುಂಜಾನೆ ವೈದ್ಯರು ಮತ್ತು ಶ್ರುಶೂಷಕ ಸಿಬ್ಬಂದಿಗಳಾಗಿ ಸೇವೆ ಸಲ್ಲಿಸುತ್ತಿರುವ ಭೀಮ ನಗರದ ನಿವಾಸಿಗಳಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಯುವಕರು ಹಾಗೂ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ. ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು
.ಏ.13 ರಂದು ಬೆಂಗಳೂರು ರಸ್ತೆಯಲ್ಲಿರುವ ಬಸವೇಶ್ವರ ರೈಸ್ ಮಿಲ್ ಬಳಿಯ, ಭೀಮ ನಗರದ ಜಾಗದಲ್ಲಿ
, ಭೀಮನಗರದ ಯುವಕರು ಹಾಗೂ ಕಲಾವಿದರಿಂದ ಸಂಜೆ 4 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಹಾಡುಗಾರಿಕೆ, ನೃತ್ಯ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
ನಂತರ ಏಪ್ರಿಲ್ 14 ರಂದು ಮುಂಜಾನೆ 6 ರಿಂದ 9 ಗಂಟೆ ವರೆಗೆ ಭೀಮನಗರದ ಬಡಾವಣೆಗಳಲ್ಲಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ ತದನಂತರ ಬಾಬಾ ಸಾಹೇಬರ ಭಾವಚಿತ್ರದ ಮೆರವಣಿಗೆ ಕಾರ್ಯಕ್ರಮ ನಡೆಯಲಿದ್ದು
ಭೀಮ ನಗರದ ಹೆಬ್ಬಾಗಿಲಿನಿಂದ ಹೊರಟು
ರಾಜಕುಮಾರ್ ರಸ್ತೆ, ಅಂಬೇಡ್ಕರ್ ರಸ್ತೆ, ಮೂಲಕ ತೆರಳಿ ಅಂಬೇಡ್ಕರ್ ವೃತ್ತದಲ್ಲಿ
ಡಾ ಬಿ. ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಕಾರ್ಯಕ್ರಮ ನಡೆಯಲಿವೆ
ನಂತರ ತಾಲ್ಲೂಕು ಆಡಳಿತ ವತಿಯಿಂದ ನಡೆಯಲಿರುವ ಬಾಬಾ ಸಾಹೇಬರ ಜಯಂತಿ, ಆಚರಣೆಗೆ ಸೇರಿಕೊಳ್ಳಲಾಗುವುದು ಮತ್ತು ಏಪ್ರಿಲ್ 14 ರ ಸಂಜೆ ಭೀಮನಗರದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ತಾಲ್ಲೂಕು ವ್ಯಾಪ್ತಿಯ ಪಟ್ಟಣ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು

ಈ ಕಾರ್ಯಕ್ರಮಕ್ಕೆ ಸಚಿವರಾದ ಎಚ್ ಸಿ ಮಹದೇವಪ್ಪ, ಸಂಸದರಾದ ಸುನೀಲ್ ಬೋಸ್ ಶಾಸಕರುಗಳಾದ ಎಆರ್ ಕೃಷ್ಣಮೂರ್ತಿ, ಎಂ ಆರ್ ಮಂಜುನಾಥ್, ಮುಂತಾದ ಪ್ರಮುಖರಿಗೆ ಮತ್ತು ಎಲ್ಲಾ ಗ್ರಾಮದ ಮುಖಂಡರಿಗೂ ಆಹ್ವಾನ ನೀಡಿದ್ದು, ಈ ಬಾರಿ ಅದ್ದೂರಿಯಾಗಿ ನಡೆಯಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿ ಆಚರಣೆಗೆ ಎಲ್ಲರೂ ಸಾಕ್ಷಿ ಆಗುವಂತೆ ಆಗಮಿಸಬೇಕೆಂದು ಪತ್ರಿಕಾಗೋಷ್ಠಿ ಮೂಲಕ ಮನವಿ ಮಾಡಿದರು.

ಬಾಬಾ ಸಾಹೇಬ್ ಡಾ. ಬಿ ಆರ್, ಅಂಬೇಡ್ಕರ್ ಜಯಂತಿಯನ್ನು ಹಿಂದಿನಿಂದಲೂ ಹಿರಿಯರಾದ ದೊರೆರಾಜ್, ಶಿವಲಂಕಾರಯ್ಯ ಎಚ್ ಕೃಷ್ಣಸ್ವಾಮಿ, ಮುಂತಾದ ಹಿರಿಯರು ಬಹಳ ಯಶಸ್ವಿಯಾಗಿ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬಂದಿದ್ದಾರೆ.
ಅವರ ಪ್ರೇರಣೆಯಂತೆ ಭೀಮ ಬಂಧುಗಳಾದ ನಾವು ಕೂಡ ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕೆಂಬುದೇ ನಮ್ಮ ಆಶಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಭೀಮ ನಗರದ ಯಜಮಾನರಾದ ವರದರಾಜು, ನಟರಾಜು,ಸಿದ್ದಣ್ಣ, ಪಾಪಣ್ಣ, ಸನತ್ ಕುಮಾರ್, ಪಾಪಣ್ಣ, ಸಿದ್ದಪ್ಪ, ಅಂಬೇಡ್ಕರ್ ಜಯಂತಿ ಪ್ರಚಾರ ಸಮಿತಿ ಪದಾಧಿಕಾರಿಗಳಾದ ದಿಲೀಪ್ ಸಿದ್ದಪ್ಪಾಜಿ,ಕಿರಣ್, ಸಿದ್ದಪ್ಪಾಜಿ, ಕಿರಣ್, ಮಾಧ್ಯಮ ಸಮಿತಿ ಮುಖ್ಯಸ್ಥ ನಿಂಪು ರಾಜೇಶ್ ಮುಂತಾದವರು ಇದ್ದರು

ವರದಿ ಆರ್ ಉಮೇಶ್ ಮಲಾರಪಾಳ್ಯ