ಅರ್ಕಾವತಿ ನದಿ ಹೋರಾಟ ಸಮಿತಿ ವತಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ರವರ ಜಯಂತಿ ದಿನದಂದು ದಿನದ ಉಪವಾಸ ಸತ್ಯಾಗ್ರಹ

ದೊಡ್ಡಬಳ್ಳಾಪುರ : ಏಪ್ರಿಲ್ 14 ಡಾ. ಬಿ.ಆರ್ ಅಂಬೇಡ್ಕರ್ ರವರ ಜಯಂತಿ ದಿನದಂದು ಸಂವಿಧಾನ ಉಳಿಸಿ ಕಾನೂನು ರಕ್ಷಣೆಗಾಗಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಅರ್ಕಾವತಿ ನದಿ ಹೋರಾಟ ಸಮಿತಿ ವತಿಯಿಂದ ತಾಲೂಕು ಕಚೇರಿ ಮುಂದೆ ನಡೆಸುತ್ತಿದ್ದೇವೆ ಎಂದು ಸಮಿತಿಯ ಸದಸ್ಯರು ತಿಳಿಸಿದರು. ತಾಲ್ಲೂಕಿನ ದೊಡ್ಡ ತುಮಕೂರು ಗ್ರಾಮ ಪಂಚಾಯಿತಿ ಹಾಗೂ ಮಜಾರಹೊಸಹಳ್ಳಿ ಗ್ರಾಮ ಪಂಚಾಯಿತಿಗಳ ಸಂಪೂರ್ಣ ಜೀವ ಜಲವು ಹಾಳಾಗಿದ್ದು ಪ್ರಸ್ತುತ ನಮ್ಮ ಭಾಗದಲ್ಲಿ ಅನೇಕ ಜನರು ಕ್ಯಾನ್ಸ‌ರ್ ಕಾಯಿಲೆಗೆ ತುತ್ತಾಗಿ ಕಿಡ್ನಿ ಸೇರಿದಂತೆ ಹಲವು ಅಂಗಾಂಗ ವೈಫಲ್ಯಗಳಿಂದ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮ ಹೋರಾಟ ಹಲವು ವರ್ಷಗಳಿಂದ ನಿರಂತರವಾಗಿ ನೆಡೆಸುತ್ತಿದ್ದರು ಯಾವುದೇ ಪ್ರಯೋಜನವಾಗಿಲ್ಲ ಹಾಗಾಗಿ ಏಪ್ರಿಲ್ 14 ರಂದು ಸಂಕೇತಿಕ ಹೋರಾಟ ( ಉಪವಾಸ ಸತ್ಯಗ್ರಹ ) ನೆಡೆಸುತ್ತಿದೆ ಎಂದು ರೈತ ಮುಖಂಡ ವಸಂತ್ ಕುಮಾರ್ ತಿಳಿಸಿದರು.

ಒತ್ತಾಯಗಳೇನು…..???

1. ದೊಡ್ಡ ತುಮಕೂರು ಗ್ರಾಮ ಪಂಚಾಯಿತಿ ಹಾಗೂ ಮಜುರ ಹೊಸಳ್ಳಿ ಗ್ರಾಮ ಪಂಚಾಯಿತಿಗಳಿಗೆ ಕುಡಿಯಲು ಮಳೆ ಕೊಯ್ದು ಮಾಡಿಕೊಡಬೇಕು.

2. ಜನ ಬಳಸಲು ನೀರನ್ನು ಈ ಹಿಂದೆ ನೀಡಿದಂತೆ ಪಕ್ಕದ ಪಂಚಾಯಿತಿಯಿಂದ ಕೊಳವೆ ಕೊರೆಸಿ ನೀರು ಕೊಡಬೇಕು.

3. ದೊಡ್ಡಬಳ್ಳಾಪುರ ನಗರಸಭೆ, ಮತ್ತು ಭಾಷೆಟಿಹಳಿ ಪಟ್ಟಣ ಪಂಚಾಯಿತಿ ಬಿಡುವ ಕೊಳಚೆನೀರಿಗೆ ಮೂರನೇ ಹಂತದ ಶುದ್ದೀಕರಣ ಘಟಕ ಸ್ಥಾಪಿಸಬೇಕು.

4. ಕಾರ್ಖಾನೆಗಳು ಕಾನೂನು ವಿರುದ್ಧವಾಗಿ ನೀರು ಬಿಡುತ್ತಿರುವ ಕಾರ್ಖಾನೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು.

5. ಮಾಲಿನ್ಯ ನಿಯಂತ್ರಣ ಮಂಡಳಿ ದೊಡ್ಡಬಳ್ಳಾಪುರಕ್ಕೆ ವರ್ಗಾಯಿಸಬೇಕು.

6. ಕೈಗಾರಿಕೆಗಳಿಗೆ ಕೊಳವೆಬಾವಿ ಕೊರೆಯಲು ಇನ್ನು ಮುಂದೆ ಅನುಮತಿ ಕೊಡಬಾರದು.

7. ಕೆಲ ಕಾರ್ಖಾನೆಗಳು ತಮ್ಮಲ್ಲಿ ಇರುವ ಕೊಳವೆ ಬಾವಿಗಳಿಗೆ ಕೊಳಚೆ ನೀರನ್ನು ಬಿಡುತ್ತಿದ್ದಾರೆ ಅಂತಹ ಕಾರ್ಖಾನೆಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು

ಸುದ್ದಿಗೋಷ್ಠಿಯಲ್ಲಿ ಅರ್ಕಾವತಿ ನದಿ ಹೋರಾಟ ಸಮಿತಿಯ ವಸಂತ್ ಕುಮಾರ್, ರಮೇಶ್, ಸತೀಶ್ ಕುಮಾರ್, ಮುನಿಕೃಷ್ಣ, ನರಸಿಂಹಮೂರ್ತಿ,ಕಾಳೆಗೌಡ, ವಿಜಯ್ ಕುಮಾರ್, ಗೋಪಾಲ್, ರಮೇಶ್, ರೈತ ಸಂಘ ನಾರಾಯಣಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.