ಪರಿಶಿಷ್ಟ ಜನಾಂಗದ ಬಲಗೈ ಸಮಾಜಕ್ಕೆ ಒಳ ಮೀಸಲಾತಿ ಕಲ್ಪಿಸಲು ವೆಂಕಟರಮಣಸ್ವಾಮಿ(ಪಾಪು) ಒತ್ತಾಯ

ಚಾಮರಾಜನಗರ:ಪರಿಶಿಷ್ಟ ಜನಾಂಗದ ಬಲಗೈ ಸಮಾಜಕ್ಕೆ ಒಳ ಮೀಸಲಾತಿ ಕಲ್ಪಿಸಲು ಸರ್ಕಾರ ಮುಂದಾಗಿದ್ದು ಕೆಲವು ನ್ಯೂನತೆಗಳು ಇರುವುದರಿಂದ ಕಾಲಾವಕಾಶ ನೀಡಬೇಕೆಂದು ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ(ಪಾಪು) ಒತ್ತಾಯಿಸಿದ್ದಾರೆ.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಒಳ ಮೀಸಲಾತಿ ಕುರಿತು ನಡೆದ ಬಲಗೈ ಸಮುದಾಯದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಚಾಮರಾಜನಗರ ಜಿಲ್ಲೆಯಲ್ಲಿ ಬಲಗೈ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಜಾತಿಗಣತಿ ಸಂದರ್ಭದಲ್ಲಿ ಮನೆ ಮನೆಗೆ ಬರುವಂತಹ ವೇಳೆ ಸಮಾಜದ ಬಂಧುಗಳು ಹೊಲೆಯ ಎಂಬ ಸಮುದಾಯದ ಹೆಸರನ್ನು ಬಳಸುವ ಮೂಲಕ ಸಮರ್ಪಕ ಒಳ ಮೀಸಲಾತಿ ಜಾರಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ರಾಜ್ಯದಲ್ಲಿ ನಡೆಯುತ್ತಿರುವ ಒಳ ಮೀಸಲಾತಿಯ ಜಾತಿ ಗಣತಿಯಲ್ಲಿ ಎಡಗೈ ಮತ್ತು ಬಲಗೈ ಸಮಾಜದ ನಡುವೆ ಆಂತರಿಕ ಭಿನ್ನಾಭಿಪ್ರಾಯಗಳು ಉಂಟಾಗಿದೆ ಈ ಸಮಸ್ಯೆ ಬಗೆಹರಿಸಲು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ವರದಿ ಸಂಗ್ರಹಿಸಲು ಕಾಲಾವಕಾಶ ಕೇಳುತ್ತಿದ್ದಾರೆ, ಆದರೆ ಸರ್ಕಾರ ಅವಕಾಶ ನೀಡುತ್ತಿಲ್ಲ ಇದರಿಂದ ಆದಿ ಕರ್ನಾಟಕ ಸಮಾಜಕ್ಕೆ ಸೇರಿರುವ ಉಪ ಪಂಗಡಗಳಿಗೆ ಅನ್ಯಾಯ ಉಂಟಾಗುತ್ತಿದೆ, ಹೀಗಾಗಿ ಸರ್ಕಾರ ಪುನರ್ ಸರ್ವೆ ಮಾಡಿಸಬೇಕು ಕಾಲಾವಕಾಶ ನೀಡಬೇಕು ಈ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ನೀಡಿರುವ ಮೀಸಲಾತಿಯನ್ನು ಸಮರ್ಪಕವಾಗಿ ಎಲ್ಲಾ ಸಮುದಾಯಗಳಿಗೂ ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂಬಂಧ ಏ.12ರಂದು ಬೆಂಗಳೂರಿನಲ್ಲಿ ನಡೆಯುವ ಸಭೆಗೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.
ಒಳ ಮೀಸಲಾತಿ ಜಾತಿಗಣತಿ ಸಂಬಂಧಿಸಿದಂತೆ ಬಲಗೈ ಸಮಾಜದವರನ್ನು ಜಾಗೃತಿಗೊಳಿಸಲು ಅತಿ ಶೀಘ್ರದಲ್ಲೇ ಸಹಸ್ರಾರು ಸಂಖ್ಯೆಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು ‌

ಇದೇ ವೇಳೆ ಬಲಗೈ ಸಮಾಜದ ವಿವಿಧ ಮುಖಂಡರು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಮುಖಂಡರಾದ ಸಿ.ಎಂ.ಶಿವಣ್ಣ, ಸಿ.ಎಂ.ಕೃಷ್ಣಮೂರ್ತಿ, ವಕೀಲ ಪ್ರಸನ್ನ ಕುಮಾರ್, ದಲಿತರಾಜ್, ಚಿನ್ನಸ್ವಾಮಿ, ನಲ್ಲೂರು ಸೋಮೇಶ್ವರ ಸೋಮವಾರಪೇಟೆ ಮಹದೇವು, ಅಯ್ಯನಪುರ ಶಿವಕುಮಾರ್, ಅಮಚವಾಡಿ ಚಂದ್ರಶೇಖರ್, ಆರ್.ಮಹದೇವು, ಕೃಷ್ಣಮೂರ್ತಿ, ನಾಗವಲ್ಲಿ ನಾಗಯ್ಯ,ಬ್ಯಾಡ್ ಮೂಡ್ಲು ಬಸವಣ್ಣ, ಪರ್ವತ್ ರಾಜ್, ಮದ್ದೂರು ಚಕ್ರವರ್ತಿ ಇರಸವಾಡಿ ಜನಾರ್ಧನ್, ಸುಭಾಷ್ ಮಾಡ್ರಳ್ಳಿ ಸೇರಿದಂತೆ ಇತರರು ಭಾಗವಹಿಸಿದ್ದರು.

ವರದಿ ಆರ್ ಉಮೇಶ್ ಮಲಾರಪಾಳ್ಯ