ದೊಡ್ಡಬಳ್ಳಾಪುರ ಕುರುಬ ಮಹಿಳಾ ಸಮಾಜ ಟ್ರಸ್ಟ್ ಅಸ್ತಿತ್ವಕ್ಕೆ

ದೊಡ್ಡಬಳ್ಳಾಪುರ: ಕುರುಬ ಮಹಿಳಾ ಸಮಾಜ ಟ್ರಸ್ಟ್ ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷರಾಗಿ ಮಂಜುಳಾ, ಗೌರವದ್ಯಾಕ್ಷೆ ಸೌಮ್ಯ, ಉಪಾಧ್ಯಕ್ಷೆ ಅನುಸೂಯ, ಪ್ರದಾನ ಕಾರ್ಯದರ್ಶಿ ಅನಿತಾ, ಖಜಾಂಚಿ ವರಲಕ್ಷ್ಮಿ, ಕಾರ್ಯಕಾರಿ ಸಂಚಾಲಕಿ ಮಾಲಾ ಕೆಂಪರಾಜ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರೂಪ, ರಾಧಾ, ಮಹಾಲಕ್ಷ್ಮಿ, ಇಂದಿರಾ ರಾಧಾ, ಸುಧಾ ಸುನಂದಾ ರವರು ನೂತನವಾಗಿ ಆಯ್ಕೆಯಾಗಿದ್ದಾರೆ.

ನೂತನವಾಗಿ ಆಯ್ಕೆಯಾದ ಕುರುಬ ಮಹಿಳಾ ಸಮಾಜದ ಪದಾಧಿಕಾರಿಗಳು ಇತ್ತೀಚೆಗೆ ಕಾಗಿನೆಲೆ ಮಹಾಸಂಸ್ಥಾನಕ್ಕೆ ಬೇಟಿ ನೀಡಿ ಇತ್ತೀಚೆಗೆ ದಾವಣಗೆರೆ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಕಾಗಿನೆಲೆ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿರವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಹಿಳಾ ಸಮಾಜದ ಪದಾಧಿಕಾರಿಗಳಿಗೆ ಆಶೀರ್ವಚನ ನೀಡಿದ ನಿರಂಜನಾನಂದ ಪುರಿ ಸ್ವಾಮಿಗಳು ಮಾತನಾಡಿ ಕುರುಬ ಸಮಾಜದಲ್ಲಿ ಪ್ರಜ್ಞಾವಂತ ಮಹಿಳಾ ವರ್ಗ ಕಡಿಮೆ ಇದ್ದು ಈ ಬಗ್ಗೆ ಕುರುಬ ಮಹಿಳಾ ಸಂಘಟನೆಗಳು ಸಮುದಾಯದ ಮಹಿಳೆಯರನ್ನು ಸಂಘಟಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಬೇಕಿದೆ. ಜೊತೆಗೆ ಅವರನ್ನು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿ ಕೊಳ್ಳುವಲ್ಲಿ ನೀವೆಲ್ಲರೂ ತೊಡಗಿಸಿ ಕೊಳ್ಳಬೇಕಿದೆ ಎಂದು ಸಲಹೆ ನೀಡಿದರು ಎಂದು ಸಮಾಜದ ಸಂಚಾಲಕಿ ಮಾಲಾ ಕೆಂಪರಾಜ್ ಹೇಳಿದರು