ಕೊಳ್ಳೇಗಾಲದಲ್ಲಿ ಶ್ರೀ ಕೈವಾರ ತಾತಯ್ಯನವರಜಯಂತೋತ್ಸವ ಆಚರಣೆ

ಕೊಳ್ಳೇಗಾಲ:ತಾಲ್ಲೂಕು ಬಲಜಿಗ( ಬಣಜಿಗ) ಜನಾಂಗದ ವತಿಯಿಂದ ಶ್ರೀ ಕೈವಾರ ತಾತಯ್ಯನವರ
ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿಯವರು ದೀಪ ಬೆಳಗಿಸಿ ಕೈವಾರ ತಾತಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಮಾಡಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ
ದೇಶದ ಶ್ರೇಷ್ಠ ಸಂತರಲ್ಲಿ ಕೈವಾರ ತಾತಯ್ಯನವರು ಕೂಡ ಒಬ್ಬರು
ಸಮಾಜ ಸುಧಾರಣೆಗೆ ಇವರ ಕೊಡುಗೆಯು ಅಪಾರವಾಗಿದೆ,
ಅಂಕುಡೊಂಕುಗಳನ್ನು ತಿದ್ದಿ ಮನುಷ್ಯರ ನಡುವೆ ಇರುವಂತ ಮೇಲುಕೀಳು ಭಾವನೆಗಳನ್ನ ಹೋಗಲಾಡಿಸಿ ಎಲ್ಲರಲ್ಲಿಯೂ ಸಮಾನ ಭಾವನೆಯನ್ನ ಬೆಳೆಸಲು ಜಾಗೃತಿಯನ್ನು ಉಂಟು ಮಾಡಿದ್ದಾರೆ, ಇವರ ಮೂಲ ಕಸುಬು ಬಳೆ ವ್ಯಾಪಾರ, ಆದರೂ ಕೂಡ ವ್ಯಪಾರ ಮಾಡುವ ಸಂದರ್ಭದಲ್ಲಿ ಮಹಿಳೆಯರಿಗೆ ಉಚಿತವಾಗಿ ಬಳೆಗಳನ್ನು ಕೊಟ್ಟು ಮನೆಗೆ ತೆರಳುತ್ತಿದ್ದರು ಎಂಬುದು ವಿಚಾರವಂತರಿಂದ ತಿಳಿದುಕೊಂಡಿದ್ದೇವೆ, ಕೈವಾರದಲ್ಲಿ ಇವರನ್ನ ದೇವರೆಂದು ಪೂಜಿಸಲಾಗುತ್ತಿದೆ, ಆದ್ದರಿಂದ ಕೊಳ್ಳೇಗಾಲದಲ್ಲಿ ಒಂದು ದೇವಾಲಯವನ್ನು ನಿರ್ಮಾಣ ಮಾಡಿಸಿಕೊಡಬೇಕು ಎಂದು ಸಮುದಾಯದ ಮುಖಂಡರು ಬೇಡಿಕೆ ಇಟ್ಟಿದ್ದಾರೆ, ನಾನು ಶಾಸಕನಾಗಿ ಎಲ್ಲಾ ವರ್ಗದ ಎಲ್ಲಾ ಸಮುದಾಯದ ಅಭಿವೃದ್ಧಿಯ ಬಗ್ಗೆ ಕಾಳಜಿಯನ್ನು ಇಟ್ಟುಕೊಂಡಿದ್ದೇನೆ ಅದರಲ್ಲೂ ಸಣ್ಣ ಸಮುದಾಯಗಳು ಮತ್ತು ಬಡವರನ್ನು ಕಂಡರೆ ವಿಶೇಷ ಕಾಳಜಿ ಮತ್ತು ಪ್ರೀತಿ, ಅವರ ಅಭಿವೃದ್ಧಿಗೆ ಹೆಚ್ಚು ಕಾಳಜಿ ವಹಿಸುತ್ತೇನೆ ಯಾರಾದರೂ ಬಡವರು ನನ್ನನ್ನು ಮನೆಗೆ ಆಹ್ವಾನಿಸಿದರೆ ನಾನು ಹೋಗಿ ಅವರ ಮನೆಯಲ್ಲಿ ಊಟ ಮಾಡಿ ಬಂದಿರುತ್ತೇನೆ ಆಗಾಗಿ ಅವರ ಕಷ್ಟಗಳನ್ನು ಹತ್ತಿರದಿಂದ ನೋಡಿರುವುದರಿಂದ ಅವರಿಗೆ ನನ್ನ ಕೈಲಾದಷ್ಟು ಸಹಾಯ ಮಾಡಿ ಅಭಿವೃದ್ಧಿ ಹೊಂದಲು ಸಹಕಾರ ನೀಡಿರುತ್ತೇನೆ, ಆದ್ದರಿಂದ ನಿಮ್ಮೆಲ್ಲರ ಪ್ರೀತಿ ಅಭಿಮಾನದಿಂದ 19 ವರ್ಷಗಳ ವನವಾಸದಿಂದ, ಅತ್ಯಾಧಿಕ ಬಹುಮತಗಳಿಂದ ನೀವೆಲ್ಲರೂ ನನ್ನನ್ನು ಗೆಲ್ಲಿಸಿ ಶಾಸಕನಾಗಿ ಆಯ್ಕೆ ಮಾಡಿದ್ದೀರಾ ಆದ್ದರಿಂದ ನಿಮ್ಮೆಲ್ಲರ ಅಭಿವೃದ್ಧಿ ನನ್ನ ಹೊಣೆಯಾಗಿದೆ, ಕೊಳ್ಳೇಗಾಲದಲ್ಲಿ ಕೈವಾರ ತಾತಯ್ಯನವರ ದೇವಾಲಯವನ್ನು ನಿರ್ಮಿಸಲು ಬೇಡಿಕೆ ಇಟ್ಟಿದ್ದೀರಾ ನಾನು ಕೂಡ ಸರ್ಕಾರದ ಜೊತೆ ಮಾತನಾಡಿ ದೇವಾಲಯ ನಿರ್ಮಾಣಕ್ಕೆ ವ್ಯವಸ್ಥೆ ಮಾಡಿಸುತ್ತೇನೆ ಎಂದರು.

ಈ ಕಾರ್ಯಕ್ರಮದಲ್ಲಿ ಬಲಿಜಿಗ ಕುಲಬಾಂಧವರ ಸಂಘದ ಅಧ್ಯಕ್ಷ ಉದಯ ಕುಮಾರ್, ಹನೂರು ಮುಖಂಡರಾದ ವೆಂಕಟೇಶ್, ಸಂಸದ ಜಗದೀಶ್ ಶೆಟ್ಟರ್ ರವರ ಆಪ್ತ ಸಹಾಯಕ ಗಿರೀಶ್ ಬಾಬು, ನಗರಸಭೆ ಸದಸ್ಯರು ಪರಮೇಶ್ವರಯ್ಯ, ಬಿಜೆಪಿ ಮುಖಂಡ ಚಿಕ್ಕಲಿಂಗೆಗೌಡ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೋಟೇಶ್ ಹಾಗೂ ಇತರರು ಇದ್ದರು.

ವರದಿ ಆರ್ ಉಮೇಶ್ ಮಲಾರಪಾಳ್ಯ