ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ
ತಾಲೂಕಿನ ಆಲಹಳ್ಳಿ ಗ್ರಾಮದ ದಂಪತಿ, ವಿದೇಶದಿಂದ ಬಂದು‌ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಹಬ್ಬಕ್ಕೆ ಕಳೆ‌ ತಂದರು.ಆಲಹಳ್ಳಿ ಗ್ರಾಮದ ಅಶೋಕ್ ನಾರಾಯಣಸ್ವಾಮಿ ಹಾಗೂ ದಿವ್ಯಾ ಅಶೋಕ್ ದಂಪತಿಯು ಇಂಗ್ಲೆಂಡಿನಿಂದ ಬಂದು ಸ್ವಗ್ರಾಮದ ಸರ್ಕಾರಿ ಶಾಲೆ ಮತಗಟ್ಟೆಯಲ್ಲಿ ಮತ ಚಲಾವಣೆ‌ ಮಾಡಿದರು.

ಅರಳುಮಲ್ಲಿಗೆ ಗ್ರಾಮ‌ ಪಂಚಾಯ್ತಿ ಸದಸ್ಯೆ ಪುಷ್ಪಲತಾ‌ ಮಂಜುನಾಥ್ ಅವರ ಬಾವ ಅಶೋಕ್ ನಾರಾಯಣಸ್ವಾಮಿ ಅವರು ಕುಟುಂಬ ಸಮೇತ ಇಂಗ್ಲೆಂಡಿನಲ್ಲಿ ನೆಲೆಸಿದ್ದು, ಮತ ಚಲಾಯಿಸುವ ಸಲುವಾಗಿ ಮೇ 05 ರಂದು ಗ್ರಾಮಕ್ಕೆ ಬಂದಿದ್ದರು.

ದಯಾನಂದಸಾಗರ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿರುವ ಅಶೋಕ್ ಅವರು ಈ‌ ಹಿಂದೆ ಬೆಂಗಳೂರಿನ‌ ಅಕ್ಸೆಂಚರ್ ಕಂಪೆನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಇದೇ ಕಂಪೆನಿಯ ಇಂಗ್ಲೆಂಡ್ ಶಾಖೆಯಲ್ಲಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಕುಟುಂಬ ಸಮೇತ ಇಂಗ್ಲೆಂಡಿನಲ್ಲಿಯೇ ವಾಸವಾಗಿದ್ದಾರೆ.

ಮೇ 10 ರಂದು ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸ್ವಗ್ರಾಮ ಆಲಹಳ್ಳಿಯಲ್ಲಿ ಮತ ಚಲಾಯಿಸಿದರು ಎಂದು ಅಶೋಕ್ ನಾರಾಯಣಸ್ವಾಮಿ ಅವರ ಸೋದರ ಮಂಜುನಾಥ್ ತಿಳಿಸಿದರು. ವಿದೇಶದಿಂದ ಬಂದು‌ ಮತ ಚಲಾಯಿಸಿದ ದಂಪತಿಯ ಬದ್ಧತೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ಬಾರಿ 85.08 ರಷ್ಟು ಮತದಾನ ನೆಡೆದಿದೆ.

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 2.14.182ಮತಗಳಿಗೆ
1.81.026 ಮತಗಳು ಚಲಾವಣೆಯಾಗಿವೆ

90.969 ಪುರುಷ ಮತದಾರರು ಹಕ್ಕು ಚಲಾವಣೆ ಮಾಡಿದ್ದಾರೆ.
90.055ಮಹಿಳಾ ಮತದಾರರು ಹಕ್ಕು ಚಲಾವಣೆ ಮಾಡಿದ್ದಾರೆ.
ಇತರೆ ಇಬ್ಬರು ಮತದಾರರು ಹಕ್ಕು ಚಲಾವಣೆ ಮಾಡಿದ್ದಾರೆ.