ದೊಡ್ಡ ಮೂಡಳ್ಳಿಯಲ್ಲಿ ಮಳೆ ಗಾಳಿಗೆ ಹಾರಿದ ಮನೆ ಮೇಲ್ಚಾವಣಿ: ಪ್ರಾಣಪಾಯದಿಂದ ಮಹಿಳೆ ಪಾರು
ಚಾಮರಾಜನಗರ: ತಾಲ್ಲೂಕಿನ ದೊಡ್ಡ ಮೂಡಳ್ಳಿ ಗ್ರಾಮದಲ್ಲಿ ಭಾನುವಾರ ಸುರಿದ ಭಾರಿ ಗಾಳಿ ಮಳೆಗೆ ಗ್ರಾಮದ ಲತಾಕುಮಾರ ರವರ ಮನೆಯ ಮೇಲ್ಚಾವಣಿಯು ಸಂಪೂರ್ಣ ಹಾರಿ ಹೋಗಿದ್ದು, ಪ್ರಾಣಾಪಾಯದಿಂದ ಮಹಿಳೆ ಪಾರಾಗಿರುವ ಘಟನೆ ನಡೆದಿದೆ.
ಈ ಬಗ್ಗೆ ಮನೆ ಕಳೆದುಕೊಂಡ ಲತಾ ಕುಮಾರ್ ಅವರು ಬೇರೆಡೆ ತಾತ್ಕಾಲಿಕವಾಗಿ ಗುಡಿಸಲು ನಿರ್ವಿಸಿಕೊಂಡು ಜೀವನ ನಡೆಸುತ್ತಿದ್ದಾರೆ.
ಈ ಬಗ್ಗೆ ಸ್ಥಳೀಯ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಸ್ಥಳೀಯ ಗ್ರಾಮ ಪಂಚಾಯಿತಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.ನನಗೆ ಮನೆ ಇಲ್ಲದೆ ಗುಡಿಸಲು ನಿರ್ಮಿಸಿಕೊಂಡಿರುವುದರಿಂದ ಆದಷ್ಟು ಬೇಗ ಮನೆ ನಿರ್ಮಿಸಿ ಕೊಡುವುದರ ಜೊತೆಗೆ ಪರಿಹಾರ ಕೊಡಿಸಿಕೊಡಬೇಕೆಂದು ಲತಾ ಕುಮಾರ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸ್ಥಳಕ್ಕೆ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಮೂರ್ತಿ ಹಾಗೂ ಗ್ರಾಮಸ್ಥರು ಭೇಟಿ ನೀಡಿ ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ.
ವರದಿ ಆರ್ ಉಮೇಶ್ ಮಲಾರಪಾಳ್ಯ