ಮಾಂಬಳ್ಳಿ ಪೊಲೀಸರ ಮಿಂಚಿನ ಕಾರ್ಯಚರಣೆ *ಬೇಟೆಗೆ ತೆರಳುತ್ತಿದ್ದ ನಾಲ್ವರ ಬಂಧನ* *ಅಕ್ರಮ ಬಂದೂಕು ವಶ*

ಚಾಮರಾಜನಗರ: ಕೊಳ್ಳೇಗಾಲ ಯಳಂದೂರು ಕಾಡು ಪ್ರಾಣಿಗಳ ಅಕ್ರಮ ಬೇಟೆಗೆ ತೆರಳುತ್ತಿದ್ದ ನಾಲ್ವರನ್ನು ಅಗರ ಮಾಂಬಳ್ಳಿ ಪೋಲಿಸರು ಬಂಧಿಸಿ, ಅವರಿಂದ ಬಂದೂಕು ಹಾಗೂ ಸಿಡಿಮದ್ದು ವಶಕ್ಕೆ ಪಡೆಯಲಾಗಿದೆ. ಇವರು ಮಂಗಳವಾರ ಬೆಳಗ್ಗೆ 6. ಗಂಟೆ ಸಮಯದಲ್ಲಿ ಸೂರಾಪುರ ಗ್ರಾಮದ ಕರಡಿ ಗುಡ್ಡದ ಕಡೆ ಕಾಡುಪ್ರಾಣಿಗಳ ಬೇಟೆಗೆ ಹೊಂಚು ಹಾಕಿ ಹೋಗುತ್ತಿದ್ದರು. ಇವರು ಕುಣಗಳ್ಳಿ ಗ್ರಾಮದ ದೇವರಾಜು ಬಿನ್ ಲೇ. ನಂಜಶೆಟ್ಟಿ. ರಾಮು . ಗೊಣ್ಣ ಬಿನ್ ಲೇ.ಮರಣ್ಣಶೆಟ್ಟಿ. ಪ್ರದೀಪ ಬಿನ್ ಲೇ.ಚಿಕ್ಕಮರಿಶೆಟ್ಟಿ ಕೃಷ್ಣ ಅ. ಕೋಳಿಗೊಜ್ಜು ಬಿನ್ ಲೇ. ನಂಜಶೆಟ್ಟಿ ಬಂಧಿತರು. ಇವರನ್ನು ನ್ಯಾಯಾಂಗ ಬಂಧನಕ್ಕೆ ಕೊಡಲಾಗಿದೆ.
ಇತ್ತೀಚೆಗೆ ಹನೂರು, ಕೊಳ್ಳೇಗಾಲ ಭಾಗದಲ್ಲಿ ಕಾಡುಹಂದಿಗಳ ಬೇಟೆಗೆ ಸಿಡಿಮದ್ದು ಇಟ್ಟು ಇದಕ್ಕೆ ಬಾಯಿ ಹಾಕಿದ ದನಗಳು ಬಾಯಿ ಛಿದ್ರಗೊಂಡು ಸಾವನ್ನಪ್ಪಿದ್ದವು. ಕರಡಿ ಸಹ ಸಿಡಿಮದ್ದಿಗೆ ಬಲಿಯಾಗಿತ್ತು. ಇದರ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೋಲಿಸ್ ಮುಖ್ಯಾಧಿಕಾರಿ ಕವಿತಾ ಎಲ್ಲಾ ಠಾಣೆಗಳಿಗೂ ಸಿಡಿಮದ್ದು ತಯಾರಿಸುವವರ ಪತ್ತೆಗೆ ಕಟ್ಟುನಿಟ್ಟಿನ ಆದೇಶ ಮಾಡಿದ್ದರು. ಕುಣಗಳ್ಳಿಯಲ್ಲಿ ಸಿಡಿಮದ್ದು ತಯಾರಾಗುತ್ತಿರುವ ಮಾಹಿತಿಯ ಮೇಲೆ ಹೆಚ್ಚಿನ ನಿಗಾ ಇಡಲಾಗಿತ್ತು.
ಜಿಲ್ಲಾ ಎಸ್ಪಿ ಯವರ ಆದೇಶದಂತೆ,ಡಿವೈಎಸ್ಪಿ ಧರ್ಮೇಂದ್ರ ಮಾರ್ಗದರ್ಶನದಲ್ಲಿ ಸಿ ಐ ಶ್ರೀಕಾಂತ್ ನೇತೃತ್ವದಲ್ಲಿ ಪಿಎಸ್ಐ ಆಕಾಶ್ ಎಎಸ್ಐ ಚಿಕ್ಕಸ್ವಾಮಿ,ಹೆಚ್ ಸಿ ಶಂಕರ್ ಮೂರ್ತಿ ಸಕ್ರೂನಾಯಕ್ ಎಸ್ ಬಿ ಕರ್ತವ್ಯ ನಿರ್ವಹಿಸುವ ಕೆ ಶಿವಕುಮಾರ್ ಮತ್ತು ಅಭಿಷೇಕ್ ಶಿವಕುಮಾರ್ ಉಸ್ಮಾನ್ ಮತ್ತು ಶ್ರೀಶೈಲ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.
ಇತ್ತೀಚೆಗೆ ಇದೇ ರೀತಿ ಮೂವರನ್ನು ಬಂಧಿಸಿದ್ದನ್ನು ಸ್ಮರಿಸಬಹುದು.

ವರದಿ ಆರ್ ಉಮೇಶ್
ಮಲಾರಪಾಳ್ಯ