ಅಯ್ಯಪ್ಪ ದೇವಾಲಯದಲ್ಲಿ ಹುಂಡಿ ಕಳವು

ದೊಡ್ಡಬಳ್ಳಾಪುರ:ಕಲಿಯುಗದ ವರದ ಭೂಮಿಗೆ ಬಂದ ಭಗವಂತ ಎಂದೆ ಪ್ರ‌ಸಿದ್ದಿ ಯಾಗಿರುವ ಕೋಟ್ಯಾನುಕೋಟಿ ಭಕ್ತರ ಆರಾಧ್ಯ ದೈವ ಅಯ್ಯಪ್ಪ ದೇವಾಲಯದಲ್ಲಿ ಕಳ್ಳತನಕ್ಕೆ ಮುಂದಾದ ಕಳ್ಳರು ದೇವರ ಮುಂದೆ ಇದ್ದ ಹುಂಡಿಯೊಂದಿಗೆ ಪರಾರಿಯಾದ ಘಟನೆ ನೆಡೆದಿದೆ

ನಗರದ ಡಿ.ಕ್ರಾಸ್‌ ಮುಖ್ಯರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ತಡರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ನಡೆದಿದೆ.
ದೇವಾಲಯದಲ್ಲಿ ಮೂರು ಹುಂಡಿಗಳಿದ್ದು ಎರಡು ಹುಂಡಿ ಅಲ್ಲಿಯೇ ಒಡೆದು ಆದರಲ್ಲಿದ್ದ ಹಣ ವಸ್ತುಗಳನ್ನು ತೆಗೆದು ಕೊಂಡು ಹಾಗು ಇನ್ನೂಂದು ಹುಂಡಿ ಯೊಂದಿಗೆ ಪರಾರಿಯಾಗಿದ್ದಾರೆ. ಘಟನೆ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ

ಕಳ್ಳತನಕ್ಕೆ ಬರುವ ಮುಂಚೆ ಮೈತುಂಬಾ ಗೌನ ರೀತಿಯ ಬಟ್ಟೆ ಧರಿಸಿ ದೇವಾಲಯದ ಬಾಗಿಲು ಮೀಟಿ ಒಳಬಂದು ಹುಂಡಿಗಳ ಬಳಿ ಬಂದು ಕಳ್ಳತನಕ್ಕೆ ಯತ್ನ ನಡೆಸುತ್ತಿರುವ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ
ಕಳ್ಳತ ಮಾಡವ ಮುಂಚೆ ಸಿಸಿ ಕ್ಯಾಮರದ ಮೇಲೆ ಬಟ್ಟೆಯನ್ನ ಹಾಕಲಾಗಿರುವ ದೃಶ್ಯ ಗಳು ಕಂಡುಬಂದಿದೆ.
ಬೆಳಗ್ಗೆ ಎಂದಿನಂತೆ ದೇವಾಲಯದ ಬಾಗಿಲು ತರೆಯಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ದೇವಾಲಯಧ ಅಡಳಿತ ಮಂಡಲಿ ಯಿಂದ
ದೊಡ್ಡಬಳ್ಳಾಪುರ ನಗರ ಠಾಣೆಗೆ ದೂರು ನೀಡಲಾಗಿದ್ದು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡು ಪರಿಶೀಲನೆ ನೆಡಸಿದ್ದಾರೆ ಎಂದು ದೇವಾಲಯದ ಅಡಳಿತ ಮಂಡಲಿ ಯಿಂದ ತಿಳಿದು ಬಂದಿದೆ