ತಿಪ್ಪೂರು ವಿ.ಎಸ್.ಎಸ್.ಎನ್ ಚುನಾವಣೆಗೆ ನಿರ್ದೇಶಕರುಗಳ ಆಯ್ಕೆ
ದೊಡ್ಡಬಳ್ಳಾಪುರ: ತಿಪ್ಪೂರು ವಿವಿದೊದ್ದೇಶ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಸಲಾಗಾರರ ಕ್ಷೇತ್ರ ಮತ್ತು ಸಾಲಗಾರರಲ್ಲದ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು 13 ಸ್ಪರ್ದಿಗಳು ಚುನಾವಣೆಗೆ ಸ್ಪರ್ಧೆ ಮಾಡಿದ್ದರು, ಇದರಲ್ಲಿ 4 ಸದಸ್ಯರು ಅವಿರೋಧವಾಗಿ ಆಯ್ಕೆಯಾದರೆ, ಇನ್ನುಳಿದ 7 ಸದಸ್ಯರು ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದ ಇಬ್ಬರು ಸ್ಪರ್ಧಿಗಳ ವಿರುದ್ದ ಗೆಲುವು ಸಾಧಿಸಿದರು.
ಗೆಲುವು ಸಾಧಿಸಿದವರಲ್ಲಿ ಕಾಂಗ್ರೆಸ್ ಬೆಂಬಲಿತ 05 ಅಭ್ಯರ್ಥಿಗಳು, ಜೆಡಿಎಸ್ ಬೆಂಬಲಿತ 04 ಅಭ್ಯರ್ಥಿಗಳು, ಹಾಗೂ ಬಿಜೆಪಿ ಬೆಂಬಲಿತ ಇಬ್ಬರು ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ.
ಚುನಾವಣಾಧಿಕಾರಿಯಾಗಿ ಕವಿತಾ ಎಸ್ ಅವರು ಕಾರ್ಯನಿರ್ವಹಿಸಿದರು.
ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಪಡೆಯುತ್ತಿದ್ದಂತೆ ಸದಸ್ಯರ ಬೆಂಬಲಿಗರು ಹಾರತುರಾಯಿಗಳನ್ನು ಹಾಕುವುದರ ಮೂಲಕ ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು.
ಇದೇ ವೇಳೆ ಗೆಲುವು ಪಡೆದ ತಿಮ್ಮರಾಜು ಮಾತನಾಡಿ, ಗೆದ್ದಿರುವುದು ಖುಷಿಯಾಗಿದೆ, ನನ್ನ ಮೇಲೆ ನಂಬಿಕೆ ಇಟ್ಟು ಮತ ಚಲಾಯಿಸಿದ ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನನಗೆ ಸಹಕಾರ ನೀಡಿದಂತಹ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಮುಂದಿನ ದಿನಗಳಲ್ಲಿ ಯಾರು ಅಧ್ಯಕ್ಷರಾಗುತ್ತಾರೋ ಅವರ ಜೊತೆಗೂಡಿ ಎಲ್ಲಾ ಸದಸ್ಯರು ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.