ಟೆಲಿಕಾಂ ಎಂಪ್ಲಾಯಿಸ್ ಅಂಡ್ ಅದರ್ಸ್ ಹೌಸಿಂಗ್ ವೆಲ್ಫೇ ಟ್ರಸ್ಟ್ ನ ಅಧ್ಯಕ್ಷ ಎನ್. ನರಸಿಂಹಮೂರ್ತಿಯವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ

ನೆಲಮಂಗಲ:ಟೆಲಿಕಾಂ ಎಂಪ್ಲಾಯಿಸ್ ಅಂಡ್ ಅದರ್ಸ್ ಹೌಸಿಂಗ್ ವೆಲ್ಫೇ ಟ್ರಸ್ಟ್ ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಎನ್ ನರಸಿಂಹಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ದೊರೆತ ಹಿನ್ನೆಲೆ ಟೆಲಿಕಾಂ ಎಂಪ್ಲಾಯಿಸ್ ಅಂಡ್ ಅದರ್ಸ್ ಹೌಸಿಂಗ್ ವೆಲ್ಫೇರ್ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು ಹಾಗೂ ಹಿತೈಷಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಮುಖ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳು ಯಾವ ಖಾಸಗಿ ಶಾಲೆಗಳಿಗೂ ಕಡಿಮೆ ಇರಬಾರದು ಎನ್ನುವ ದೃಷ್ಟಿಯಿಂದ ಅವರಿಗೆ ಅಗತ್ಯವಾದ ಸೌಕರ್ಯಗಳನ್ನ ಒದಗಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸರ್ಕಾರಿ ಶಾಲಾ ಮಕ್ಕಳುಗಳಿಗೆ
ನೋಟ್ ಪುಸ್ತಕಗಳು, ಯೂನಿಫಾರ್ಮ್ಗಳು, ಬ್ಲೇಝರ್ಗಳು ಸೇರಿದಂತೆ ಸರ್ಕಾರಿ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಆಟದ ಸಾಮಗ್ರಿಗಳು , ಊಟ ಮಾಡಲು ತಟ್ಟೆ ಲೋಟ, ಶುದ್ಧ ನೀರು ಕುಡಿಯಲು ವಾಟರ್ ಪ್ಯೂರಿಫೈ ಸೇರಿದಂತೆ ಹಲವಾರು ಅನಾಥಾಶ್ರಮ ದೇವಾಲಯಗಳು ಹಾಗೂ ಇನ್ನಿತರ ಸಂಸ್ಥೆಗಳಿಗೆ ಅನುಕೂಲಗಳನ್ನು ಮಾಡಿಕೊಟ್ಟಿದ್ದಾರೆ.

ಇನ್ನು ಅದೆಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳಿಗೆ
ಉನ್ನತ ಶಿಕ್ಷಣಕ್ಕಾಗಿ ಸಹಾಯ ಮಾಡಿರುವ ಇವರು ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವುದನ್ನ ಗುರ್ತಿಸಿರುವಂಥ
ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿ ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಹಲವಾರು ಸಂಸ್ಥೆಗಳಿಂದ ಪಡೆದುಕೊಂಡಿರುವ
ಡಾ ಎನ್ ನರಸಿಂಹಮೂರ್ತಿಯವರು ಮುಂಬರುವ ದಿನಗಳಲ್ಲಿ ಸಮಾಜಕ್ಕೆ ಇನ್ನಷ್ಟು ತನ್ನದೇ ಆದ ಸೇವೆ ಸಲ್ಲಿಸಲಿ ಉಳ್ಳವರು ಇಂಥವರಿಂದ ಸ್ಪೂರ್ತಿ ಪಡೆಯಲಿ ಎನ್ನುವ ದೃಷ್ಟಿಯಿಂದ ಟೆಲಿಕಾಂ ಎಂಪ್ಲಾಯಿಸ್ ಅಂಡ್ ಅದರ್ಸ್ ಹೌಸಿಂಗ್ ವೆಲ್ಫೇರ್ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು ಸಂಸ್ಥೆಯ ಅಧ್ಯಕ್ಷರಾದ ಡಾ ಎನ್ ನರಸಿಂಹಮೂರ್ತಿ ಅವರಿಗೆ
ಹಾರ ತುರಾಯಿಗಳನ್ನ ಹಾಕಿ ಸಿಹಿತಿನಿಸಿ ಸನ್ಮಾನಿಸಿ ಸಂಭ್ರಮಿಸಿದ್ದಾರೆ.