ಇ-ಖಾತಾ ಅಭಿಯಾನ : ಸರ್ಕಾರಿ ಶುಲ್ಕ ಪಾವತಿಸಿ ಇ-ಖಾತೆ ಪಡೆಯಿರಿ –ಶಾಸಕ ಧೀರಜ್ ಮುನಿರಾಜು
ದೊಡ್ಡಬಳ್ಳಾಪುರ:ನಗರ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇ-ಖಾತಾ ಅಭಿಯಾನವನ್ನು ಹಮ್ಮಿಕೊಂಡಿದ್ದು, ಅರ್ಜಿ ಸಲ್ಲಿಸಿದ 30 ದಿನಗಳ ಒಳಗಾಗಿ ಇ-ಖಾತಾ ನೀಡಲಾಗುವುದು ಎಂದು ತಾಲ್ಲೂಕಿನ ಶಾಸಕರಾದ ಧೀರಜ್ ಮುನಿರಾಜು ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಶಾಸಕರ ಕಚೇರಿಯ ಸಭಾಂಗಣದಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು ಮಾನ್ಯ ಸರ್ಕಾರದ ಅಧಿಸೂಚನೆಯಂತೆ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಎಲ್ಲಾ ಅಧಿಕೃತ /ಅನಧಿಕೃತ ಆಸ್ತಿಗಳಿಗೆ ಆಸ್ತಿ ತೆರಿಗೆ ಪಾವತಿ ಕುರಿತು ಇ-ಖಾತಾ (ನಮೂನೆ3/3ಎ) ಪ್ರತಿಗಳನ್ನು ನೀಡಲು ಆದೇಶಿಸಲಾಗಿದೆ ಅದರಂತೆ ದೊಡ್ಡಬಳ್ಳಾಪುರ ನಗರ ವ್ಯಾಪ್ತಿಯ ಆಸ್ತಿಗಳಿಗೆ ನಗರ ಸಭೆ ವತಿಯಿಂದ ಆಯೋಜಿಸಿರುವ ಇ-ಖಾತಾ ಆಂದೋಲನದಲ್ಲಿ ಸ್ವತ್ತಿನ ಮಾಲೀಕರು ನಿಮ್ಮ ವಾರ್ಡ್‌ಗಳಲ್ಲಿ ನಿಗದಿಪಡಿಸಿರುವ ದಿನಾಂಕ ಮತ್ತು ಸ್ಥಳದಲ್ಲಿ ಬೆಳಗ್ಗೆ 10-00 ರಿಂದ ಸಂಜೆ 5-00 ಗಂಟೆವರೆಗೆ ನಿಗದಿತ ದಾಖಲೆಗಳೊಂದಿಗೆ ಹಾಜರಾಗಿ ತಮ್ಮ ಸ್ವತ್ತುಗಳಿಗೆ ಇ-ಖಾತಾ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಎ-ರಿಜಿಸ್ಟರ್‌ನಲ್ಲಿರುವ ಸ್ವತ್ತುಗಳಿಗೆ ಇ-ಖಾತಾ ಪಡೆಯಲು ಸಲ್ಲಿಸಬೇಕಿರುವ ಕನಿಷ್ಟ ದಾಖಲೆಗಳು
*ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರಗಳು /ದಾನಪತ್ರ/ವಿಭಾಗ ಪತ್ರಗಳು/ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು/ ಮಂಜೂರಾತಿ ಪತ್ರಗಳು /ಕಂದಾದ ಇಲಾಖೆಯಿಂದ 94 ಸಿಸಿ ಅಡಿ ನೀಡಲಾದ ಹಕ್ಕು ಪತ್ರ.
* ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ದೃಡೀಕೃತ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ.
* ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ.
*ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ
*ಮಾಲೀಕರ ಪೋಟೋ ಮತ್ತು ಸ್ವತ್ತಿನ ಪೋಟೋ
* ಮಾಲೀಕರ ಗುರುತಿನ ದಾಖಲೆ ಪ್ರತಿ.
ಬಿ-ರಿಜಿಸ್ಟರ್‌ನಲ್ಲಿರುವ ಸ್ವತ್ತುಗಳಿಗೆ ಇ-ಖಾತಾ ಪಡೆಯಲು ಸಲ್ಲಿಸಬೇಕಿರುವ ಕನಿಷ್ಟ ದಾಖಲೆಗಳು
*ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ದಿನಾಂಕ: 10-09-2024 ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳು /ದಾನಪತ್ರ/ವಿಭಾಗ ಪತ್ರಗಳು/ಹಕ್ಕು ಖುಲಾಸೆ ಪತ್ರಗಳು.
* ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ.
*ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ.
*ಮಾಲೀಕರ ಫೋಟೋ ಮತ್ತು ಸ್ವತ್ತಿನ ಪೋಟೋ
*ಮಾಲೀಕರ ಗುರುತಿನ ದಾಖಲೆ ಪ್ರತಿ.
ಇ-ಖಾತಾ ಆಂದೋಲನವು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಏಪ್ರಿಲ್ 3ರಿಂದ ಪ್ರಾರಂಭವಾಗಲಿದ್ದು, ನಗರಸಭಾ ವ್ಯಾಪ್ತಿಯಲ್ಲಿ ಏಪ್ರಿಲ್ 4 ರಿಂದ ಪ್ರಾರಂಭವಾಗಿ
ಏಪ್ರಿಲ್ 22 ರವರೆಗೆ ವಿವಿಧ ಸ್ಥಳಗಳಲ್ಲಿ ನಡೆಯಲಿದೆ ಸ್ಥಳೀಯ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ನಗರಸಭಾ ವ್ಯಾಪ್ತಿಯಲ್ಲಿ ಇ-ಖಾತಾ ಅಭಿಯಾನ ಎಲ್ಲಿ ನಡೆಯಲಿದೆ…???
04-04-2025 ರಂದು ವಿದ್ಯಾನಗರ ಸರ್ಕಾರಿ ಶಾಲೆ ( 9,10 ನೇ ವಾರ್ಡ್ )
07-04-2025 ರಂದು ತೇರಿನ ಬೀದಿ ಸರ್ಕಾರಿ ಶಾಲೆ( 13, 14, 15 ವಾರ್ಡ್)
08-04-2025ಮತ್ತು 09-04-2025 ರಂದು ಅಂಬೇಡ್ಕರ್ ಭವನ( 1, 2, 26, 27, 4 ವಾರ್ಡ್ )
11-04-2025 ರಂದು ಬಾಬು ಜಗಜೀವನ್ ರಾಮ್ ಭವನ(3, 5, 25)
15-04-2025 ರಂದು ಶ್ರೀನಗರ ಸರ್ಕಾರಿ ಶಾಲೆ( 6, 7, 8 ವಾರ್ಡ್ )
16-04-2025 ರಂದು ನಂಜುಂಡೇಶ್ವರ ಕಲ್ಯಾಣ ಮಂಟಪ(11, 28, 29, 30, 31ವಾರ್ಡ್ )
17-04-2025 ರಂದು ವೀರಭದ್ರನಪಾಳ್ಯ ಸರ್ಕಾರಿ ಶಾಲೆ(12, 18, 19, 20ವಾರ್ಡ್ )
21-04-2025ಪುರಭವನ (ಟೌನ್ ಹಾಲ್) ಬಸ್‌ಸ್ಟ್ಯಾಂಡ್ ಹತ್ತಿರ(16, 17, 21ವಾರ್ಡ್ )
22-04-2025ಚಿಕ್ಕಪೇಟೆ ಸರ್ಕಾರಿ ಉರ್ದು ಶಾಲೆ(22, 23, 24ವಾರ್ಡ್ )ಯಲ್ಲಿ ನೆಡೆಯಲಿದೆ.
ಯಾವುದೇ ಮಧ್ಯವರ್ತಿಗಳಿಗೆ ಅಥವಾ ಇತರೆ ವ್ಯಕ್ತಿಗಳ ಮೇಲೆ ಅವಲಂಬಿತವಾಗಿ ಹಣ ನೀಡದೆ ಸ್ವತ್ತಿನ ಮಾಲೀಕರು ಸ್ವತಃ ತಾವೇ ಖುದ್ದಾಗಿ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ಕೇವಲ 250 ರೂಪಾಯಿಗಳ ಶುಲ್ಕ ಪಾವತಿ ಮಾಡುವ ಮೂಲಕ 30 ದಿನಗಳ ಒಳಗಾಗಿ ಇ- ಖಾತಾ ಪಡೆಯಬಹುದಾಗಿದೆ ಎಂದು ತಿಳಿಸಿದರು.