ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯ ವೈಖರಿ ಹೆಚ್ಚಿಸಲು ತರಬೇತಿ ಶಿಬಿರಗಳು ಸಹಕಾರಿ–ಕೊಂಡಜ್ಜಿ ಷಣ್ಮುಕಪ್ಪ
ದೊಡ್ಡಬಳ್ಳಾಪುರ : ಸೌಟ್ಸ್ ಮತ್ತು ಗೈಡ್ಸ್ ಕಾರ್ಯ ವೈಖರಿಯನ್ನು ಮತ್ತಷ್ಟು ಉತ್ತಮಗೊಳಿಸಲು ಈ ತರಬೇತಿ ಸಹಕಾರಿಯಾಗಲಿದೆ, ತರಬೇತಿಯಲ್ಲಿ ಕಲಿತ ವಿಚಾರಗಳನ್ನು ತಮಗೆ ಕಲ್ಪಿಸಿದ ಕ್ಷೇತ್ರಗಳಲ್ಲಿ ಬಳಕೆ ಮಾಡುವ ಮೂಲಕ ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದು ಭಾರತ ಸೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಘಟಕದ ಉಪಾಧ್ಯಕ್ಷ ಕೊಂಡಜ್ಜಿ ಬ ಷಣ್ಮುಖಪ್ಪ ತಿಳಿಸಿದರು.
ಭಾರತ್ ಸೌಟ್ಸ್ ಮತ್ತು ಗೈಡ್ಸ್ ವತಿಯಿಂದ ತಾಲ್ಲೂಕಿನ ಅನಿಬೆಸೆಂಟ್ ಸೌಟ್ಸ್ ಮತ್ತು ಗೈಡ್ಸ್, ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ ಆಯೋಜನೆ ಮಾಡಲಾಗಿದ್ದ ರಾಜ್ಯ ಮಟ್ಟದ ಆಯುಕ್ತರುಗಳ ತರಬೇತಿ ಶಿಬಿರ, ಅಗ್ರಗ್ರಾಮಿತ್ವ,ಅಂದಾಜು ಮತ್ತು ತರಬೇತಿ ಸಲಹೆಗಾರರ ತರಬೇತಿ ಶಿಬಿರದಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು
1951ರಲ್ಲಿ ನನ್ನ ತಂದೆ ಸ್ಕೌಟ್ ಆಗಿ ಸೇವೆ ಸಲ್ಲಿಸಿದ್ದರು ಹಾಗಾಗಿ ನಾನು ಹುಟ್ಟುತಲೇ ಸ್ಕೌಟ್ ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದರು. ನಾನು ತರಬೇತಿ ಪಡೆದು 50ವರ್ಷಗಳಾಗಿವೆ ನಿರಂತರ ನಾನು ಸೇವೆ ಸಲ್ಲಿಸುತ್ತಿದ್ದೇನೆ. ಇಂದಿನ ಸ್ಕೌಟ್ ಅಂಡ್ ಗೈಡ್ಸ್ ಕೇವಲ ಒಬ್ಬರ ಶ್ರಮವಲ್ಲ ಇದು ಶಿಬಿರದಲ್ಲಿ ತರಬೇತಿ ಪಡೆದು ಶ್ರಮಿಸಿದ ಪ್ರತಿಯೊಬ್ಬರ ಸೇವೆಯ ಫಲ ಇದನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕರೆದೋಯ್ಯಲು ನಿಮ್ಮಿಂದ ಮಾತ್ರ ಸಾಧ್ಯ ಹಾಗಾಗಿ ನಿರಂತರ ಪ್ರಯತ್ನ, ಪ್ರಾಮಾಣಿಕ ಶ್ರಮ ನಿಮ್ಮದಾಗಲಿ ಎಂದರು.
ತರಬೇತುದಾರ ಮೊದಲು ತರಬೇತಿ ಸ್ಥಳಕ್ಕೆ ಭೇಟಿಕೋಟ್ಟು ತರಬೇತಿ ಪಡೆಯಲು ಬರುವ ಶಿಬಿರಾರ್ಥಿಗಳ ಸೌಲಭ್ಯ ಪರೀಕ್ಷಿಸುವುದು ಅಗತ್ಯ, ತರಬೇತುದಾರ ವಿಷಯವನ್ನು ಶಿಬಿರಾರ್ಥಿಗಳ ಮನಮುಟ್ಟುವಂತೆ ತಿಳಿಸುವುದು ಮುಖ್ಯವಾಗುತ್ತದೆ ಎಂದರು.
ಸಮಾರೋಪ ಸಮಾರಂಭದಲ್ಲಿ ರಾಜ್ಯ ತರಬೇತಿ ಆಯುಕ್ತರಾದ ನಾಗೇಶ್ ಆರ್ ಶಿವಪೂರ್ , ರಾಜ್ಯ ಆಯುಕ್ತರಾದ ಸಿ.ಎಸ್ ರೆಡ್ಡಿ,ಜಿಮ್ಮಿ ಸಿಕ್ಖೇರಾ, ಎಲ್.ಟಿ (ಸೌಟ್), ಹೆಚ್.ಬಿ ಭರಶೆಟ್ಟಿ ಎಲ್.ಟಿ (ಸೌಟ್), ರಾಜ್ಯ ಆಯುಕ್ತರಾದ ಬಿ.ವಿ ರಾಮಲತಾ (ಗೈಡ್),ಗೀತಾ ನಟರಾಜ್,ರಾಜ್ಯ ಜಂಟಿ ಕಾರ್ಯದರ್ಶಿ ಕೃಪಾ ವಿಜಯ್,ಜಿಲ್ಲಾ ಸಂಘಟಕ ವಿಶ್ವನಾಥ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.