*ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಹೊನ್ನೂರು ಸಿದ್ದಪ್ಪಸ್ವಾಮಿ ಗೆಲುವು.. * ಶಾಸಕ ಪುಟ್ಟರಂಗಶೆಟ್ಟಿ ಯಿಂದ ಸನ್ಮಾನ.
ಯಳಂದೂರು.ಪಟ್ಟಣದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ 2025 ರಿಂದ 2030ರ ವರೆಗಿನ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಸಾಲಗಾರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹೊನ್ನೂರು ಸಿದ್ದಪ್ಪ ಸ್ವಾಮಿ ರವರು 287 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜಯಗಳಿಸಿದ ಹೊನ್ನೂರು ಸಿದ್ದಪ್ಪ ಸ್ವಾಮಿ ಅವರನ್ನು ಚಾಮರಾಜನಗರ ಕ್ಷೇತ್ರದ ಶಾಸಕ ಹಾಗೂ ಎಂ ಎಸ್ ಐ ಎಲ್ ಅಧ್ಯಕ್ಷರಾದ ಸಿ. ಪುಟ್ಟರಂಗಶೆಟ್ಟಿ ರವರು ಸನ್ಮಾನಿಸಿ ಅಭಿನಂದಿಸಿದರು.
ಈ ವೇಳೆ ಶಾಸಕ ಸಿ. ಪುಟುರಂಗಶೆಟ್ಟಿ ರವರು ಮಾತನಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಹೊನ್ನೂರು ಸಿದ್ದಪ್ಪ ಸ್ವಾಮಿ ರವರಿಗೆ ಅಭಿನಂದನೆ, ಮುಂದಿನ ದಿನಗಳಲ್ಲಿ ಸಹಕಾರ ಸಂಘದದಲ್ಲಿ ಎಲ್ಲಾ ಜನಾಂಗದ ರೈತರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವ ನಿಟ್ಟಿನಲ್ಲಿ ಸರ್ವ ಸದಸ್ಯರ ಜೊತೆಗೂಡಿ ಪ್ರಾಮಾಣಿಕವಾಗಿ ಕೆಲಸ ಮಾಡಿ, ಮುಂಬರುವ ರಾಜಿಕೀಯ ದಿನಗಳಲ್ಲಿ ಹೆಚ್ಚಿನ ಅಧಿಕಾರ ನಿಮಗೆ ದೊರಕಲಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಯರಿಯೂರು ದೇವರಾಜು , ಹೊನ್ನೂರು ಗುರುಲಿಂಗಯ್ಯ, ಶಾಂತರಾಜು, ರಾಜೇಂದ್ರ, ಮಹೇಶ, ನಾಗರಾಜು, ಕಾಮಶೆಟ್ಟಿ ಹಾಗೂ ಮುಂತಾದವರು ಹಾಜರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ