ಸ್ಪೀಕರ್ ಗೆ ಅಗೌರವ ತೋರಿದ ಧೀರಜ್ ಮುನಿರಾಜು ಸೇರಿದಂತೆ 18ಶಾಸಕರು ಆರು ತಿಂಗಳ ಅಮಾನತು

ಬೆಂಗಳೂರು:ವಿಧಾನಸಭೆಯಲ್ಲಿ ಸ್ಪೀಕರ್ ಹುದ್ದೆಗೆ ಅಗೌರವ ತೋರಿದ ಬಿಜೆಪಿ ಶಾಸಕರನ್ನು ಸ್ಪೀಕರ್ ಯುಟಿ ಖಾದರ್ ಮುಂದಿನ 6 ತಿಂಗಳವರೆಗೂ ಕಲಾಪದಿಂದ ಅಮಾನತು ಮಾಡಿ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಆದೇಶ ಹೊರಡಿಸಿದ್ದಾರೆ.

ಹನಿಟ್ರ್ಯಾಪ್ ಪ್ರಕರಣ ಖಂಡಿಸಿ, ಪ್ರಕರಣದ ಸಿಬಿಐ ತನಿಖೆ ಆಗ್ರಹಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು.

ಆಡಳಿತ ಪಕ್ಷದ ವಿರುದ್ಧ ಬಿಜೆಪಿ ಸದಸ್ಯರು ಘೋಷಣೆ ಕೂಗಿದರು. ಸ್ಪೀಕರ್ ಪೀಠದ ಮೇಲೆ ಏರಿ ಬಂದ ಬಿಜೆಪಿ ಸದಸ್ಯರು ತಮ್ಮ ಆಕ್ರೋಶ ಹೊರಹಾಕಿದ್ದರು.

 

ಗದ್ದಲ ಕೋಲಾಹಲದ ನಡುವೆ ಸ್ಪೀಕರ್ ಪೀಠದ ಮೇಲೆ ಬಿಜೆಪಿ ಸದಸ್ಯರು ಕಾಗದ ಪ್ರತಿಗಳನ್ನು ಹರಿದು ಎಸೆದಿದ್ದರು. ಈ ಹಿನ್ನೆಲೆ ಪೀಠಕ್ಕೆ ಅಗೌರವ ತೋರಿದ 18 ಮಂದಿ ಬಿಜೆಪಿ ಸದಸ್ಯರನ್ನು ಸದನ ಕಲಾಪದಿಂದ 6 ತಿಂಗಳಿಗೆ ಅಮಾನತುಗೊಳಿಸಿ ಸ್ಪೀಕರ್ ರೂಲಿಂಗ್ ನೀಡಿದರು.

 

ಅಮಾನತು ಆದವರು…

ದೊಡ್ಡಣ್ಣ ಗೌಡ ಪಾಟೀಲ್

ಸಿ ಕೆ ರಾಮಮೂರ್ತಿ

ಅಶ್ವತ್ಥ ನಾರಾಯಣ

ಎಸ್ ಆರ್ ವಿಶ್ವನಾಥ್

ಬೈರತಿ ಬಸವರಾಜ

ಎಂ ಆರ್ ಪಾಟೀಲ್

ಚನ್ನಬಸಪ್ಪ

ಬಿ ಸುರೇಶ್ ಗೌಡ

ಉಮನಾಥ್ ಕೋಟ್ಯಾನ್

ಶರಣು ಸಲಗಾರ್

ಶೈಲೇಂದ್ರ ಬೆಲ್ದಾಳೆ

ಯಶಪಾಲ್ ಸುವರ್ಣ

ಹರೀಶ್ ಬಿಪಿ

ಡಾ. ಭರತ್ ಶೆಟ್ಟಿ

ಮುನಿರತ್ನ

ಬಸವರಾಜ ಮತ್ತಿಮೋಡ್

ಧೀರಜ್ ಮುನಿರಾಜು

ಡಾ ಚಂದ್ರು ಲಮಾಣಿ

ಸದನದ ಪಾವಿತ್ರ್ಯತೆಯನ್ನು ಕಾಪಾಡಬೇಕು. ನೀವು ಯು.ಟಿ.ಖಾದರ್ ಗೆ ಅಪಮಾನ ಮಾಡಿ, ಆದರೆ, ಸ್ಪೀಕರ್ ಪೀಠಕ್ಕೆ ಅಪಮಾನ ಮಾಡಿದರೆ ನಾವು ಸಹಿಸಲ್ಲ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.