ದೊಡ್ಡಬಳ್ಳಾಪುರ:ಮೇ ೧೦ ರಂದು ನೆಡೆಯಲಿರುವ ಮತದಾನ ಪ್ರಕ್ರಿಯೆಗೆ ತಾಲ್ಲೂಕು ಚುನಾವಣಾಧಿಕಾರಿ ಕಾರ್ಯಾಲಯದಿಂದ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾ ಅಧಿಕಾರಿ ತೇಜಸ್ ಕುಮಾರ್ ಇಂದು ಚುನಾವಣಾದಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪಾರದರ್ಶಕ ಶಾಂತಿಯುತ ಚುನಾವಣೆ ನೆಡೆಸಲು ಸಕಲ ಸಿದ್ದತೆ ಮಾಡಲಾಗಿದೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,14,182 ಮತದಾರರು ಇದ್ದು ಅದರಲ್ಲಿ ಪುರುಷ ಮತದಾರರ ಸಂಖ್ಯೆ 1,06,621 ಮತ್ತು ಮಹಿಳಾ ಮತದಾರರ ಸಂಖ್ಯೆ 1,07,559 ಇಬ್ಬರು ಮತದಾರರು ಇದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 276 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.ಕಣದಲ್ಲಿ ಒಟ್ಟು 12 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.359 ವಿ.ವಿ ಪ್ಯಾಟ್ ಗಳನ್ನು ಕ್ಷೇತ್ರಕ್ಕೆ ತರಿಸಲಾಗಿದೆ ಮಂಗಳವಾರ ಮದ್ಯಾಹ್ನ 3 ಘಂಟೆ ನಂತರ ಆಯಾ ಮತಗಟ್ಟೆಗಳ ನಿಯೋಜಿತ ಸಿಬ್ಬಂದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಟ್ರಾಂಗ್ ರೂಮ್ ಬಳಿಗೆ ಬಂದು ವಿ ವಿ ಪ್ಯಾಡ್ ಸೇರಿದಂತೆ ಇತರೆ ಚುನಾವಣಾ ಸಾಮಗ್ರಿಗಳನ್ನು ಕೊಂಡೊಯ್ಯಲಿದ್ದಾರೆ.
ಒಟ್ಟು 58 ಸೇವಾ ಮತದಾರರಿದ್ದು ಅವರಿಗೆ ಇಟಿಪಿಬಿಎಸ್ ತಂತ್ರಾಂಶದ ಮುಖಾಂತರ ವಿದ್ಯುನ್ಮಾನ ಮತ ಪತ್ರಗಳನ್ನು ರವಾನಿಸಿರುತ್ತದೆ ತಂತ್ರಾಂಶದ ಮೂಲಕ ಸೇವಾ ಮತದಾರರು ಮತ ಚಲಾಯಿಸಲಿದ್ದಾರೆ‌.

58 ರೂಟ್ ಗಳನ್ನು ಸಾರಿಗೆ ವ್ಯವಸ್ಥೆ ಗಾಗಿ ಗುರುತಿಸಲಾಗಿದ್ದು ಈ ಮಾರ್ಗದ ಮೂಲಕ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ನಿಯೋಜಿತ 1254 ಮಂದಿ ಸಿಬ್ಬಂದಿಗಳಿಗೆ ಯಾವುದೇ ಸಮಸ್ಯೆ ಇಲ್ಲದಂತೆ ಸೌಕರ್ಯ ಒದಗಿಸಲಾಗಿದೆ ಈ ಬಗ್ಗೆ ಆಯಾ ಬೂತ್ ಗಳ ಮಾಹಿತಿಯನ್ನು ಬಿಎಲ್ಓ ಗಳು ನೀಡಲಿದ್ದಾರೆ.ಮನೆಯಿಂದ ಮತದಾನ ಮಾಡಿದ 80ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಕಲಚೇತನರು 220ಮಂದಿ ನೊಂದಾಯಿಸಿಕೊಂಡಿದ್ದರು.ಇದರಲ್ಲಿ 215ಮಂದಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.
ಕ್ಷೇತ್ರದಲ್ಲಿ 5 ಸಖಿ ಬೂತ್,2ಮಾದರಿ ಮತಗಟ್ಟೆ,ಒಂದು PWD ಮತಗಟ್ಟೆ ಹಾಗೂ ಒಂದು ಎತ್ನಿಕ್ ಮತಗಟ್ಟೆಯನ್ನು ರಚಿಸಲಾಗಿದೆ.
ಮೇ 10 ರಂದು ಬೆಳಿಗ್ಗೆ 5:30ಕ್ಕೆ ಅಣಕು ಮತದಾನ ಆರಂಬಿಸಲಾಗುವುದು ನಂತರ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನಕ್ಕೆ ಸಮಯ ನಿಗದಿಪಡಿಸಲಾಗಿದೆ.
ಇಂದು ಸಂಜೆ 6 ಕ್ಕೆ ಪ್ರಚಾರ ಅಂತ್ಯಗೊಳ್ಳಲಿದೆ ನೀತಿ ಸಂಹಿತೆ ಕಡ್ಡಾಯ ಪಾಲನೆಗಾಗಿ ಎಲ್ಲಾ ರಾಜಕೀಯ ಪಕ್ಷಗಳಿಗು ಸೂಚನೆ ನೀಡಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ಚುನಾವಣಾ ಸಿಬ್ಬಂದಿ ಹದ್ದಿನ ಕಣ್ಣು ಇರಿಸಿದ್ದಾರೆ.

ಮೇ 10ರ ಮತದಾನದ ನಂತರ ಮೇ 13 ರಂದು ದೇವನಹಳ್ಳಿ ಟೌನಿನ ಆಕಾಶ್ ಇಂಟರ್ ನ್ಯಾಷನಲ್‌‌ ಸ್ಕೂಲ್ ನಲ್ಲಿ ಮತ ಎಣಿಕೆ ಕಾರ್ಯ ನೆಡೆಯುವುದು ಈ ಮತ ಎಣಿಕೆ ಕೇಂದ್ರದಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತ ಎಣಿಕೆ ‌ಕಾರ್ಯಕ್ಕಾಗಿ ಒಟ್ಟು 14 ಟೇಬಲ್ ಗಳನ್ನು ನಿಗದಿಪಡಿಸಲಾಗಿದ್ದು,ಪ್ರತಿ ಟೇಬಲ್ ಗೆ ಒಬ್ಬರಂತೆ ಮತ ಎಣಿಕೆ ಏಜೆಂಟರನ್ನು ನೇಮಿಸಲಾಗಿದೆ.
ಒಟ್ಟಾರೆ ಮತದಾನ ಪ್ರಕ್ರಿಯ ಶಾಂತಿಯುತವಾಗಿ ನೆಡೆಯಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆಯೆಂದು ಮುಖ್ಯ ಚುನಾವಣಾ ಅಧಿಕಾರ ತೇಜಸ್ ಕುಮಾರ್ ರವರು ಹಾಗು ಸಹಾಯಕ ಚುನಾವಣಾ ಅದಿಕಾರಿ ಮೋಹನ್ ಕುಮಾರಿ ರವರು ತಿಳಿಸಿದ್ದಾರೆ.