ತೂಬಗೆರೆ ವೆಂಕಟರಮಣ ಸ್ವಾಮಿ ಬ್ರಹ್ಮ ರಥೋತ್ಸವ ಸಂಪನ್ನ
ದೊಡ್ಡಬಳ್ಳಾಪುರ:ತಾಲ್ಲೂಕಿನ,ತೂಬಗೆರೆಯ ತೇರಿ ಬೀದಿಯಲ್ಲಿರುವ ಇತಿಹಾಸದ ಪ್ರಸಿದ್ಧ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣ ಸ್ವಾಮಿಯ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನಡೆಯಿತ್ತು.
ಬ್ರಹ್ಮ ರಥೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಭಕ್ತರು ಶ್ರದ್ದೆ ಭಕ್ತಿಯಿಂದ ಸ್ವಾಮಿಯ ರಥಕ್ಕೆ ಹೂವು ಹಣ್ಣು ದವನ ಅರ್ಪಿಸಿ ಭಕ್ತಿ ಧನ್ಯತೆ ಮೆರೆದರು
ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಅಭಿಷೇಕ, ಸುಪ್ರಭಾತ ಸೇವೆ, ತೊಮಾಲೆ ಸೇವೆ, ನವಗ್ರಹ ಪೂಜೆ, ರಥದ ಮುಂಭಾಗದಲ್ಲಿ ಹೋಮಗಳನ್ನು ನಡೆಸಲಾಯಿತು.
ವಿಶೇಷವಾದ ಪುಷ್ಪಗಳಿಂದ ಅಲಂಕರಿಸಿದ್ದ ಸ್ವಾಮಿಗೆ ಸುಮಂಗಲಿ ಯರಿಂದ ಭಕ್ತಿಗೀತೆ ಗಾಯನ, ಭಜನೆ, ಆಗಮಿಕರ ಮಂತ್ರ ಪಠಣೆಗಳು, ಭಕ್ತಜನ ಸಾಗರದ ಜಯ ಘೋಷದೊಂದಿಗೆ ರಥೋತ್ಸವ ನಡೆಯಿತ್ತು.
ಜಾತ್ರೆಯ ಪ್ರಯುಕ್ತ ದೇವಾಲಯದ ಜೀರ್ಣೋದ್ದಾರ ಸಮಿತಿಯಿಂದ ರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಪಾನಕ ಕೋಸಂಬರಿ ನೀರು ಮಜ್ಜಿಗೆ ವಿತರಿಸಲಾಯಿತು.
ತೂಬಗೆರೆ ರಾಶಿ ರಾಪು ಅಭಿಮಾನಿ ಸಂಘದ ವತಿಯಿಂದಲು ಸಹ ಮಜ್ಜಿಗೆ ಕೋಸಂಬರಿ ವಿತರಣೆ ನಡೆಯಿತು
ಬ್ರಹ್ಮ ರಥೋತ್ಸವದಲ್ಲಿ ಮಾಜಿ ನಿಸರ್ಗ ನಾರಾಯಣಸ್ವಾಮಿ, ಉಪ ತಹಶೀಲ್ದಾರ್ ವೆಂಕಟೇಶ್, ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಆರ್.ನಾರಾಯಣಪ್ಪ, ಕೆಪಿಸಿಸಿ ಸದಸ್ಯ ಎಸ್ ಆರ್ ಮುನಿರಾಜು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ್, ಗ್ರಾಮಪಂಚಾಯಿತಿ ಅಧ್ಯಕ್ಷೆ ಮುನಿಲಕ್ಷ್ಮಮ್ಮ ರಾಮಕೃಷ್ಣ ಮುಖಂಡರಾದ ಕನಕದಾಸ, ಯುವ ಮುಖಂಡ ಉದಯ ಆರಾಧ್ಯ, ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ, ರವಿ ಸಿದ್ದಪ್ಪ ಶ್ರೀ ವೆಂಕಟಮಣಸ್ವಾಮಿಯ. ಭಕ್ತರು ಹಾಜರಿದ್ದರು