ರಾಗಿ ಖರೀದಿ ಕೇಂದ್ರದ ಅವ್ಯವಸ್ಥೆ ಆಕ್ರೋಶ– ರೈತರ ಆಕ್ರೋಶ
ದೊಡ್ಡಬಳ್ಳಾಪುರ:ರೈತರಿಂದ ಬೆಂಬಲ ಬೆಲೆಯ ರಾಗಿ ಖರೀದಿ ಕೇಂದ್ರ,ಗಳು ಆರಂಭವಾಗಿದ್ದು, ರಾಗಿ ಖರೀದಿಯಲ್ಲಿ ಪ್ರತಿ ವರ್ಷವೂ ಒಂದೂಂದು ರೀತಿಯ ನಿಯಮಗಳು ಬದಲಾಗುತ್ತಿವೆ, ಇದರಿಂದ ರೈತರು ಹೈರಾಣಗಾಗಿದ್ದಾರೆ ಸುಗಮ ಹಾದಿಯಲ್ಲಿ ರಾಗಿ ಖರೀದಿ ವ್ಯವಸ್ಥೆ ಮಾಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ನೊಂದಾಯಿತ ರೈತರಿಂದ ರಾಗಿ ಖರೀದಿ ಪ್ರಕ್ರಿಯೆಗೆ ಮಾರ್ಚ್ 01ರಿಂದ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ, ಮಾರ್ಚ್ 03 ರಿಂದ ತಾಲೂಕು ಕೇಂದ್ರಗಳಲ್ಲಿ ರಾಗಿ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ, ಸರ್ಕಾರದ ನಿಯಮಾನುಸಾರ ರಾಗಿಯನ್ನು ನೀಡಬೇಕೆಂದು ಸರ್ಕಾರ ಹೇಳಿದೆ, ಆದರೆ ಪ್ರತಿವರ್ಷ ಬದಲಾಗುತ್ತಿರುವ ನಿಯಮಗಳಿಂದ ರೈತರಿಗೆ ಸಮಸ್ಯೆಯಾಗಿದೆ ಎಂಬುದು ರೈತರಿಂದ ಅಕ್ರೋಶಕ್ಕೆ ಕಾರಣವಾಗಿದೆ.
ದೊಡ್ಡಬಳ್ಳಾಪುರದ ಎಪಿಎಂಸಿ ಅವರಣದಲ್ಲಿರುವ ರೈತ ಭವನದಲ್ಲಿ ರಾಗಿ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ, ತಾಲೂಕಿನಲ್ಲಿ 13 ಸಾವಿರಕ್ಕೂ ಹೆಚ್ಚು ರೈತರು ನೊಂದಾಯಿಸಿಕೊಂಡಿದ್ದು, ಅವರಿಂದ ರಾಗಿ ಖರೀದಿಯನ್ನು ಮಾಡಲಾಗುತ್ತಿದೆ, ಆದರೆ ಈ ವರ್ಷ ಕೆಲವು ನಿಯಮಗಳು ರೈತರಿಗೆ ಸಮಸ್ಯೆಗೆ ಉಂಟಾಗಿದೆ
ರೈತ ಮುಖಂಡ ಕೂಟ್ಟಿಗೆ ಮಾಚೇನಹಳ್ಳಿ ನಾಗರಾಜ ಮಾತನಾಡಿ ರಾಗಿ ಖರೀದಿ ಪ್ರಕ್ರಿಯೆಯಲ್ಲಿನ ಹೊಸ ನಿಯಮಗಳಿಂದ ರೈತರು ದಿನಗಟ್ಟಲೆ ಕಾಯು ಬೇಕಾದ ಪರಿಸ್ಥಿತಿ ಯಿಂದಾಗಿ ಸಮಸ್ಯೆಯಾಗುತ್ತಿದೆ ಟ್ರ್ಯಾಕ್ಟರ್ ಬಾಡಿಗೆ ದಿನಕ್ಕೆ ಎರಡರಿಂದ ಮೂರು ಸಾವಿರವಿದೆ, ಎರಡು ಮೂರು ದಿನ ಕಾಯುವುದರಿಂದ 10 ರಿಂದ 15 ಸಾವಿರ ಟ್ರ್ಯಾಕ್ಟರ್ ಬಾಡಿಗೆಗೆ ಹಣ ಹೋಗುತ್ತದೆ, ಇದರಿಂದ ಸರ್ಕಾರ ಬೆಂಬಲ ಬೆಲೆಯಲ್ಲಿ ಕೊಡುವ ಹಣ ಯಾವುದಕ್ಕೂ ಸಾಕಾಗುವುದಿಲ್ಲ ಎಂದರು.
ರೈತರ ಹುಲ್ಲುಕುಂಟೆಯ ಕೃಷ್ಣ ಕುಮಾರ್ ಮಾತನಾಡಿ ದಿನಕ್ಕೆ ಎಷ್ಠು ಕ್ವಿಂಟಲ್ ತೆಗೆದು ಕೊಳ್ಳುತ್ತಾರೆ ಎಷ್ಠು ಟ್ರಾಕ್ಟರ್ ರಾಗಿ ಗೊಡನ್ ಹಾಕುತ್ತಿದ್ದಾರೆ ಹಾಗು ಕ್ರಮ ಸಂಖ್ಯೆ ಪ್ರಕಾರ ರಾಗಿ ತೆಗೆದು ಕೊಳ್ಳುತ್ತಿದ್ದಾ ರಾ ಎಂಬುದರ ಬಗ್ಗೆ ಮಾಹಿತಿಯಲ್ಲಿ ರಾಗಿ ಖರೀದಿ ಮಾಡುವುದು ಎಪಿಎಂಸಿ ಮಾರುಕಟ್ಟೆ ಯಾದರೆ ಇದನ್ನ ಅನ್ ಲೋಡ್ ಮಾಡುವುದು 10 ಕೀ ದೂರದಲ್ಲಿ ಅನ್ ಲೋಡ್ ಮಾಡುವುದು ಈ ಪ್ರಕ್ರೀಯೆಗೆ ಮೂರು ದಿನದಿಂದ ನಾಲ್ಕು ದಿನವಾಗ ಬಹುದು ಅಲ್ಲಿ ವರೆವಿಗೂ ಊಟ ತಿಂಡಿ ನೀರಿನ ನೀಡುವವರು ಯಾರು.
ಮೊದಲು ಇಂಟೆಂಡ್ ತೆಗೆದುಕೊಳ್ಳುವಾಗ ಮಾತ್ರ ಥಂಬ್ ಕೊಡಬೇಕಿತ್ತು, ಈ ವರ್ಷ ರಾಗಿ ಹಾಕಿದ ನಂತರವೂ ಥಂಬ್ ಕೊಡಬೇಕಾಗಿದೆ ಇದು ಸಮಸ್ಯೆಗೆ ಕಾರಣವಾಗಿದೆ, ಬಹುತೇಕ ರೈತರ ಪಹಣಿಗಳಿರುವುದು ವಯಸ್ಸಾದವರ ಹೆಸರಿನಲ್ಲಿ, ಅವರು ಎರಡು ಮೂರು ದಿನ ಕಾಯುವ ಸ್ಥಿತಿಯಲ್ಲಿರುವುದಿಲ್ಲ, ಈಗಾಗಲೇ ಇಂಟೆಂಡ್ ತೆಗೆದುಕೊಂಡಿರುವ 30 ರೈತರು ಸಾವನ್ನಪ್ಪಿದ್ದಾರೆ, ಅವರಿಗೆ ರಾಗಿ ಹಾಕಲು ಅವಕಾಶವೇ ಇಲ್ಲದಂತ್ತಾಗಿದೆ ಎಂದರು.
ಸರ್ಕಾರ ಜಾರಿಗೆ ತಂದಿರುವ ನಿಯಮ, ರೈತರು ನಿಯಮ ಪಾಲನೆ ಮಾಡಬೇಕಾಗಿದೆ. ಇನ್ನೂ ರಾಗಿ ಖರೀದಿ ಪ್ರಕ್ರಿಯೆ ತಡವಾಗಲು ಕಾರಣ, ರಾಗಿ ಸಂಗ್ರಹಿಸುವ ಗೋದಾಮುಗಳಲ್ಲಿ ಈ ಬಾರಿ ಯಂತ್ರಗಳಿಂದ ಚೀಲ ಹೊಲೆಯಲಾಗುತ್ತಿದೆ, ವಿದ್ಯುತ್ ಸಮಸ್ಯೆ, ಕಾರ್ಮಿಕರ ಕೊರತೆಯಿಂದ ಸಮಸ್ಯೆಗಾಗಿದೆ, ಎರಡು ದಿನ ರಜೆ ಇದ್ದು, ಸಮಸ್ಯೆಗಳು ಬಗೆಹರಿಯಲಿದ್ದು, ಸೋಮವಾರದಿಂದ ರಾಗಿ ಪ್ರಕ್ರಿಯೆ ಸುಗಮವಾಗಿ ನಡೆಯಲಿದೆ ಹಾಗು. ರೈತರಿಗೆ ನಾವು ಕ್ರಮಸಂಖ್ಯೆಯೇ ಪ್ರಕಾರದಂತೆ ಬರುವಂತೆ ಹೇಳಲಾಗಿದೆ, ಒಮ್ಮೆಲೆ ಹೆಚ್ಚು ರೈತರು ಬರುವುದರಿಂದ, ಬಂದ ರೈತರನ್ನ ವಾಪಸ್ ಕಳಿಸಲು ಆಗುವುದಿಲ್ಲ, ಇದರಿಂದ ಸಹ ಸಮಸ್ಯೆಯಾಗುತ್ತಿದೆ, ರೈತರು ಕ್ರಮ ಸಂಖ್ಯೆಯ ಪ್ರಕಾರ ಬರುವಂತೆ ಮನವಿ ಮಾಡಿದರು.
ಹೆಚ್.ಎನ್.ನಾರಾಯಣ್ ಸ್ವಾಮಿ
ಖರೀದಿ ಅಧಿಕಾರಿ ಎಪಿಎಂಸಿ