ಮಾಚಗೊಂಡನ ಹಳ್ಳಿ ಕೃಷಿ ಸಹಕಾರ ಸಂಘಕ್ಕೆ ನೂತನ ನಿರ್ದೇಶಕರ ಆಯ್ಕೆ

ದೊಡ್ಡಬಳ್ಳಾಪುರ:ಮಾಚಗೊಂಡನಹಳ್ಳಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2025 ರಿಂದ 2030ರ ಅವಧಿಯ ಆಡಳಿತ ಮಂಡಳಿಗೆ ದಿ. 2.3.2025ರಂದು ನಡೆದ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದ 12ಸ್ಥಾನಗಳಲ್ಲಿ ಎರಡು ಸ್ಥಾನಗಳು ಅವಿರೋದವಾಗಿ ಆಯ್ಕೆಯಾಗಿದ್ದು, ಉಳಿದ ಹತ್ತು ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಅದರಲ್ಲಿ ಸಾಮಾನ್ಯ ವರ್ಗದಿಂದ ಜಗನ್ನಾಥ್ ಎನ್, ಗೋಪಾಲರೆಡ್ಡಿ, ಜನಾರ್ದನ್. ಎಂ., ಮಂಜುನಾಥ್ ಎ., ಮುನಿನಾರಾಯಣ್,
ಹಿಂದುಳಿದ ಎ. ವರ್ಗದಿಂದ ವೆಂಕಟೇಶ್
ಹಿಂದುಳಿದ ಬಿ. ವರ್ಗದಿಂದ ಕೃಷ್ಣಮೂರ್ತಿ
ಮಹಿಳಾ ಮೀಸಲು ಸ್ಥಾನದಿಂದ ಭಾಗ್ಯಮ್ಮ, ಸುನಂದಮ್ಮ,
ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಮುನಿರಾಜು,
ಅವಿರೋಧ ವಾಗಿ ಪರಿಶಿಷ್ಟ ಪಂಗಡದ ಸ್ಥಾನಕ್ಕೆ ರಾಮಾಂಜಿನಪ್ಪ,
ಸಾಲಗಾರರಲ್ಲದ ಸ್ಥಾನಕ್ಕೆ ರಕ್ಷಿತ್ ಬಿ. ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಎಂ. ನಾಗಭೂಷಣ್ ವಿದ್ಯುಕ್ತವಾಗಿ ಚುನಾಯಿತರಾಗಿದ್ದಾರೆಂದು ಘೋಷಿಸಿದ್ದಾರೆ.
ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ಜಗನ್ನಾಥ್ ರವರು ಮಾತನಾಡಿ ಮಾಚಗೊಂಡನಹಳ್ಳಿ ಕೃಷಿ ಸಹಕಾರ ಸಂಘಕ್ಕೆ ನೂತನ ಕಾಯಕಲ್ಪ ನೀಡಿ ರೈತರ ಶ್ರೇಯೋಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಸಂಘದ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ. ನಮ್ಮ ಮೇಲೆ ವಿಶ್ವಾಸವಿಟ್ಟು ಅಭೂತ ಪೂರ್ವ ಬಹುಮತ ನೀಡಿ ಗೆಲ್ಲಿಸಿದ ಎಲ್ಲಾ ಮತದಾರ ರಿಗೆ ನಾನು ಅಭಾರಿಯಾಗಿದ್ದೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ನಿರ್ದೇಶಕರನ್ನು ಹಲವಾರು ಮುಖಂಡರು ಅಭಿನಂದಿಸಿದ್ದಾರೆ.