ಜಾಂಭವ ಯುವ ಸೇನೆ ಘಟಕ ಉದ್ಘಾಟನೆ

ದೊಡ್ಡಬಳ್ಳಾಪುರ : ಮೂಲಭೂತ ಸೌಕರ್ಯ ಕಲ್ಪಿಸುವ ವಿಚಾರವಾಗಿ ನಮ್ಮ ಯುವ ಸೇನೆ ಕಾನೂನಾತ್ಮಕವಾಗಿ ನಿರಂತರ ಹೋರಾಟ ನೆಡೆಸುವ ಮೂಲಕ ರಾಜ್ಯದ ದಲಿತಮೇಲೆ ನೆಡೆಯುತ್ತಿರುವ ದೌರ್ಜನ್ಯ,ದಬ್ಬಾಳಿಕೆ ಅಂತ್ಯ ಮಾಡುವ ಸಲುವಾಗಿ ಸಮುದಾಯದ ಶಕ್ತಿಯಾಗಿ ಶ್ರಮಿಸಲಿದೆ ಎಂದು ಜಾಂಭವ ಯುವ ಸೇನೆಯ ರಾಜ್ಯಾಧ್ಯಕ್ಷ ಡಾ. ಎಸ್.ಎಂ. ರಮೇಶ್ ಚಕ್ರವರ್ತಿ ತಿಳಿಸಿದರು.

ತಾಲ್ಲೂಕಿನ ಮಧುರೆ ಹೋಬಳಿಯ ಹಾಲೇನಹಳ್ಳಿ ಗ್ರಾಮದಲ್ಲಿ ಜಾಂಭವ ಯುವ ಸೇನೆಯ ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮುಖಂಡರೊಂದಿಗೆ ಜೊತೆಗೂಡಿ ಇಂದು ನಮ್ಮ ಸಂಘಟನೆಯ 672ನೇ ಶಾಖೆಯ ಉದ್ಘಾಟನೆ ಮಾಡಲಾಗಿದೆ. ಹಾಲೇನಹಳ್ಳಿ ಗ್ರಾಮದ ಮುಖಂಡರ ಸಹಕಾರದೊಂದಿಗೆ ಅದ್ದೂರಿಯಾಗಿ ನೂತನ ಶಾಖೆಯನ್ನು ಉದ್ಘಾಟನೆ ಮಾಡಲಾಗಿದೆ, ಗ್ರಾಮದ ಸಮಸ್ಯೆಗಳಾದ ಹಕ್ಕು ಪತ್ರಗಳು , ಸ್ಮಶಾನ, ಮೂಲಭೂತ ಸೌಕರ್ಯ ಸೇರಿದಂತೆ ಶಾಲಾ ಕಟ್ಟಡ ಗಳ ವಿಚಾರ ಕುರಿತಂತೆ ಸಂಬಂಧ ಪಟ್ಟ ಜಿಲ್ಲಾ ಹಾಗೂ ತಾಲ್ಲೂಕು ಅಧಿಕಾರಿಗಳನ್ನು ಒಳಗೊಂಡಂತೆ ತಾಲ್ಲೂಕಿನ ಶಾಸಕರ ಗಮನಕ್ಕೆ ತರುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಕಾರ್ಯವನ್ನು ನಮ್ಮ ಸಂಘಟನೆ ಮಾಡಲಿದೆ ಎಂದರು.

ಗ್ರಾಮದಲ್ಲಿ ನಮಗೆ ಉತ್ತಮ ತಂಡ ದೊರೆತ್ತಿದ್ದೂ, ಮುಂದೆ ಉತ್ತಮ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಸಾರ್ವಜನಿಕರಿಗೆ ಮತ್ತಷ್ಟು ಹತ್ತಿರವಾಗಲಿದೆ, ನಮ್ಮ ಹೋರಾಟ ದಲಿತ ಪರ, ನ್ಯಾಯ ಪರವಾಗಿದ್ದು, ಅಕ್ರಮ ಭೂ ಕಬಳಿಕೆ, ಮಹಿಳೆಯರ ಮೇಲೆ ದೌರ್ಜನ್ಯ, ಭ್ರಷ್ಟಾಚಾರದ ವಿರುದ್ಧ ನೊಂದವರ ಧ್ವನಿಯಾಗಿ ನಮ್ಮ ಸಂಘಟನೆ ಶ್ರಮಿಸಲಿದೆ ಎಂದರು.

ನೂತನ ಪದಾಧಿಕಾರಿಗಳ ಪಟ್ಟಿ ಇಂತಿದೆ :

ಗೌರವಾಧ್ಯಕ್ಷರಾಗಿ ಸಿ, ಬೈಲಪ್ಪ,ಅಧ್ಯಕ್ಷರಾಗಿ ಮಂಜುನಾಥ್, ವಿ,ಉಪಾಧ್ಯಕ್ಷರಾಗಿ ಜಿ. ಗಿರಿರಾಜು, ವಿ ದಾಳರಾಜು, ಪ್ರಧಾನ ಕಾರ್ಯದರ್ಶಿ.ಬಿ ಲಕ್ಷಣ. ಬಿ, ಖಜಾಂಚಿ ಜಿ.ರಮೇಶ್ ಕಾರ್ಯದರ್ಶಿ ಪೂಜಹನುಮಯ್ಯ,ಜಿ.ನಟೇಶ್
ಎನ್, ಬಸವರಾಜು, ಸಂಘಟನಾ ಕಾರ್ಯದರ್ಶಿಗಳಾಗಿ
ಬಿ.ಮುನಿರಾಜು,ಎನ್.ರಾಮಕೃಷ್ಣಯ್ಯ,ಗಂಗರಾಜು, ಅಂಜಿನ ಮೂರ್ತಿ, ಕೆ.ಮಂಜುನಾಥ ರವರನ್ನು ನೇಮಕ ಮಾಡಲಾಗಿದೆ.

ಸದಾಶಿವಆಯೋಗ ಯಥಾವತ್ ಜಾರಿಗೊಳಿಸುವಂತೆ ಮನವಿ

ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ರಾಜಕೀಯವಾಗಿ ದಲಿತ ಸಮುದಾಯವನ್ನು ಬಳಸಿಕೊಳ್ಳುವ ಮೂಲಕ ಕೇವಲ ವೋಟ್ ಪಡೆಯುವುದು ಬೇಡ ರಾಜ್ಯದ 1ಕೋಟಿ 30ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ನನ್ನ ಸಮುದಾಯದ ಧ್ವನಿಯಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇನೆ, ಜೊತೆಗೆ ರಾಜ್ಯದ ಜನತೆಯ ಪರವಾಗಿ ಒಲಮೀಸಲಾತಿ ಕುರಿತಂತೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿ ಚುನಾವಣೆಗಳು ಬರುವ ಒಳಗಾಗಿ ಮೀಸಲಾತಿ ಜಾರಿಗೊಳಿಸುವಂತೆ ಸದಾ ಶಿವ ಆಯೋಗ ಯಥಾವತ್ ಜಾರಿಗೊಳಿಸುವಂತೆ ಮನವಿ ಮಾಡುತ್ತೇನೆ, ಈ ಬಾರಿ ಯಾವುದೇ ನೆಪ ಅಥವಾ ಭರವಸೆಗೆ ಒಪ್ಪುವುದಿಲ್ಲ ಮೀಸಲಾತಿ ಜಾರಿಗೊಳಿಸದೆ ಇದ್ದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಮನೆಯ ಮುಂದೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಮಕೃಷ್ಣಪ್ಪ ಮಾತನಾಡಿ ಹಾಲೇನಹಳ್ಳಿ ಗ್ರಾಮದಲ್ಲಿ ನಮ್ಮ ಗ್ರಾಮದಲ್ಲಿ ಜಾಂಭವ ಯುವ ಸೇನೆಯ ಘಟಕ ಉದ್ಘಾಟನೆ ಮಾಡಿದ್ದಾರೆ ಇದು ಅತ್ಯಂತ ಸಂತೋಷದ ವಿಷಯವಾಗಿದ್ದು , ಈ ರೀತಿಯ ಸಂಘಟನೆಗಳು ಗ್ರಾಮದ ಅಭಿವೃದ್ಧಿ, ಶಿಕ್ಷಣ, ಅಭಿವೃದ್ಧಿ ಕುರಿತು ಚರ್ಚಿಸಲು ಸಹಕಾರಿಯಾಗಿದೆ, ಇಂದಿನಪರಿಸ್ಥಿತಿಯನ್ನು ಸಂಪೂರ್ಣವಾಗಿ ಅರಿಯಲು, ಸಮಾಜ ಕಲ್ಯಾಣ ಇಲಾಖೆಯಲ್ಲಿ ದಲಿತ ಸಮುದಾಯಕ್ಕೆ ಲಭ್ಯವಿರುವ ಯೋಜನೆಗಳ ಬಗ್ಗೆ ಅರಿವು ಪಡೆಯಲು ಈ ರೀತಿಯ ಕಾರ್ಯಕ್ರಮಗಳು ಅನುಕೂಲ ಕಲ್ಪಿಸುತ್ತವೆ ಸಂಘಟನೆ ಕೇವಲ ನಮ್ ಕಾ ವಾಸ್ತೆ ಆಗದೆ ಸ್ಥಳೀಯ ಜನರ, ಶೋಷಿತರ ಧ್ವನಿಯಾಗಿ ಶ್ರಮಿಸುವ ಅವಶ್ಯಕತೆ ಇದೆ ಎಂದರು.

ಮುಖಂಡರಾದ ನಾರಾಯಣ ಸ್ವಾಮಿ ಮಾತನಾಡಿ ನೂತನ ಗ್ರಾಮ ಶಾಖೆ ಉದ್ಘಾಟನೆಯನ್ನು ಅದ್ದೂರಿಯಾಗಿ ಮಾಡುವ ಮೂಲಕ ನಮ್ಮನ್ನು ಬರಮಾಡಿಕೊಂಡಿದ್ದಾರೆ, ಮುಂದೆ ಈ ಸಂಘಟನೆ ವತಿಯಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುವಂತಗಲಿ, ಸರ್ಕಾರದ ಅಭಿವೃದ್ಧಿ ಕಾರ್ಯಗಳು ಸರ್ವರಿಗೂ ತಲುಪಿಸುವ ಕಾರ್ಯವನ್ನು ಸಂಘದ ಪದಾಧಿಕಾರಿಗಳು ಮಾಡಲಿ ಎಂದರು.

ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ರಾದ ಡಾ.ರಮೇಶ್ ಚಕ್ರವರ್ತಿ, ಸಿ. ನಾರಾಯಣ ಸ್ವಾಮಿ, ಮಂಜುನಾಥ್, ಹೊನ್ನಾವರ ಪಂಚಾಯತಿ ಅಧ್ಯಕ್ಷರು ತಿರುಮಲ್ಲಮ್ಮ, ಕೆ ಪಿ ಸಿ ಸಿ ಸದಸ್ಯ ರಾಮಕೃಷ್ಣ, ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯರು ಚೆನ್ನಮ್ಮ ರಾಮಲಿಂಗಯ್ಯ, ಉಪಾಧ್ಯಕ್ಷೆ ಸಂದ್ಯಾ, ಕವಿತಾ, ನೆಲಮಂಗಲ ತಾಲ್ಲೂಕು ಅಧ್ಯಕ್ಷರು ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆ ಮಧು, ನೆಲಮಂಗಲ ಮಾರುತಿ, ಗೋಪಾಲಪುರ ಮುನಿರಾಜು, ಹಾಲೇನಹಳ್ಳಿ ವೆಂಕಟೇಶ್ ಹೆಚ್ ಟಿ, ಹಾಲೇನಹಳ್ಳಿ ರಮೇಶ ಎನ್ ಭೀಮ, ಹಾಲೇನಹಳ್ಳಿ ನಾರಾಯಣಕುಮಾರ್ ಹೆಚ್,ಸೇರಿದಂತೆ ಹಲವರು ಉಪಸ್ಥಿತರಿದ್ದರು