ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ಸಾಮ್ರಾಜ್ಯ ಅಭಿಮಾನದ ಸಂಕೇತ– ಧೀರಜ್ ಮುನಿರಾಜು

ದೊಡ್ಡಬಳ್ಳಾಪುರ:ಛತ್ರಪತಿ ಶಿವಾಜಿ ಮಹಾರಾಜರು,ಹಿಂದೂ ಸಾಮ್ರಾಜ್ಯ ಕ್ಷೇತ್ರಿಯ ಅಭಿಮಾನದ ಸಂಕೇತವಾಗಿದ್ದ ಶಿವಾಜಿ ಮಹಾರಾಜರು ಹೋರಾಟದ ಹೆಸರಿಗೆ ಅನ್ವರ್ಥ ರಾಗಿದ್ದರು. ಮರಾಠ ಸಮುದಾಯ ಈ ದೇಶಕ್ಕೆ ನೀಡಿರುವ ಕೊಡುಗೆ ಅಮೂಲ್ಯ ವಾಗಿದ್ದು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮರಾಠಿ ಅಭಿವೃದ್ಧಿ ನಿಗಮದ ಮೂಲಕ ಹೆಚ್ಚಿನ ಅನುದಾನಕ್ಕೆ ಸರ್ಕಾರವನ್ನು ಈ ಅಧಿವೇಶನದಲ್ಲಿ ಒತ್ತಾಯಿಸಲಾಗುವುದು ಎಂದು ಶಾಸಕ ದೀರಜ್ ಮುನಿರಾಜು ತಿಳಿಸಿದರು.

ಅವರು ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ
ವತಿಯಿಂದ ತಾಲೂಕು ಕಚೇರಿಯ ಸಭಾಂಗಣದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ 398ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮೊಘಲರ ವಿರುದ್ಧ ಸಮರ ಸಾರಿದ್ದ ಶಿವಾಜಿ ಮಹಾರಾಜರು ಹಿಂದೂ ಧರ್ಮ ಉಳಿವಿಗಾಗಿ ಶ್ರಮಿಸಿದ್ದಾರೆ. ಇತಿಹಾಸದ ಪುಟಗಳಲ್ಲಿ ತಮ್ಮ ಶೌರ್ಯ ಪರಾಕ್ರಮ ಗಳಿಂದಲೇ ಹೆಚ್ಚು ಮನ್ನಣೆ ಪಡೆದಿರುವ ಮಹಾನ್ ವ್ಯಕ್ತಿ ಶಿವಾಜಿ ಮಹಾರಾಜರು, ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ವ್ಯಕ್ತಿಯಲ್ಲ ಅವರ ನೈಪುಣ್ಯತೆ, ಆಡಳಿತ ವೈಖರಿ, ನೇರ ನಿಲುವು ಧೈರ್ಯ ನಮ್ಮೆಲ್ಲರಿಗೂ ಆದರ್ಶ, ಮರಾಠ ಸಮುದಾಯಕ್ಕೆ. ಸಿಮಿತವಾಗದೆ ರಾಷ್ಠ್ರ ನಾಯಕರಾಗಿ ಪ್ರತಿಬಿಂಬಿತವಾಗಬೇಕು ಅವರ ದೈರ್ಯ ಸಾಹಸ. ಅಡಳಿತ ವೈಖರಿ ನೇರ ನಿಲುವು ನಮಗೆಲ್ಲರಿಗೂ ಅದರ್ಶ ವಾಗಿ ಮರಾಠ ಸಮುದಾಯಕ್ಕೆ ನಿವೇಶನ ನೀಡುವ ಕುರಿತು ಸರ್ಕಾರದ ಮಟ್ಟದಲ್ಲಿ ತಿರ್ಮಾನ ವಾಗಬೇಕಿದೆ ಹಿಂದೂಳಿದ ವರ್ಗಗಳ ನಿಗಮದಿಂದ ಅವಕಾಶವಿದ್ದರೆ ಶಿವಾಜಿ ಭವನ ನಿರ್ಮಿಸಲಾಗುವುದು ಎಂದು ಹೇಳಿದರು.

ನಂತರ ದೊಡ್ಡಬಳ್ಳಾಪುರ ವಕೀಲರ ಸಂಘದ ಅಧ್ಯಕ್ಷ ಮಾವಿನ ಕುಂಟೆ ಮಾತನಾಡಿ, ಶಿವಾಜಿ ಮಹಾರಾಜರು ಹೋರಾಟದ ಸ್ಮರಣೀಯವಾಗಿದ್ದು, ಸಮುದಾಯಕ್ಕೆ ರೋಮಾಂಚನವಾಗುತ್ತದೆ. ಚಕ್ರವರ್ತಿ ಶಿವಾಜಿ ದಕ್ಷಿಣ ಭಾಗಕ್ಕೆಲ್ಲ ತನ್ನ ಸಾಮ್ರಾಜ್ಯ ವಿಸ್ತರಿಸಿದ ಆಪ್ರತಿಮ ವೀರರಾಗಿ, ಸ್ಫೂರ್ತಿಯ ಚಿಲುಮೆಯಾಗಿದ್ದರು. ಆದರೆ ಇಂದು ಧರ್ಮ ಜಾತಿಗಳ ಹೆಸರಿನಲ್ಲಿ ಮನುಷ್ಯತ್ವವನ್ನು ಮರೆಯುತ್ತಿರುವುದು ದುರಂತದ ಸಂಗತಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮರಾಠ ಸಮುದಾಯದ ಹಿರಿಯರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ ವಿನೋದ, ಸಿಬ್ಬಂದಿ ನರಸಿಂಹಮೂರ್ತಿ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ತಾಲೂಕು ಸಂಘದ ಸಹ ಕಾರ್ಯದರ್ಶಿ ವಿಠಲ್ ರಾವ್, ಮುನ್ನೋಜಿರಾವ್, ಸಂಚಾಲಕರಾದ ಎಚ್.ಪ್ರಕಾಶ್ ರಾವ್, ಹರ್ಷ ರಾವ್, ವೆಂಕಟೇಶ್ ರಾವ್, ರೇಣುಕಾ ರಾವ್, ದರ್ಗಾ ಜೋಗಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಶೋಭ ಪ್ರಕಾಶ್ ರಾವ್ ಸಮುದಾಯದ ಮುಖಂಡರು ಮತ್ತಿತರರು ಹಾಜರಿದ್ದರು.