ಯುವ ಕಾಂಗ್ರೆಸ್ ಬಲವರ್ಧನೆಗಾಗಿ ಶ್ರಮಿಸೋಣ : ಸಿ.ಯೋಗೇಂದ್ರ
   ಜಿಲ್ಲಾ ಯುವ ಕಾಂಗ್ರೆಸ್ ಪದಾಧಿ ಕಾರಿಗಳ ಪ್ರಥಮ ಸಭೆ, ನೂತನ ಪದಾಧಿಕಾರಿಗಳಿಗೆ ಸನ್ಮಾನ

ಚಾಮರಾಜನಗರ:ಫೆ. 18-ಯುವ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು, ಮುಖಂಡರು ಸಂಘಟಿತರಾಗಿ  ಮುಂಬರುವ ಜಿ.ಪಂ., ತಾ.ಪಂ, ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಶ್ರಮಿಸೋಣ ಎಂದು ಯುವ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷ ಸಿ.ಯೋಗೇಂದ್ರ ಹೇಳಿದರು.

ನಗರದ ಸತ್ತಿರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪ್ರಥಮ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲೆಯ ಪಕ್ಷದ ಶಾಸಕರು, ಮಾಜಿ ಶಾಸಕರ ಒಪ್ಪಿಗೆ ಪಡೆದು ಸಮಿತಿಗಳನ್ನು ಮಾಡಲಾಗುತ್ತದೆ ಎಂದರು.
ಜಿಲ್ಲೆಯ ಯುವ ಕಾಂಗ್ರೆಸ್ ಚುನಾವಣೆಯಲ್ಲಿ 60 ಸಾವಿರ ಮತ ಚಲಾವಣೆಯಾಗಿದ್ದು, ಯುವ ಕಾಂಗ್ರೆಸ್ 60 ಸಾವಿರ ಯುವಕರನ್ನು ತಲುಪಿದೆ. ಯುವ ಕಾಂಗ್ರೆಸ್ ಸಂಘಟನೆ ಎಂದರೆ ಸಂಪರ್ಕ ಬೆಳೆಯಸಬೇಕು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ ಯುವ ಕಾಂಗ್ರೆಸ್.ಬಲವರ್ಧನೆ ಮಾಡೋಣ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲಿಸಲು ಪಣತೊಡೋಣ ಎಂದರು.

ಸಭೆಯಲ್ಲಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವುಶಂಕರ್, ಜಿಲ್ಲಾ ಉಪಾಧ್ಯಕ್ಷರಾದ ಚಂದನ್ ಪುಟ್ಟಬುದ್ದಿ, ಸೈಯದ್ ಮುಸಾಯಿಬ್, ಮಾಜಿ ಉಪಾಧ್ಯಕ್ಷ ನಾಗೇಂದ್ರ ನಾಯಕ, ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಮೋಹನ್ ನಗು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ್, ಡಿ.ಕೆ.ಸಚಿನ್, ವಿಶ್ವ, ನಂಜುಂಡಶೆಟ್ಟಿ, ನವೀನ್, ಮಹದೇವಪ್ರಸಾದ್, ಗ್ರಾಮಾಂತರ ಅಧ್ಯಕ್ಷ ಶ್ರೀನಿವಾಸ್, ಬ್ಲಾಕ್ ಅಧ್ಯಕ್ಷರಾದ ವಿಜಯ್, ಅಜಯ್, ಉಪಾಧ್ಯಕ್ಷ ಪುರುಷೋತ್ತಮ್, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಕ್ಷಯ್‌ಕುಮಾ‌ರ್, ಉಪಾಧ್ಯಕ್ಷ ಅನಂತ್ ಕುಮಾರ್, ಗುಂಡ್ಲುಪೇಟೆ ಅಧ್ಯಕ್ಷ ಮುಸ್ತಫ್ ಅಹಮದ್, ಹನೂರು ಅಧ್ಯಕ್ಷ ಮಾದೇಶ್, ಅಧ್ಯಕ್ಷ ಬ್ಲಾಕ್ ಸಂಜಮ್, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ದರ್ಶನ್ ಉಪಾಧ್ಯಕ್ಷ ಕರೀಂ, ಇತರರು ಭಾಗವಹಿಸಿದ್ದರು.

ವರದಿ ಆರ್ ಉಮೇಶ್ ಮಲಾರಪಾಳ್ಯ