*ಬಜೆಟ್‌ ಸಂಯೋಜನೆಯಂತಹ ಪ್ರಮುಖ ತೀರ್ಮಾನ ಪ್ರಕ್ರಿಯೆಗಳಲ್ಲಿ ಅವರ ಅಭಿಪ್ರಾಯ ಮತ್ತು ಆಗ್ರಹಗಳನ್ನು ಪರಿಗಣಿಸದಿರುವುದು ಸಮಾನತೆ ಮತ್ತು ಪ್ರಜಾಪ್ರಭುತ್ವದ ಸಿದ್ಧಾಂತಗಳಿಗೆ ವಿರುದ್ಧವಾಗಿದೆ*–ಅಪ್ಸರ್ ಕೊಡ್ಲಿಪೇಟೆ

ಚಾಮರಾಜನಗರ : ಫೆಬ್ರವರಿ – 18:ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಚಾಮರಾಜನಗರ ಜಿಲ್ಲೆಯ ಬ್ರಾಂಚ್ ಪದಾಧಿಕಾರಿಗಳು ಮತ್ತು ವಿಧಾನಸಭಾ ಕ್ಷೇತ್ರ ಸಮಿತಿಯ ನಾಯಕರುಗಳಿಗೆ ಆಯೋಜಿಸಿದ್ದ ಒಂದು ದಿನದ ಲೀಡ್ – 1 ನಾಯಕತ್ವ ತರಬೇತಿ ಶಿಬಿರ ಯಶಸ್ವಿಯಾಗಿ ಜರುಗಿತು.
ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಪ್ರದಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ರವರು 2023ರ ವಿಧಾನಸಭಾ ಚುನಾವಣೆ ಮತ್ತು 2024ರ ಸಂಸದೀಯ ಚುನಾವಣೆಯ ಸಂದರ್ಭದಲ್ಲಿಯೂ ಅಲ್ಪಸಂಖ್ಯಾತ ಸಮುದಾಯವು ಬಲಿಷ್ಠ ಬೆಂಬಲ ನೀಡಿರುವುದು ಸ್ಪಷ್ಟವಾಗಿದೆ. ಆದಾಗ್ಯೂ, ರಾಜ್ಯದ ಬಜೆಟ್‌ ಸಂಯೋಜನೆಯಂತಹ ಪ್ರಮುಖ ತೀರ್ಮಾನ ಪ್ರಕ್ರಿಯೆಗಳಲ್ಲಿ ಅವರ ಅಭಿಪ್ರಾಯ ಮತ್ತು ಆಗ್ರಹಗಳನ್ನು ಪರಿಗಣಿಸದಿರುವುದು ಸಮಾನತೆ ಮತ್ತು ಪ್ರಜಾಪ್ರಭುತ್ವದ ಸಿದ್ಧಾಂತಗಳಿಗೆ ವಿರುದ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಇಂದು ಸಂಜೆ 6 ಗಂಟೆಗೆ ಅಲ್ಪಸಖ್ಯಾತರ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಸಭೆ ಇದ್ದು ಅದರಲ್ಲಿ ಅಲ್ಪಸಂಖ್ಯಾತ ಸಮುದಾಯದ ಸಚಿವರು ಮತ್ತು ಶಾಸಕರನ್ನು ಮಾತ್ರ ಆಹ್ವಾನಿಸಲಾಗಿದೆ. ಇದು ಅಲ್ಪಸಂಖ್ಯಾತ ಸಮುದಾಯದ ಮುಖಂಡರ ಹಾಗೂ ಸಂಘ-ಸಂಸ್ಥೆಗಳ ಸ್ಪಷ್ಟ ಕಡೆಗಣನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಸಮುದಾಯದ ಮುಖಂಡರು ಹಾಗೂ ಸಂಘಸಂಸ್ಥೆಗಳನ್ನು ಹೊರಗಿಟ್ಟು ನಡೆಸುವ ಈ ಸಭೆ ಕೇವಲ ಕಾಟಾಚಾರದ ಸಭೆ ಆಗಲಿದೆ.

ಸಮಯದಾಯದ ಬೇಕು-ಬೇಡಗಳ ಕುರಿತು ಸಮುದಾಯದ ಮುಖಂಡರು ಹಾಗೂ ಸಂಘ-ಸಂಸ್ಥೆಗಳ ಅಭಿಪ್ರಾಯ, ಅಹವಾಲುಗಳನ್ನು ಕೇಳಬೇಕಾಗಿರುವುದು ಮುಖ್ಯಮಂತ್ರಿಯವರ ಆದ್ಯ ಕರ್ತವ್ಯ ಉಳಿದೆಲ್ಲ ಸಮುದಾಯಗಳ ಮುಖಂಡರು, ಸಂಘ-ಸಂಸ್ಥೆಗಳನ್ನು ಆಹ್ವಾನಿಸಿ, ಅಲ್ಪಸಂಖ್ಯಾತ ಸಮುದಾಯದ ಮುಖಂಡರು, ಸಂಘ-ಸಂಸ್ಥೆಗಳನ್ನು ಕೈಬಿಟ್ಟಿರುವುದು ಸಮಾಜವಾದ, ಸಮಾನತೆಯ ಸಿದ್ಧಾಂತದ ಪ್ರಬಲ ಪ್ರತಿಪಾದಕರಾಗಿರುವ ಸಿದ್ದರಾಮಯ್ಯರಿಗೆ ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಬಿರದಲ್ಲಿ ರಾಜ್ಯ ಕಾರ್ಯದರ್ಶಿ ಅಪ್ಸರ್ ಕೆ. ಆರ್. ನಗರ, ನೂರ್ ಸೇಠ್ ,ಫರ್ದಿನ್ ರವರು ವಿವಿಧ ವಿಷಯಗಳಲ್ಲಿ ತರಬೇತಿ ನೀಡಿದರು.

ಶಿಬಿರದಲ್ಲಿ ಜಿಲ್ಲಾಧ್ಯಕ್ಷರಾದ ಖಲೀಲ್ ಅಹ್ಮದ್, ಜಿಲ್ಲಾ ಉಪಾಧ್ಯಕ್ಷರಾದ ನಯಾಜ್ ಅಹ್ಮದ್, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಗಾಳಿಪುರ, ಎಂ.ನಸ್ರುಲ್ಲಾ, ಕಾರ್ಯದರ್ಶಿಯಾದ ಸುಹೇಲ್ ಪಾಷ, ಕೋಶಾಧಿಕಾರಿ ಸೈಯದ್ ಇರ್ಫಾನ್, ನಗರ ಘಟಕ ಅಧ್ಯಕ್ಷರಾದ ಮಜರ್ ಖಾನ್ ಉಪಸ್ಥಿತರಿದ್ದರು.