ಕಮ್ಯುನಿಸ್ಟ್ ಬೆಂಬಲ ಜೆ ಡಿ ಎಸ್ ಗೆ
ದೊಡ್ಡಬಳ್ಳಾಪುರ: ಕೋಮುವಾದಿ ಬಿ.ಜೆ.ಪಿ.ಯ ದುರಾಡಳಿತ ಮಿತಿ ಮೀರಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನೈತಿಕ ಆಡಳಿತವನ್ನು ಅಂತ್ಯಗೊಳಿಸಲು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಾರತ ಕಮ್ಯುನಿಸ್ಟ್ ಪಕ್ಷ ಜ್ಯಾತ್ಯಾತೀತ ಜನತಾ ದಳಕ್ಕೆ ಬೆಂಬಲ ನೀಡುತ್ತಿದೆ ಎಂದು ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್ ಚಂದ್ರ ತೇಜಸ್ವಿ ತಿಳಿಸಿದ್ದಾರೆ.
ಇಂದು ದೊಡ್ಡಬಳ್ಳಾಪುರ ನಗರದಲ್ಲಿ ಕಮ್ಯೂನಿಸ್ಟ್ ಪಕ್ಷದಿಂದ ನೆಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಒಕ್ಕೂಟ ವ್ಯವಸ್ಥೆಯನ್ನು,ಪ್ರಾದೇಶಿಕ ಆಸ್ಮಿತೆ ಗಳನ್ನು ನಾಶ ಮಾಡುವ ಕೆಲಸವನ್ನು ಕಾರ್ಪೊರೇಟ್ ಬಂಡವಾಳ ಶಾಹಿ ಗಳು ಮಾಡುತ್ತಿವೆ ಇದಕ್ಕೆ ಬಿ ಜೆ ಪಿ ಬೆಂಬಲವಾಗಿ ನಿಂತಿದೆ.ಹಾಗಾಗಿ ಪ್ರಾದೇಶಿಕ ಪಕ್ಷಗಳನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಹಿಂದಿ ಬಾಷೆ ಏರಿಕೆ,ಜನವಿರೋದಿ ಜಿ ಎಸ್ ಟಿ ತೆರಿಗೆ ಪದ್ದತಿ ಸಹಕಾರ ಸಂಸ್ಥೆಗಳ ನಾಶ,ನಂದಿನಿ ಸಂಸ್ಥೆ ಯಂತಹ ರೈತರ ಆಸ್ಮಿತೆಯನ್ನು ಕೊನೆಗಾಣಿಸುವ ಇನ್ನೂ ಮುಂತಾದ ಜನವಿರೋದಿ ಬಿ ಜೆ ಪಿ ಆಡಳಿತವನ್ನು ವಿರೋಧಿಸುವ ಸಲುವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೊಸಕೋಟೆ ಹೊರತು ಪಡಿಸಿ ಕಮ್ಯುನಿಸ್ಟ್ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಜ್ಯಾತ್ಯಾತೀತ ಜನತಾದಳಕ್ಕೆ ಬೆಂಬಲ ನೀಡುತ್ತಿದೆ ಎಂದು ತೇಜಸ್ವಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಮ್ಯುನಿಸ್ಟ್ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸದಸ್ಯರಾದ ರುದ್ರಾರಾದ್ಯ ಪಿ ಎ ವೆಂಕಟೇಶ್ ಹಾಗು ದೊಡ್ಡಬಳ್ಳಾಪುರ ತಾಲ್ಲೂಕಿನ ಮುಖುಂಡರಾದ ಜೌಡಪ್ಪ ಮುಂತಾದವರು ಹಾಜರಿದ್ದರು.