*ಪತ್ರಕರ್ತರು ತಮ್ಮ ಮಾಧ್ಯಮ ಧರ್ಮ ಪಾಲಿಸಲಿ: ಶಿವಶರಣಪ್ಪ ವಾಲಿ*
ಬೀದರ್: ನೈಜ ಪತ್ರಕರ್ತರಾದವರು ಪ್ರಾಮಾಣಿಕ ಹಾಗೂ ನಿಸ್ಪಕ್ಷಪಾತ ಬರವಣಿಗೆ ಮುಖೇನ ತಮ್ಮ ಮಾಧ್ಯಮ ಧರ್ಮ ಪಾಲಿಸತಕ್ಕದ್ದೆಂದು ಹಿರಿಯ ಪತ್ರಕರ್ತರಾದ ಶಿವಶರಣಪ್ಪ ವಾಲಿ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಜರುಗಿದ ಪ್ರಶಸ್ತಿ ಪುರಸ್ಕೃತರಿಗಾಗಿ ಜರುಗಿದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿರುವ ಅವರು, ಪತ್ರಕರ್ತರಾದವರು ಇಂದು ವೃತ್ತಿ ಧರ್ಮ ಬಿಟ್ಟು ರಾಜಕೀಯ ಮುಖಂಡರ ಹಾಗೂ ಅಧಿಕಾರಿಗಳ ಗುಲಾಮರಂತೆ ವರ್ತಿಸುತ್ತದ್ದೇವೆ. ಪರಸ್ಪರ ದ್ವೇಷ ಸಾಧನೆಗಾಗಿ ನಮ್ಮ ನಮ್ಮಲ್ಲೆ ಬೈದಾಡಿಕೊಳ್ಳುವುದು, ಪವಿತ್ರ ಬರವಣಿಗೆ ಎಂಬುದನ್ನು ಮರೆತು ಪತ್ರಕರ್ತರಾದವರು ಪತ್ರಕರ್ತರ ಮೇಲೆ ಬರೆಯುವ ದುಷ್ಟ ಚಾಳಿಯಿಂದ ಹೊರ ಬರಬೇಕು, ಸಂಬAಧವನ್ನು ದೂರ ಸರಿಸಿ ನಮ್ಮವರು ತಪ್ಪು ಮಾಡಿದರೂ ಅವರ ವಿರೂದ್ಧ ಬರೆಯುವ ತಕತ್ತು ಬೆಳೆಸಿಕೊಂಡಾಗ ಮಾತ್ರ ಪ್ರಬುದ್ಧ ಪತ್ರಕರ್ತನಾಗಲು ಸಾಧ್ಯ ಎಂದವರು ಹೇಳಿದರು.
ಇನ್ನೋರ್ವ ಹಿರಿಯ ಪತ್ರಕರ್ತ ಗಂಧರ್ವ ಸೇನಾ ಮಾತನಾಡಿ, ಪತ್ರಕರ್ತರು ವ್ಯಕ್ತಿಯಿಂದ ಮಿಂಚದೆ ಬರವಣಿಗೆಯಿಂದ ಮಿಂಚಬೇಕು. ಮೆಚ್ಚುವಂಥ ಬರವಣಿಗೆ ಇರಬೇಕೆ ಹೊರತು ಮಿಥ್ಯ ಬರವಣಿಗೆಯಿಂದ ಸಮಾಜಕ್ಕೆ ಬೇಸರವಾಗುವ ಪತ್ರಕರ್ತನಾಗಬಾರದೆಂದು ಕಿವಿ ಮಾತು ಹೇಳಿದರು.
ಪತ್ರಕರ್ತರು ಹಾಗೂ ಮಾಜಿ ಬೂಡಾ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಪತ್ರಕರ್ತರಾದವರಿಗೆ ಹೊರಗೆ ಎಷ್ಟೆ ಸನ್ಮಾನವಿತ್ತರೂ ನಮ್ಮ ಮನೆಯಾದ ಪತ್ರಕರ್ತರ ಸಂಘದಿಂದ ಸನ್ಮಾನ ಮಾಡಿಕೊಳ್ಳುವುದು ನಮ್ಮ ಭಾಗ್ಯದಲ್ಲಿ ಬರೆದಿರಬೇಕು. ಇಂದು ಸನ್ಮಾನ ಸ್ವೀಕರಿಸುತ್ತಿರುವ ಪ್ರಶಸ್ತಿ ಪುರಸ್ಕೃತರು ನಿಜವಾದ ಧನ್ಯರು. ಈ ಕಾರ್ಯ ಮಾಡುತ್ತಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯ ಶ್ಲಾಘನಿಯ ಎಂದು ಕೊಂಡಾಡಿದರು.
ಬೀದರ್, ಕಲಬುರಗಿ ಹಾಗೂ ಯಾದಗಿರಿ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಮಲ್ಲಿಕಾರ್ಜುನ
ಬಿರಾದಾರ ಮಾತನಾಡಿ, ಯೊಗ್ಯ ಪತ್ರಕರ್ತರಿಗೆ ಪ್ರಶಸ್ತಿ ದೊರೆತಾಗ ಅವರು ಇಡೀ ಪತ್ರಕರ್ತರ ಸಮೂಹಕ್ಕೆ ಮಾದರಿಯಾಗುವರು. ಇಲ್ಲಿ ಪ್ರಶಸ್ತಿ ಪಡೆದಿರುವವರು ನೈಜ ಪತ್ರಕರ್ತರು, ಅವರನ್ನು ಸನ್ಮಾನಿಸಿರುವ ಕಾರ್ಯ ಇಡೀ ಪತ್ರಿಕಾ ರಂಗದ ಗೌರವ ಹೆಚ್ಚಿಸಿದೆ ಎಂದರು.
ಸನ್ಮಾನ ಸ್ವೀಕರಿಸಿದ ಕರ್ನಾಟಕ ಮಾದ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಶಿಕಾಂತ ಶಂಬೆಳ್ಳಿ ಮಾತನಾಡಿ, ನನ್ನ ತವರಿನಲ್ಲಿ ನನಗೆ ಯಾವುದೇ ಅರ್ಜಿ ಹಾಕದಿದ್ದರೂ ಕಳೆದ ವರ್ಷ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಈ ವರ್ಷ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿರುವುದು ನನ್ನ ಸೌಭಾಗ್ಯ. ಈ ನೆಲದ ಋಣ ನನ್ನ ಮೇಲಿದ್ದು, ಮುಂದೆಯೂ ನನ್ನ ಪ್ರಾಮಾಣಿಕ ಬರವಣಿಗೆಯಿಂದ ಜಿಲ್ಲೆಯ ಸೇವೆ ಮಾಡುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಡಿ.ಕೆ ಗಣಪತಿ ಮಾತನಾಡಿ, ನಾವು ಅಧಿಕಾರಕ್ಕೆ ಬಂದಾಗಿನಿAದ ನೊಂದ ಅನೇಕ ಪತ್ರಕರ್ತರ ಕುಟುಂಬಗಳಿಗೆ ಪರಿಹಾರ ಕೊಡಿಸುವುದು, ಹಿರಿಯ ಪತ್ರಕರ್ತರನ್ನು ಗೌರವಿಸುವುದು, ಲಿಂಗೈಕ್ಯರಾದ ಪತ್ರಕರ್ತರಿಗೆ ಶೃದ್ದಾಂಜಲಿ ಕಾರ್ಯಕ್ರಮ ಹಾಗೂ ಪ್ರಸಸ್ತಿ ಪಡೆದವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಂಡು ಅವರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಲಿದ್ದೇವೆ ಎಂದರು. ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಮಾತನಾಡಿದರು.
ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಬಸವರಾಜ ಕಾಮಶೆಟ್ಟಿ, ಜಿಲ್ಲಾ ಉಪಾಧ್ಯಕ್ದ ಶ್ರೀನಿವಾಸ ಚೌಧರಿ, ವಾರ್ತಾ ಇಲಾಖೆಯ ಅಧಿಕಾರಿ ವಿಜಯಕೃಷ್ಣ ಸೋಲಪುರ ಹಾಗೂ ಇತರರು ವೇದಿಕೆಯಲ್ಲಿದ್ದರು.
ಇದೇ ವೇಳೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದ ಶಶಿಕಾಂತ ಶೆಂಬೆಳ್ಳಿ, ಗಣರಾಜ್ಯೋತ್ಸವ ಸನ್ಮಾನ ಸ್ವೀಕರಿಸಿದ ಎಸ್.ಎಲ್.ರಾಮಕೃಷ್ಣ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಪತ್ರಿಕಾ ಮಾಲಿಕರ ಹಾಗೂ ಪತ್ರಕರ್ತರ ಆರ್ಥಿಕ, ಸಾಮಾಜಿಕ ಹಾಗೂ ಔದ್ಯಮಿಕ ಸ್ಥಿತಿಗತಿಯ ಬಗ್ಗೆ ಅಧ್ಯಯನ ಮಾಡಿ ವರದಿ ನೀಡುವ ಸಮಿತಿ ಸದಸ್ಯರಾದ ಪ್ರಥ್ವಿರಾಜ.ಎಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಣ್ಣ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಮಾಳಪ್ಪ ಅಡಸಾರೆ, ಕಕಾಪ ಸಂಘದ ಜಿಲ್ಲಾ ಉಪಾಧ್ಯಕ್ಷ ನಾಗಶೆಟ್ಟಿ ಧರಂಪುರ, ಕಾರ್ಯದರ್ಶಿ ಸುನಿಲಕುಮಾರ ಕುಲಕರ್ಣಿ, ಖಜಾಂಚಿ ಎಂ.ಪಿ ಮುದಾಳೆ, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಮೌಲಾನಾಸಾಬ್, ಗೋಪಿಚಂದ್ ತಾಂದಳೆ, ರೇವಣಸಿದ್ದಯ್ಯ ಸ್ವಾಮಿ, ಸಂತೋಷ ಚೆಟ್ಟಿ, ಚಿಟಗುಪ್ಪ ತಾಲೂಕು ಅಧ್ಯಕ್ಷ ನವಿನ ಗಂಜಿ, ಪ್ರಧಾನ ಕಾರ್ಯದರ್ಶಿ ಮುಸ್ತಾಫಾ ಖಾದ್ರಿ ಸೇರಿದಂತೆ ಜಿಲ್ಲೆಯ ಹಲವಾರು ಪತ್ರಕರ್ತರು ಕಾರ್ಯಕ್ರಮದಲ್ಲಿದ್ದರು.
ಆರಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.