ಗ್ರಾಮ ಆಡಳಿತಾದಿಕಾರಿಗಳ ಅನಿರ್ದಿಷ್ಟ ಮುಷ್ಕರಕ್ಕೆ ಕರವೇ ಬೆಂಬಲ– ಪುರುಷೋತ್ತಮ್ ಗೌಡ
ದೊಡ್ಡಬಳ್ಳಾಪುರ : ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳು 2ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರವನ್ನ ತಹಶೀಲ್ದಾರ್ ಕಛೇರಿ ಮುಂದೆ ನಡೆಸುತ್ತಿದ್ದಾರೆ, ಸರ್ಕಾರಿ ಮುಷ್ಕರನಿರತ ನೌಕರರ ಬೇಡಿಕೆಗಳನ್ನು ಅದಷ್ಟು ಬೇಗೆ ಈಡೆರಿಸುವಂತೆ ಕರವೇ ಜಿಲ್ಲಾಧ್ಯಕ್ಷರಾದ ಪುರುಷೋತ್ತಮ್ ಗೌಡ ಸರ್ಕಾರವನ್ನ ಒತ್ತಾಯಿಸಿದ್ದಾರೆ
ದೊಡ್ಡಬಳ್ಳಾಪುರ ತಹಶೀಲ್ದಾರ್ ಕಚೇರಿ ಮುಂದೆ 2ನೇ ದಿನ ಮುಷ್ಕರ ನಡೆಯುತ್ತಿದ್ದು, ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರವೇ ನಾರಾಯಣಗೌಡ ಬಣ ಪರವಾಗಿ ನಿಲ್ಲುತ್ತಾದೆ, ಸದಾ ಕನ್ನಡ ನಾಡು ನುಡಿ ಬಗ್ಗೆ ಹೋರಾಟ ಮಾಡುತ್ತಿರುವ ಸಂಘಟನೆ ಸರ್ಕಾರಿ ನೌಕರರ ನ್ಯಾಯುಯುತ ಹೋರಾಟಕ್ಕೂ ಬೆಂಬಲ ನಿಲ್ಲುವುದು, ವಾರ್ತಾಗುರು ವೆಬ್ ಸೈಟ್ ಜೊತೆ ಮಾತನಾಡಿದ ಜಿಲ್ಲಾಧ್ಯಕ್ಷರಾದ ಪುರುಷೋತ್ತಮ್ ಗೌಡ, ಆಡಳಿತ ಯಂತ್ರದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಪಾತ್ರ ಬಹಳ ಮುಖ್ಯವಾಗಿದೆ, ಅವರೀವತ್ತು ತಮ್ಮ ಬೇಡಿಕೆಗಳ ಈಡೆರಿಕೆಗಾಗಿ ಮುಷ್ಕರಕ್ಕೆ ಕುಳಿತ್ತಿರುವುದು ಬಹಳ ನೋವಿನ ವಿಚಾರವಾಗಿದೆ.
ಅವರ ಬೇಡಿಕೆಗಳು ನ್ಯಾಯಯುತವಾಗಿದೆ, 7ನೇ ವೇತನ ನೀಡುವುದು, ವಿಮಾ ಸೌಲಭ್ಯ , ಸುಸಜ್ಜಿತವಾದ ಕಟ್ಟಡ, ಇವು ಮೂಲಭೂತ ಸೌಲಭ್ಯಗಳಾಗಿದ್ದು ಇವುಗಳನ್ನು ಸರ್ಕಾರ ನೀಡು ಬೇಕು, ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆ ಈಡೇರದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅವರ ಪರವಾಗಿ ನಿಲ್ಲುವುದು, ಹಾಗೆಯೇ ಅಧಿಕಾರಿಗಳು ಭ್ರಷ್ಟಚಾರದಲ್ಲಿ ತೊಡಗಿದ್ದಾರೆ ನಮ್ಮ ಸಂಘಟನೆ ಭ್ರಷ್ಟಚಾರವನ್ನ ಬಲವಾಗಿ ಖಂಡಿಸುತ್ತದೆ ಎಂದರು