ಹುತಾತ್ಮ ಪಿ. ಎಸ್. ಐ. ಜಗದೀಶ್ ಜನ್ಮ ದಿನಾಚರಣೆ
ದೊಡ್ಡಬಳ್ಳಾಪುರ:ಸರ್ಕಾರದ ಸೇವೆ ಸಲ್ಲಿಸುತ್ತಿದ್ದಾಗ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪೋಲಿಸ್ ಅಧಿಕಾರಿ ಜಗದೀಶ್ ರವರ ಜನ್ಮದಿನಾಚರಣೆಯನ್ನು ಪಿಎಸ್ಐ.ಜಗದೀಶ್ ಸೇವಾ ಟ್ರಸ್ಟ್ ವತಿಯಿಂದ ಆಚರಣೆ ಮಾಡಲಾಯಿತು.
ನಗರದ ಹೊರವಲಯದ ಡಿ ಕ್ರಾಸ್ ಬಳಿ ಇರುವ ಪಿ ಎಸ್ ಐ ಜಗದೀಶ್ ವೃತ್ತದಲ್ಲಿ ಅ ಯೋಜನೆ ಮಾಡಲಾದ ಕಾರ್ಯಕ್ರಮದಲ್ಲಿ ದುಷ್ಕರ್ಮಿಗಳಿಂದ ಹುತಾತ್ಮ ರಾದ ದಿ.ಜಗದೀಶ್ ರವರ ಜನ್ಮ ದಿನಾಚರಣೆ ಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಪೋಲಿಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಪೋಲಿಸ್ ಸಿಬ್ಬಂದಿಗಳಿಗೆ
ಸನ್ಮಾನ ಮಾಡಿ ಗೌರವಿಸಲಾಯಿತು ಸಿಬ್ಬಂದಿಗಳಾದ ಪುಟ್ಟಸ್ವಾಮಯ್ಯ .ಪ್ರಸನ್ನಕುಮಾರ್. ರಂಗಸ್ವಾಮಿ ನಾಗರಾಜ್ ಲಕ್ಷ್ಮೀ ದಳವಾಯಿ ಅವರನ್ನು ಸನ್ಮಾನಿಸಲಾಯಿತು.
ಪಿಎಸ್ಐ ದಿ. ಜಗದೀಶ್ ರವರ ಜನ್ಮ ದಿನಾಚರಣೆಯಲ್ಲಿ ಇನ್ಸ್ಪೆಕ್ಟರ್ ಗಳಾದ ಅಮರೇಶ್ ಗೌಡ. ಸಾಧಿಕ್ ಪಾಷ ನಗರ ಸಭೆ ಪೌರಾಯುಕ್ತ ಕಾರ್ತೀಕೇಶ್ವರ್ ನಗರ ಠಾಣೆ ಎಸ್ ಐ. ಕೃಷ್ಣಪ್ಪ ಜಗದೀಶ್ ಫೌಂಡೇಷನ್ ಟ್ರಸ್ಟ್ ರಾಜಘಟ್ಟ ರವಿ ಪ್ರದಾನ ಕಾರ್ಯದರ್ಶಿ ರೈಲ್ವೇ ಸ್ಟೇಷನ್ ಮಲ್ಲೇಶ್ . ಉಪಾಧ್ಯಕ್ಷ ಪರಮೇಶ್ ಹಮಾಮ್. ಚಂದ್ರು ಶ್ರೀ ನಗರದ ಮನು. ನವೀನ್. ಕ್ಷತ್ರಿಯ ಮೋಹನ್ ಸಾರ್ವಜನಿಕರು ಹಾಜರಿದ್ದರು.