ದೆಹಲಿ ಅಪೂರ್ವ ಗೆಲುವಿಗೆ ತಾಲೂಕು ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

ದೊಡ್ಡಬಳ್ಳಾಪುರ:ರಾಷ್ಟ್ರ ರಾಜ್ಯದಾನಿ ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಭೂತ ಪೂರ್ವ ಗೆಲುವು ಸಾಧಿಸಿರುವುದಕ್ಕೆ ತಾಲ್ಲೂಕಿನ ಬಿಜೆಪಿ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರು ನಗರದ ಹಳೇಯ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಣೆಯೊಂದಿಗೆ ಜಯಘೋಷ ಹಾಕಲಾಯಿತು.

ದೇಶವನ್ನು ಮುನ್ನೆಡೆಸುವ ದೇಶದ ಪ್ರಧಾನಿ ನರೇಂದ್ರ ಮೋದಿ ಯವರ ಸರ್ಕಾರದ ಯೋಜನೆಗಳು ಹಾಗು ಸುಭದ್ರವಾದ ಸರ್ಕಾರ ನೀಡುವಲ್ಲಿ ಬಿಜೆಪಿ ಪಕ್ಷ ಜನರಿಗೆ ಆಶಾ ದಾಯಿಕವಾಗಿದೆ ಅದರಿಂದ ದೆಹಲಿಯಲ್ಲಿ ದೊಡ್ಡ ಮಟ್ಟದ ಜಯ ಸಾಧಿಸಿದೆ.ಇದು ಬಿಜೆಪಿ ಪಕ್ಷ ನೀಡಿರುವ ಯೋಜನೆಗಳು ಸಕಾರಾತ್ಮಕವಾಗಿ ಸಾಮಾನ್ಯ ಜನರಿಗೆ ತಲುಪುವಲ್ಲಿ ಯಶಸ್ಸು ಕಂಡಿದೆ
ಆಮ್ ಆದ್ಮಿ ಪಕ್ಷದ ಭ್ರಷ್ಟ ಆಡಳಿತಕ್ಕೆ ತಕ್ಕ ಪಾಠವಾಗಿದೆ ಹಾಗು ಮುಂದಿನ ದಿನಗಳಲ್ಲಿ ಕರ್ನಾಟಕ ದಲ್ಲಿಯೂ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುತ್ತದೆ ನಮ್ಮಲ್ಲಿನ ಪಕ್ಷದಲ್ಲಿ ನಾಯಕರುಗಳು ಕುಂದು ಕೊರತೆಗಳನ್ನು ನಿವಾರಣೆ ಮಾಡಿಕೊಂಡು ಪಕ್ಷವು ಬಲಿಷ್ಠವಾದಗಲಿದೆ ಎಂದು ಪಕ್ಷದ ಹಿರಿ ಮುಖಂಡರು ತಿಳಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರದಾನ ಕಾರ್ಯದರ್ಶಿ ಹಾಗು ನಗರ ಸಭೆಯ ಸದಸ್ಯ ಬಂತಿ ವೆಂಕಟೇಶ್ ನಗರ ಸಭಾ ಸದಸ್ಯರುಗಳಾದ ಪದ್ಮನಾಭ. ಭಾಸ್ಕರ್. ಹಿರಿಯ ಮುಖಂಡ ಟಿ ಕೆ. ವೆಂಕಟಾಚಲಪ್ಪ. ರಾಮ ಕಿಟ್ಟಿ. ಶ್ರೀಮತಿ ವತ್ಸಲಾ. ಗೋಪಿ. ಎಲ್ ಐ ಸಿ ಮಂಜುನಾಥ್ ಹಾಗು ತಾಲ್ಲೂಕು ಪ್ರದಾನ ಕಾರ್ಯದರ್ಶಿಗಳು ಮಹಿಳಾ ಮೋರ್ಚಾ ಪದಾಧಿಕಾರಿಗಳು. ಒಬಿಸಿ ಮೋರ್ಚಾ ಪದಾಧಿಕಾರಿಗಳು ಹಿರಿಯ ಹಾಗು ಕಿರಿಯ ಮುಖಂಡರು ಹಾಗು ಕಾರ್ಯಕರ್ತರು ಹಾಜರಿದ್ದರು