ನಗರ ಸಭೆಯಲ್ಲಿ ಅನಧಿಕೃತ ನೌಕರರು.. ಸೂಕ್ತ ಕ್ರಮಕ್ಕೆ ಒತ್ತಾಯಿಸಿದ ಕರ್ನಾಟಕ ನವ ನಿರ್ಮಾಣ ಸೇನೆ
ದೊಡ್ಡಬಳ್ಳಾಪುರ:ನಗರಸಭೆಯಲ್ಲಿ ನೇಮಕಾತಿ ಇಲ್ಲದ ಅನಧಿಕೃತ ವ್ಯಕ್ತಿಗಳಿಂದ ಕೆಲಸ ಮಾಡಿಕೊಳ್ಳುತ್ತಿರುವುದು ಕಂಡುಬಂದಿದ್ದು ಇದನ್ನು ಖಂಡಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಸರ್ಕಾರದ ನೇಮಕಾತಿ ಇಲ್ಲದ ಅನಧಿಕೃತ ವ್ಯಕ್ತಿಗಳ ಕೈಯಲ್ಲಿ ಕೆಲಸ ಮಾಡಿಸಿ ಕೊಳ್ಳುತ್ತಿದ್ದಾರೆ ಇದರಿಂದ ನಗರಸಭೆಯ ದಾಖಲೆಗಳು ಹೊರಗಿನ ಕೆಲವು ಆಯ್ದ ವ್ಯಕ್ತಿಗಳಿಗೆ ರವಾನೆಯಾಗುತ್ತಿದೆ ಇದಲ್ಲದೆ ಅನಧಿಕೃತ ನೌಕರರು ಅಧಿಕಾರಿಗಳ ಏಜೆಂಟರು ಗಳಾಗಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ತಲುಪಿಸುವಲ್ಲಿ ನಿರತರಾಗಿದ್ದು ನಗರಸಭೆ ಅವರದೇ ಆಡಳಿತ ವೆಂಬಂತೆ ಸ್ವೇಚ್ಛೆ ರೀತಿಯಲ್ಲಿ ವರ್ತನೆ ತೋರುತ್ತಿದ್ದಾರೆ ಇದರಿಂದ ನಗರ ಸಭೆಯಲ್ಲಿ ದಿನ ಬೆಳಗಾಯಿತು ಎಂದರೆ ಖಾತೆ ಇನ್ನಿತರ ದಾಖಲೆಗಳಿಗೆ ಪಡೆಯಲು ಮಧ್ಯವರ್ತಿಗಳೆ ತುಂಬಿರುತ್ತಾರೆ ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಯಾಗುತ್ತಿದ್ದರು ಇಲಾಖಾಧಿಕಾರಿಗಳು ಕಂಡರು ಕಾಣದಂತೆ ಮೌನ ವಹಿಸುತ್ತಿರುವುದು ಜನ ಸಾಮಾನ್ಯರಿಗೆ ಅನ್ಯಾಯ ವಾಗುತ್ತಿದೆ ಇದರಿಂದ ಯಾವುದೆ ನಗರಸಭೆ ಇಲಾಖೆ ಕೆಲಸ ಮಾಡಿಸ ಬೇಕಾದರೆ ಎರಡು ರಿಂದ ಮೂರು ರಷ್ಟು ಹಣ ವಸೂಲಿ ಮಾಡುತ್ತಿರುವುದು ಕಂಡು ಬಂದಿದ್ದು ಅದರಿಂದ. ಅನಧಿಕೃತ ವ್ಯಕ್ತಿಗಳನ್ನು ತೆರವು ಮಾಡಿ ಮಧ್ಯವರ್ತಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ನಗರಸಭೆಯ ಮುಂದೆ ಪ್ರತಿಭಟನೆಗೆ ಮುಂದಾಗ ಬೇಕಾಗುತ್ತದೆ ಎಂದು ಪೌರಾಯುಕ್ತ ರವರಿಗೆ ಮನವಿ ಸಲ್ಲಿಸಲಾಯಿತು ಎಂದು ಅಧ್ಯಕ್ಷ ಮುರಳಿ ಮೋಹನ ತಿಳಿಸಿದ್ದಾರೆ.