ಜಿ ಸಿ ಬಿ ಪಕ್ಷಗಳಿಂದ ಚುನಾವಣೆಯಲ್ಲಿ ಅಕ್ರಮ ನೆಡೆಯುವ ಶಂಕೆ
ದೊಡ್ಡಬಳ್ಳಾಪುರ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರಿಗೆ ಹಣ ಹೆಂಡ ಹಂಚಿ ದಾರಿ ತಪ್ಪಿಸುವ ಕೆಲಸವನ್ನು ಜೆ ಸಿ ಬಿ ಪಕ್ಷಗಳು ಮಾಡುತ್ತಿವೆ ಎಂದು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅಮ್ ಆದ್ಮಿ ಪಕ್ಷದ ಅಭ್ಯರ್ಥಿ ಪುರುಷೋತ್ತಮ್ ಆಕ್ರೋಶ ವ್ಯಕ್ತಪಡಿಸಿದರು.
ಆಮ್ ಆದ್ಮಿ ಪಕ್ಷದಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪುರುಷೋತ್ತಮ್ ಮಾತನಾಡಿ ಇತ್ತೀಚಿಗೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆ ನೆಡೆಯುತ್ತಿದ್ದು ಕ್ಷೇತ್ರದ ಜನ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಲಿದ್ದಾರೆ ಕ್ಷೇತ್ರದ ಪ್ರತಿ ಮನೆ ಮನೆಗು ಪಕ್ಷದ ಕಾರ್ಯಕರ್ತರು ಪ್ರಚಾರದ ಮೂಲಕ ಬೇಟಿ ನೀಡಿದ್ದಾರೆ. ನಾನು ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಬೇಟಿ ನೀಡಿದ ಸಂದರ್ಭದಲ್ಲಿ ನನ್ನ ಬಗ್ಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ ಆದರೆ ಕ್ಷೇತ್ರದಾದ್ಯಂತ ಮತದಾರರಿಗೆ ಪ್ರಮುಖ ಪಕ್ಷಗಳು ಆಮಿಷಗಳನ್ನು ಒಡ್ಡುವ ಮೂಲಕ ಮತದಾರರ ದಿಕ್ಕು ತಪ್ಪಿಸುತ್ತಿದ್ದಾರೆ. ಚುನಾವಣೆಗೆ ಒಂದೆರೆಡು ದಿನಗಳ ಸಮೀಪದಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಂಭವವಿದೆ ಇದಕ್ಕೆ ಸಂಭಂದಿಸಿದವರು ಕಂಡು ಕಾಣದಂತೆ ವರ್ತಿಸುತಿದ್ದಾರೆ ಈ ಬಗ್ಗೆ ಅಬಕಾರಿ,ಪೋಲಿಸ್ ಇಲಾಖೆ,ಚುನಾವಣಾ ಮುಖ್ಯಸ್ಥರಿಗೆ ನಮ್ಮ ಪಕ್ಷದ ವತಿಯಿಂದ ದೂರು ನೀಡಿದ್ದೇವೆ ಮುಂಬರುವ ದಿನಗಳಲ್ಲಿ ಸಂಬಂಧ ಪಟ್ಟ ಇಲಾಖೆಗಳು ಕ್ಷೇತ್ರಾದ್ಯಂತ ಕಣ್ಗಾವಲು ಇಡಬೇಕು ಆದರೆ ಅದು ನೆಡೆಯುತ್ತಿಲ್ಲವೆಂದು ಪುರುಷೋತ್ತಮ್ ಬೇಸರ ವ್ಯಕ್ತಪಡಿಸಿದ್ದಾರೆ.