ಹುಲಕಡಿ ವೀರಭದ್ರಸ್ವಾಮಿ ಸ್ವಾಮಿ ಸನ್ನಿದಿಯಲ್ಲಿ 44 ನೇ ರಥೋತ್ಸವ

ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ತಾಲ್ಲೂಕಿನ,ದೊಡ್ಡ ಬೆಳವಂಗಲ ಹೋಬಳಿ ಹಣಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಕಡಿ ಬೆಟ್ಟದ ವೀರಭದ್ರಸ್ವಾಮಿ ಕ್ಷೇತ್ರದಲ್ಲಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ವತಿಯಿಂದ ರಥಸಪ್ತಮಿ ಅಂಗವಾಗಿ ಜ‌.5 ರಂದು ವೀರಭದ್ರಸ್ವಾಮಿ ಹಾಗು ಪ್ರಸನ್ನ ಭದ್ರಕಾಳಮ್ಮ 44 ನೇ ವಾರ್ಷಿಕ ಮಹಾ ರಥೋತ್ಸವವನ್ನು ನೆರವೇರಿಸಲಾಯಿತು.

ಹುಲುಕಡಿ ವೀರಭದ್ರ ಸ್ವಾಮಿಯ ರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು ರಥಕ್ಕೆ ಬಾಳೆಹಣ್ಣು ದವನ ಅರ್ಪಿಸಿ ಧನ್ಯತೆ ಮೆರದರು
ಈ ಜಾತ್ರಾ ಮಹೋತ್ಸವದಲ್ಲಿ ಕಲಾ ತಂಡಗಳಿಂದ ಸಾಂಸ್ಕೃತಿ ಕಾರ್ಯಕ್ರಮಗಳು ನೆಡೆದವು ಡೂಳ್ಳು ಕುಣಿತ ವೀರಗಾಸೆ ಕಂಸಾಳೆ ಜಾತ್ರೆಗೆ ವಿಶೇಷ ಆಕರ್ಷಣೆಯಾಗಿತ್ತು ರಥೋತ್ಸವದ ಅಂಗವಾಗಿ ಮುಂಜಾನೆಯಿಂದ ರುದ್ರಾಭಿಷೇಕ ರಥೋತ್ಸವದ ಅಂಗವಾಗಿ ಹವನ ಹೋಮ ವಿಶೇಷ ಪೂಜಾ ಕಾರ್ಯಕ್ರಮಗಳು ನೆಡೆಸಲಾಯಿತು.
ಪೂರ್ವ ಇತಿಹಾಸ ಹೊಂದಿರುವ ಪ್ರಸಿದ್ದ ಹುಲುಕಡಿ ಬೆಟ್ಟದ ಮೇಲಿನ ವೀರಭದ್ರಸ್ವಾಮಿ ದೇವಾಲಯಕ್ಕೆ ಬೇಟಿ ನೀಡಿ ಶ್ರೀ ಸ್ವಾಮಿಯ ದರ್ಶನ ಪಡೆದರು.
ಈ ಕಾರ್ಯದಲ್ಲಿ ದೊಡ್ಡ ಗುಣಿ ಶಾಖಾಮಠದ ಶ್ರೀ ರೇವಣ ಸಿದ್ದೇಶ್ವೇರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ದಲ್ಲಿ ಆಶೀರ್ವಾಚನ ನೀಡಿದರು.

ರಥೋತ್ಸವಕ್ಕೆ ಬಂದ ಭಕ್ತರಿಗೆ ಮಾಜಿ ಶಾಸಕ ವೆಂಕಟರಮಣಯ್ಯ ರವರಿಂದ ಅನ್ನದಾನ, ಜೆಡಿಎಸ್ ರಾಜ್ಯ ಪ್ರದಾನ ಕಾರ್ಯದರ್ಶಿ ಹರೀಶ್ ಗೌಡ ಭಕ್ತಾಧಿಗಳಿಗೆ ದಣಿವು ತೀರಿಸಿ ಕೊಳ್ಳಲು
ನೀರಿನ ಪೂರೈಕೆ ಬಮೂಲ್ ನಿರ್ದೇಶಕ ಬಿ. ಸಿ ಆನಂದ್ ರವರಿಂದ ಮಜ್ಜಿಗೆ ಪಾನಕ ವಿತರಣೆ ಮಾಡಲಾಗಿತ್ತು.
ರಥೋತ್ಸವ ನಂತರ ರಥಾಂಗ ಹೋಮ ಕಳಸ ಪೂಜೆ ಅಗ್ನಿಕುಂಡ ಪೂಜೆ ಉಯ್ಯಾಲೋತ್ಸವ ವೀರಭದ್ರ ವೇಷದ ವೀಲಗಾಸೆಯೊಂದಿಗೆ ಅಗ್ನಿಕುಂಡ ಹಾರುವುದು ಹಾಗು ಅಕ್ಕಿಪೂಜೆ ಪ್ರಸನ್ನ ಭದ್ರಕಾಳಮ್ಮ ವೀರಭದ್ರಸ್ವಾಮಿ ಕಲ್ಯಾಣೋತ್ಸವ ದೀಪಾರಾಧನೆ ನೆಡೆದವು. ರಥೋತ್ಸವ ಬಂದ ಭಕ್ತರು
ಈ ವಿಶೇಷ ಕಾರ್ಯಕ್ರಮಗಳನ್ನು ಕಣ್ತುಂಬಿ ಕೊಂಡರು.