ಕೆಸ್ತೂರು ವಿ.ಎಸ್.ಎಸ್.ಎನ್ ಅಧ್ಯಕ್ಷರಾಗಿ ಎನ್.ಆರ್.ಲಕ್ಷ್ಮೀ ನಾರಾಯಣಗೌಡ ಆಯ್ಕೆ
ದೊಡ್ಡಬಳ್ಳಾಪುರ : ಕೆಸ್ತೂರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನೇರಳಘಟ್ಟದ ಎನ್.ಆರ್.ಲಕ್ಷ್ಮೀನಾರಾಯಣಗೌಡ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ದೇವರಾಜು.ಎನ್ ಆಯ್ಕೆಯಾದರು, ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಮುಖಂಡರು ಅಭಿನಂದನೆ ಸಲ್ಲಿಸಿದರು
ದೊಡ್ಡಬಳ್ಳಾಪುರ ತಾಲೂಕಿನ ಕೆಸ್ತೂರು VSSN ಸಂಘಕ್ಕೆ ಅಧ್ಯಕ್ಷರಾದ ಹೊನ್ನಮ್ಮ ರಾಜೀನಾಮೆ ನೀಡಿದ ಹಿನ್ನಲೆ ಇಂದು  ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು, 11 ಸಂಖ್ಯಾ ಬಲವಿರುವ ಸಂಘದಲ್ಲಿ 7 ಮತಗಳನ್ನ ಪಡೆದ ಎನ್.ಆರ್.ಲಕ್ಷ್ಮೀನಾರಾಯಣಗೌಡ ಅಧ್ಯಕ್ಷರಾಗಿ ಆಯ್ಕೆಯಾದರು.
ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಜೆಡಿಎಸ್ ಮುಖಂಡರಾದ ಹುಸ್ಕೂರ್ ಆನಂದ್ , ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಪಕ್ಷಾತೀತವಾಗಿ ಗುಂಪು ಮಾಡಿಕೊಂಡು ಚುನಾವಣೆಯಲ್ಲಿ ಗೆಲುವು ಸಾಧಿಸಿದೆವು, ಈ ಚುನಾವಣೆಯ ನಮ್ಮ ಗುಂಪಿನ  ಇಬ್ಬರು ಅಧಿಕಾರದ ಆಸೆಗೆ ವಿರೋಧಿ ಗುಂಪು ಸೇರಿಕೊಂಡರು ಆದರು ಸಹ ನಮ್ಮ ಗುಂಪಿನ ಲಕ್ಷ್ಮೀನಾರಾಯಣಗೌಡ ಅಧ್ಯಕ್ಷರಾಗಿ ಗೆಲುವು ಸಾಧಿಸಿದ್ದಾರೆ, ನನ್ನ ಮಾತಿಗೆ ಬೆಲೆ ಕೊಟ್ಟು ಷೇರುದಾರರು ಮತ್ತು ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸುವೆ ಎಂದರು, ಈ ಹಿಂದೆ ಹೇಳಿದಂತೆ ಸಂಘಕ್ಕೆ 5 ಲಕ್ಷ  ರೂಪಾಯಿ ಕೂಡುವುದ್ದಾಗಿ ಹೇಳಿದರು
ನೂತನ ಅಧ್ಯಕ್ಷರಾದ ಲಕ್ಷ್ಮೀನಾರಾಯಣಗೌಡ ಮಾತನಾಡಿ, ಆನಂದಣ್ಣ ನುಡಿದಂತೆ ನಡೆದರು, ಅವರ ಹಾದಿಯಲ್ಲಿ ನಾನು ಸಹ ನಡೆಯುವೆ, ಕೇವಲ ಒಕ್ಕಲಿಗರೇ ಅಧ್ಯಕ್ಷರಾಗುವುದು ಬೇಡ,  ಹಿಂದುಳಿದ ಜಾತಿಯವರಿಗೂ ಅವಕಾಶ ನೀಡಬೇಕು, ಮುಂದಿನ ಅವಧಿಯಲ್ಲಿ ಹಿಂದುಳಿದ ವರ್ಗದವರು ಅಧ್ಯಕ್ಷರಾಗಲು ನಾನು ರಾಜೀನಾಮೆ ನೀಡಿ ಮಾತಿಗೆ ಬದ್ಧನಾಗಿ ನಡೆದುಕೊಳ್ಳುವೆ, ಆನಂದಣ್ಣ,  ಬಚ್ಚೇಗೌಡ, ನರಸಿಂಹಮೂರ್ತಿಯವರ ಮಾರ್ಗದರ್ಶನದಲ್ಲಿ ರೈತರಿಗೆ ಸಾಲ ನೀಡುವ ಕೆಲಸ ಮಾಡುವುದ್ದಾಗಿ ಹೇಳಿದರು
ಮಾಜಿ VSSN  ಅಧ್ಯಕ್ಷರಾದ ಕೆ.ವಿ.ಬಚ್ಚೇಗೌಡ ಮಾತನಾಡಿ,
ರೈತರ ದುಡ್ಡು ವ್ಯರ್ಥವಾಗಬಾರದೆಂಬ ಕಾರಣಕ್ಕೆ ಅವಿರೋಧವಾಗಿ ಅಧ್ಯಕ್ಷರನ್ನ ಆಯ್ಕೆ ಮಾಡಲು ಪ್ರಯತ್ನ ನಡೆಸಿದೆವು, ಕೆಲವರ ಪಿತೂರಿಯಿಂದಾಗಿ ಅವಿರೋಧವಾಗಿ ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ.  ಹುಸ್ಕೂರ್ ಆನಂದ್ ರವರ ನೇತೃತ್ವ ಮತ್ತು ರೈತರ ಬೆಂಬಲದಿಂದಾಗಿ ಚುನಾವಣೆಯಲ್ಲಿ ನಮ್ಮ ಗುಂಪು ಬಹುಮತ ನಡೆಯಿತು ಮತ್ತು ಆನಂದ್ ರವರ ತಾಯಿ ಹೊನ್ನಮ್ಮ ಅವಿರೋಧವಾಗಿ ಆಯ್ಕೆಯಾದರು, ಈ ಬಾರಿಯೂ ಸಹ ಅವಿರೋಧವಾಗಿ ಆಯ್ಕೆ ಮಾಡಲು ಪ್ರಯತ್ನ ಮಾಡಿದವರು ಆದರೆ ಕೆಲಸ ಸಣ್ಣತನದಿಂದ ಚುನಾವಣೆ ನಡೆಸಬೇಕಾಯ್ತು, ಈ ಬಾರಿಯೂ ಸಹ ನಮ್ಮ ಗುಂಪಿನ ಲಕ್ಷ್ಮೀ ನಾರಾಯಣಗೌಡ ಅಧ್ಯಕ್ಷರಾಗಿ ಗೆಲವು ಸಾಧಿಸಿದ್ದಾರೆ, ನೂತನ ಅಧ್ಯಕ್ಷರಿಗೆ ನನ್ನ ಕಿವಿಮಾತು, ರೈತರಿಗೆ ಸಾಲ ನೀಡುವಾಗ ಯಾವುದೇ ನಿಯಮಗಳನ್ನ ಪರಿಗಣಿಸದೆ ಸಾಲ ನೀಡಬೇಕು, ಹಾಗೆಯೇ ಮುಂದಿನ ಅವಧಿಯಲ್ಲಿ ಮತ್ತೂಬ್ಬರಿಗೆ ಅಧ್ಯಕ್ಷರಾಗಲು ಅವಕಾಶ  ನೀಡಬೇಕೆಂದರು.
ಮುಖಂಡರಾದ ನರಸಿಂಹಮೂರ್ತಿ ನೇರಳಘಟ್ಟ ಮಾತನಾಡಿ, ಹುಸ್ಕೂರ್ ಆನಂದಣ್ಣ ಕೊಟ್ಟ ಮಾತಿನಂತೆ  ತಮ್ಮ ತಾಯಿ ಹೊನ್ನಮ್ಮರವರಿಂದ ರಾಜೀನಾಮೆ ಕೊಡಿಸಿ ಹೊಸಬರು ಅಧ್ಯಕ್ಷರಾಗಲು ಕಾರಣರಾಗಿದ್ದಾರೆ ಅವರಿಗೆ ನಾನು ಅಭಿನಂಧನೆ ಸಲ್ಲಿಸುವೆ, ಕಾಂಗ್ರೆಸ್ ಮುಖಂಡರಾದ ಚುಂಚೇಗೌಡರು, ಆರ್.ಜಿ.ವೆಂಕಟಚಾಲಯ್ಯ ಅಳಿಯ ರವಿ ಸಹಕಾರದಿಂದ ಚುನಾವಣೆಯಲ್ಲಿ ಬಹುಮತ ಪಡೆಯಲು ಸಾಧ್ಯವಾಗಿತು ಎಂದರು.
 ಈ ವೇಳೆ ನಿರ್ದೇಶಕರಾದ ಹೊನ್ನಮ್ಮ, ಹರೀಶ್, ಎಮ್. ಉಗ್ರೇಗೌಡ,
ರಮೇಶ್.ಹೆಚ್.ಕೆ,  ಕೆ. ಹನುಮಯ್ಯ, ಮಾಜಿ ಅಧ್ಯಕ್ಷರಾದ
ನಂಜುಂಡಪ್ಪ ಶ್ರವಣೂರು, ಮುಖಂಡರಾದ ನಾಗರಾಜು ಕಲ್ಲುದೇವನಹಳ್ಳಿ,
ರಾಮಮೂರ್ತಿ ನೇರಳಘಟ್ಟ,ಇದ್ದರು